ಪುಣ್ಚಪ್ಪಾಡಿ: ಸುಳ್ಯ ಮಂಡಲದ ಕುಟ್ರಪ್ಪಾಡಿ ಮಹಾ ಶಕ್ತಿ ಕೇಂದ್ರದ ಪುಣ್ಚಪ್ಪಾಡಿ ಶಕ್ತಿ ಕೇಂದ್ರ ಬೂತ್ 68 ಮತ್ತು69 ರ ಮಾಸಿಕ ಸಭೆ ಯು ಡಿ.28ರಂದು ನೇರೋಳ್ತಡ್ಕ ಗೌರಿ ಸದನ ಸಭಾಂಗಣದಲ್ಲಿ ಜರುಗಿತು.
ಸಭೆಯಲ್ಲಿ ಡಿ. 29ರಂದು ಪ್ರಧಾನಿ ನರೇಂದ್ರ ಮೋದಿಯವರು ನಡೆಸುವ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಭಾಗವಹಿಸುವ, ಗ್ರಾಮದ ಅಭಿವೃದ್ಧಿ, ಪಕ್ಷದ ಬಲಪಡಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಸಭೆಯಲ್ಲಿ ಸವಣೂರು ಗ್ರಾ.ಪಂ ಸದಸ್ಯರಾದ ಗಿರಿಶಂಕರ ಸುಲಾಯ ಮಾಹಿತಿ ನೀಡಿದರು. ಸಭೆಯಲ್ಲಿ ಪುಣ್ಚಪ್ಪಾಡಿ ಶಕ್ತಿ ಕೇಂದ್ರ ಪ್ರಮುಖ್ ಮಹೇಶ್ ಕೆ ಸವಣೂರು, ಬೂತ್ 68ರ ಅಧ್ಯಕ್ಷ ಧನರಾಜ್ ಓಡಂತರ್ಯ, ಕಾರ್ಯದರ್ಶಿ ಪ್ರಶಾಂತ್ ಗುಂಡಿಯಡ್ಕ, 69 ರ ಅಧ್ಯಕ್ಷೆ ರಾಜೇಶ್ವರಿ ಕನ್ಯಾಮಂಗಲ, ಕಾರ್ಯದರ್ಶಿ ಮೋಹಿತ್ ಕುಮಾರಮಂಗಲ, ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಪ್ರಕಾಶ್ ರೈ ಸಾರಕರೆ, ಗ್ರಾ ಪಂ ಸದಸ್ಯರಾದ ಶೀನಪ್ಪ ಶೆಟ್ಟಿ ನೆಕ್ರಾಜೆ, ಯಶೋಧ ನೂಜಾಜೆ, ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕ ಸೂರಪ್ಪ ಗೌಡ ಬದಿಯಡ್ಕ, ಪಕ್ಷದ ಹಿರಿಯರಾದ ನಾಗಾರಾಜ ನಿಡ್ವಣ್ಣಾಯ, ನ್ಯಾಯವಾದಿ ನವೀನ್ ಶೆಟ್ಟಿ ನೂಜಾಜೆ, ಬೂತ್ 68 ಮತ್ತು69 ರ ಬೂತ್ ನ ಪದಾಧಿಕಾರಿಗಳಾದ ಪ್ರವೀಣ್ ಶೆಟ್ಟಿ ನೂಜಾಜೆ, ವಿಜಯ ಕುಮಾರಮಂಗಲ,ಲೋಕೇಶ್ ಕನ್ಯಾಮಂಗಲ, ಪುಟ್ಟಣ್ಣ ಗೌಡ ಬದಿಯಡ್ಕ, ಹರಿ ಪ್ರಸಾದ್ ನೆಕ್ರಾಜೆ, ರಕ್ಷಿತ್ ನೂಜಾಜೆ, ಗೌತಮ್ ಅಂಜಯ, ಧವಿತ್ ನೂಜಾಜೆ, ಮೊದಲಾದವರು ಉಪಸ್ಥಿತರಿದ್ದರು.
ಮಹೇಶ್ ಕೆ ಸವಣೂರು ಸ್ವಾಗತಿಸಿ, ಧನರಾಜ್ ಓಡಂತರ್ಯ ವಂದಿಸಿದರು.