ಪುತ್ತೂರು: ಬೊಳುವಾರು ಶ್ರೀ ದುರ್ಗಾಪರಮೇಶ್ವರೀ ಉಳ್ಳಾಳ್ತಿ ಮಲರಾಯ ಸಪರಿವಾರ ಕ್ಷೇತ್ರದಲ್ಲಿ ಜ.24ರಂದು ನಡೆಯಲಿರುವ 9ನೇ ವರ್ಷದ ಪ್ರತಿಷ್ಠಾ ವಾರ್ಷಿಕೋತ್ಸವ, ಚಂಡಿಕಾಯಾಗದ ಆಮಂತ್ರಣ ಪತ್ರಿಕೆ ಬಿಡುಗಡೆ ಡಿ.26ರಂದು ಕ್ಷೇತ್ರದಲ್ಲಿ ನಡೆಯಿತು.
ಕ್ಷೇತ್ರದ ಅರ್ಚಕ ಮನಮೋಹನ್ ಭಟ್ ಪ್ರಾರ್ಥನೆ ನೆರವೇರಿಸಿ ಆಮಂತ್ರಣ ಪತ್ರಿಕೆ ಸಮಿತಿಯವರಿಗೆ ಹಸ್ತಾಂತರಿಸಿದರು.
ಕ್ಷೇತ್ರ ಪವಿತ್ರಪಾಣಿ ಬಾಲಸುಬ್ರಹ್ಮಣ್ಯ ಭಟ್, ವಿಶ್ವಸ್ಥ ಮಂಡಳಿ ಅಧ್ಯಕ್ಷ ಪ್ರವೀಣ್ ನಾಯಕ್ ಬೊಳುವಾರು, ಪ್ರಧಾನ ಕಾರ್ಯದರ್ಶಿ ವಿ.ಕೆ.ಶೆಟ್ಟಿ, ಕೋಶಾಧಿಕಾರಿ ಪ್ರಸನ್ನ ಬಲ್ಲಾಳ್, ಟ್ರಸ್ಟಿ ಸುಂದರ ನಾಯ್ಕ, ದಿನೇಶ್ ಕರ್ಮಲ, ಜಲಜಾಕ್ಷಿ ಎನ್ ಹೆಗ್ಡೆ, ಶಂಕರ ಮಲ್ಯ, ಕ್ಷೇತ್ರದ ಯಕ್ಷಕಲಾ ಪ್ರತಿಷ್ಠಾನದ ಗೋವಿಂದ ನಾಯಕ್ ಪಾಲೆಚ್ಚಾರು, ಕ್ಷೇತ್ರ ಭಜನಾ ಮಂಡಳಿ ಸದಸ್ಯೆ ಶಕುಂತಳಾ ಟಿ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.