ನೆಲ್ಯಾಡಿ: ಧರ್ಮಸ್ಥಳ ಗ್ರಾಮದ ಕಲ್ಲೇರಿ ಎಂಬಲ್ಲಿ ಬೈಕ್ ಹಾಗೂ ಕಾರಿನ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರರಾದ ಕಡಬ ತಾಲೂಕಿನ ಮರ್ದಾಳ ಬಂಟ್ರ ಗ್ರಾಮದ ನಿವಾಸಿಗಳಿಬ್ಬರು ಗಾಯಗೊಂಡಿರುವ ಘಟನೆ ಡಿ.24ರಂದು ಸಂಜೆ ನಡೆದಿದೆ.
ಬಂಟ್ರ ಕರಂಬಿತ್ತಲ್ ನಿವಾಸಿ ಲೋಕಯ್ಯ ಗೌಡ ಎಂಬವರು ಅವರ ಸಹದ್ಯೋಗಿ ವಿಶ್ವನಾಥ ಎಂಬವರ ಬೈಕ್(ಕೆಎ 70, ಎ 9741)ನಲ್ಲಿ ಸಹ ಸವಾರನಾಗಿ ಧರ್ಮಸ್ಥಳದ ಅನ್ನಛತ್ರ ಕಡೆಯಿಂದ ಕಲ್ಲೇರಿ ಕಡೆಗೆ ಏಕಮುಖ ಸಂಚಾರ ರಸ್ತೆಯಲ್ಲಿ ವಿರುದ್ಧ ದಿಕ್ಕಿನಿಂದ ಹೋಗುತ್ತಿದ್ದ ವೇಳೆ ಎದುರಿನಿಂದ ಬರುತ್ತಿದ್ದ ಕಾರು (ಕೆಎ 01, ಎಂಯು 9566) ನಡುವೆ ಡಿಕ್ಕಿ ಸಂಭವಿಸಿದೆ.
ಘಟನೆಯಲ್ಲಿ ಸಹಸವಾರ ಲೋಕಯ್ಯ ಗೌಡ ಅವರ ಕಾಲಿಗೆ ಗಾಯವಾಗಿದ್ದು ಸವಾರ ವಿಶ್ವನಾಥ ಗೌಡರವರಿಗೆ ತಲೆಗೆ ಗುದ್ದಿದ ಗಾಯವಾಗಿದೆ. ಲೋಕಯ್ಯ ಗೌಡರವರು ಉಜಿರೆಯ ಎಸ್ಡಿಎಂ ಆಸ್ಪತ್ರೆಗೆ ದಾಖಲಾಗಿದ್ದಾರೆ. ವಿಶ್ವನಾಥ ಗೌಡರವರು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಕೆಎಸ್ ಹೆಗ್ಗಡೆ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ. ಈ ಬಗ್ಗೆ ಬೆಳ್ತಂಗಡಿ ಸಂಚಾರ ಠಾಣಾ ಅ.ಕ್ರ: 121/2024 ಕಲಂ: 281, 125(ಎ) ಬಿಎನ್ಎಸ್ರಂತೆ ಪ್ರಕರಣ ದಾಖಲಾಗಿದೆ.