ಅರಿಯಡ್ಕ: ಶೇಖಮಲೆ ನಿವಾಸಿ ಚೋಮ ಎಸ್ ರವರ ಧರ್ಮಪತ್ನಿ ಮೀನಾಕ್ಷಿ (68 ವ) ರವರು ಅಲ್ಪಕಾಲದ ಅಸೌಖ್ಯದಿಂದ ಡಿ.22ರಂದು ಪುತ್ತೂರು ಧನ್ವಂತರಿ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಪುತ್ರ ಅರಿಯಡ್ಕ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಸುಂದರ ಶೇಖಮಲೆ, ಪುತ್ರಿ ಸುಶೀಲ ಮತ್ತು ದೇವಕಿ, ಅಳಿಯಂದಿರು, ಸೊಸೆ, ಮೊಮ್ಮಕ್ಕಳು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ. ಮೃತರ ಮನೆಗೆ ಅರಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್ ಮಣಿಯಾಣಿ ಕುತ್ಯಾಡಿ, ಸದಸ್ಯ ಹರೀಶ್ ರೈ ಜಾರತ್ತಾರು, ಮಾಜಿ ಸದಸ್ಯ ತಿಲಕ್ ರೈ ಕುತ್ಯಾಡಿ, ಶರತ್ ಮಡ್ಯಂಗಳ, ಪ್ರಮೋದ್ ರೈ ಪನೆಕ್ಕಳ, ಪ್ರವೀಣ್ ರೈ ಪನೆಕ್ಕಳ ಮುಂತಾದವರು ಸಂತಾಪ ಸೂಚಿಸಿದ್ದಾರೆ.