ರಾಮಕುಂಜ: ರಾಮಕುಂಜ ಗ್ರಾಮದ ಇರ್ಕಿ ನಿವಾಸಿ, ಕೃಷಿಕ ಸಂಕಪ್ಪ ಮೂಲ್ಯ (76ವ.) ಅವರು ಅನಾರೋಗ್ಯದಿಂದ ಡಿ.31ರಂದು ಬೆಳಿಗ್ಗೆ ಸ್ವಗೃಹದಲ್ಲಿ ನಿಧನರಾದರು.
ಸಂಕಪ್ಪ ಮೂಲ್ಯ ಅವರು 50ವರ್ಷಕ್ಕೂ ಹೆಚ್ಚು ಸಮಯದಿಂದ ಶ್ರೀ ರಾಮಕುಂಜೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೆಯ ಸಂದರ್ಭದಲ್ಲಿ ದೇವರ ಉತ್ಸವ, ಪೇಟೆ ಸವಾರಿ ವೇಳೆ ದೀಪ ಹಿಡಿಯುವ ಸೇವೆ ಸಲ್ಲಿಸುತ್ತಿದ್ದರು. ದೇವಳದ ಉತ್ಸವಕ್ಕೆ ಬೇಕಾದ ಪತ್ರೆ ಸಂಗ್ರಹ ಹಾಗೂ ಹಿರಿಯರಿಂದ ನಡೆದು ಬಂದ ದೇವರ ಸೇವೆಯನ್ನು ಭಕ್ತಿ ಪೂರ್ವಕವಾಗಿ ನಡೆಸಿಕೊಂಡು ಬರುತ್ತಿದ್ದರು. ಇವರ ಸೇವೆ ಗುರುತಿಸಿ 2012ರಲ್ಲಿ ನಡೆದ ಬ್ರಹ್ಮಕಲಶ ಮಹೋತ್ಸವದ ಸಂದರ್ಭದಲ್ಲಿ ಸನ್ಮಾನಿಸಲಾಗಿತ್ತು. ಇವರು ಕಳೆದ 10 ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.
ಮೃತರು ಪತ್ನಿ ಕಮಲ, ಸಹೋದರ ಪದ್ಮಯ್ಯ ಮೂಲ್ಯ, ನಾಲ್ವರು ಸಹೋದರಿಯರು, ಪುತ್ರರಾದ ಪುರಂದರ, ಸುರೇಶ, ಹರೀಶ, ಸೊಸೆಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ. ಮೃತರ ಮನೆಗೆ ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಸಂಚಾಲಕ ಟಿ.ನಾರಾಯಣ ಭಟ್, ರಾಮಕುಂಜ ಗ್ರಾ.ಪಂ.ಸದಸ್ಯರಾದ ಯತೀಶ್ ಬಾನಡ್ಕ, ಸೂರಪ್ಪ ಕುಲಾಲ್, ಪ್ರಮುಖರಾದ ಎ.ಎನ್.ಕೊಳಂಬೆ, ಕೃಷ್ಣಮೂರ್ತಿ ಕೆರೆಕರೆ ಸಹಿತ ಹಲವು ಮಂದಿ ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ.