ರಾಮಕುಂಜ: ಹಳೆನೇರೆಂಕಿ ಗ್ರಾಮದ ಸಾಂತ್ಯ ನಿವಾಸಿ ಬಾಲಪ್ಪ ಪೂಜಾರಿ(95ವ.)ಅವರು ಡಿ.31ರಂದು ಬೆಳಿಗ್ಗೆ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು.
ವೃಂದಾವನಸ್ಥ ಉಡುಪಿ ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಶ್ರೀಗಳು ಜನಿಸಿದ ಮನೆಯ ಸನಿಹವೇ ಬಾಲಪ್ಪ ಪೂಜಾರಿಯವರ ಮನೆಯೂ ಇದ್ದು ಶ್ರೀಗಳ ಸಮಕಾಲೀನರಾಗಿದ್ದರು. ಊರ ದೇವಾಲಯ, ದೈವಸ್ಥಾನ, ಗರೋಡಿಗಳಲ್ಲಿ ನಡೆಯುತ್ತಿದ್ದ ಉತ್ಸವ ಸಂದರ್ಭದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಹಳೆನೇರೆಂಕಿ ಬ್ರಹ್ಮ ಬೈದರ್ಕಳ ಗರೋಡಿ ಹಾಗೂ ಕೊಡಮಣಿತ್ತಾಯ ದೈವಸ್ಥಾನದಲ್ಲಿ ದೈವದ ಪರಿಚಾರಕರಾಗಿ ಸೇವೆ ಸಲ್ಲಿಸುತ್ತಿದ್ದರು. ಕುಟುಂಬದ ದೈವಗಳ ಪರಿಚಾರಕರಾಗಿಯೂ ಸೇವೆ ಸಲ್ಲಿಸುತ್ತಿದ್ದರು.
ಮೃತರು ಪುತ್ರಿಯರಾದ ಯಶೋದಾ, ಮೀನಾಕ್ಷಿ, ಸುನಂದ, ದಮಯಂತಿ, ದೇವಕಿ, ಕಮಲಾಕ್ಷಿ, ವಿಮಲ, ಪುತ್ರರಾದ ಯೋಗೀಶ, ಸದಾನಂದ, ರಾಮಕುಂಜ ಗ್ರಾ.ಪಂ.ಸಿಬ್ಬಂದಿ ನಾರಾಯಣ, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.
ಮೃತರ ಮನೆಗೆ ನಿವೃತ್ತ ಮುಖ್ಯಶಿಕ್ಷಕ ಟಿ.ನಾರಾಯಣ ಭಟ್, ರಾಮಕುಂಜ ಗ್ರಾ.ಪಂ.ಅಧ್ಯಕ್ಷೆ ಸುಚೇತಾ, ಪಿಡಿಒ ಮೋಹನ್‌ಕುಮಾರ್, ಕಾರ್ಯದರ್ಶಿ ಲಲಿತ, ಸದಸ್ಯರಾದ ಮಾಲತಿ ಎನ್.ಕೆ., ರೋಹಿಣಿ, ಯತೀಶ್‌ಕುಮಾರ್, ಅಬ್ದುಲ್ ರಹಿಮಾನ್, ಕುಶಾಲಪ್ಪ ಮುಳಿಮಜಲು, ವಸಂತ ಪಿ., ಪ್ರಶಾಂತ್ ಆರ್.ಕೆ., ಗ್ರಾ.ಪಂ.ಸಿಬ್ಬಂದಿಗಳು, ತಾ.ಪಂ.ಮಾಜಿ ಸದಸ್ಯೆ ತೇಜಸ್ವಿನಿಶೇಖರ ಗೌಡ, ಆಲಂಕಾರು ಮೂರ್ತೆದಾರರ ಸೇವಾ ಸಹಕಾರ ಸಂಘದ ಅಧ್ಯಕ್ಷ ಮುತ್ತಪ್ಪ ಪೂಜಾರಿ ನೈಯ್ಯಲ್ಗ, ಉಪಾಧ್ಯಕ್ಷ ಜನಾರ್ದನ ಕದ್ರ, ಪ್ರಮುಖರಾದ ಕಿರಣ್‌ಕುಮಾರ್ ಪಾದೆ, ಧರ್ಣಪ್ಪ ಗೌಡ ಅಲೆಪ್ಪಾಡಿ, ವಿಶ್ವನಾಥ ರೈ ಎರಟಾಡಿ, ಶೇಖರ ಗೌಡ ಕಟ್ಟಪುಣಿ, ಅಶೋಕ್‌ಕುಮಾರ್ ಕೊಯಿಲ, ಆದಂ ಮೇಸ್ತ್ರಿ ಆರಾಟಿಗೆ, ಸಂಜೀವ ಮಾಸ್ತರ್ ಬಟ್ಲಡ್ಕ, ಪುರುಷೋತ್ತಮ ಪೂಜಾರಿ ಬರೆಂಬೆಟ್ಟು, ನಾಗೇಶ್‌ಕುಮಾರ್ ಕೆಎಂಎಫ್ ಪುತ್ತೂರು, ರಾಮಣ್ಣ ಪೂಜಾರಿ ಕಬಕ ಸಹಿತ ಹಲವು ಗಣ್ಯರು ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ.