ಪುತ್ತೂರು:ಬೆಳ್ಳಿಪ್ಪಾಡಿ ಉರಮಾಲ್ ದಿ.ರಘುನಾಥ್ ರೈ ಮತ್ತು ದೇಲಂತಿಮಾರು ದಿ.ವೇದಾವತಿಯವರ ಹಿರಿಯ ಪುತ್ರಿ ಗುರುಪುರ ಮರಂಕರಿಯ ಆನಂದ ಶೆಟ್ಟಿ ನೆಲ್ಲಿಕಟ್ಟೆರವರ ಪತ್ನಿ ದೇಲಂತಿಮಾರ್ ವಜ್ರಾವತಿ ಶೆಟ್ಟಿ(82ವ.)ರವರು ಮುಂಜಾನೆ ನಿಧನ ಹೊಂದಿದರು. ಮೃತರು ಪುತ್ರ, ಈರ್ವರು ಪುತ್ರಿಯರು, ಓರ್ವ ಸಹೋದರ, ಈರ್ವರು ಸಹೋದರಿಯರು, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆಯು ಇಂದು ಬೆಳಿಗ್ಗೆ ನೆಲ್ಲಿಕಟ್ಟೆ ನಿವಾಸದಲ್ಲಿ ಜರಗುವುದು ಎಂದು ಮೃತರ ಕುಟುಂಬ ಮೂಲಗಳು ತಿಳಿಸಿದೆ.