ಪುತ್ತೂರು: 1997ರಲ್ಲಿ ಪ್ರಾರಂಭಗೊಂಡು ಪುತ್ತೂರು ಹಾಗೂ ಸುತ್ತಮುತ್ತಲಿನ ಜನತೆಗೆ ಯಶಸ್ವಿಯಾಗಿ ಅತ್ಯುತ್ತಮ ಸೇವೆಯನ್ನು ಒದಗಿಸುತ್ತಾ ಬಂದಿರುವ ಮೈತ್ರಿ ಎಲೆಕ್ಟ್ರಿಕ್ ಕಂಪೆನಿಯಲ್ಲಿ ಗ್ರಾಹಕರ ಸೌಲಭ್ಯಕ್ಕಾಗಿ ಗೃಹಬಳಕೆಯ ಡೆಕೊರೆಟಿವ್ ಲೈಟಿಂಗ್ ಮತ್ತು ಲ್ಯುಮಿನರೀಸ್ (ಅಲಂಕಾರಿಕ ವಿದ್ಯುತ್ ದೀಪಗಳ) ವಿಭಾಗವಾದ ಮಿಂಚ್ ದ ಲ್ಯುಮಿನರೀಸ್ ಜ.3ರಂದು ’ಸುಶಾ’ ಛೇಂಬರ್ಸ್ ಮೈತ್ರಿ ಎಲೆಕ್ಟ್ರಿಕ್ ಕಂಪೆನಿಯ 2ನೇ ಮಹಡಿಯಲ್ಲಿ ಶುಭಾರಂಭಗೊಳ್ಳಲಿದೆ.
ಸುಳ್ಯ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್‌ನ ಮುಖ್ಯ ಕಾರ್ಯದರ್ಶಿ ಅಕ್ಷಯ ಕೆ ಸಿ ದೀಪ ಪ್ರಜ್ವಲನೆ ಮಾಡಲಿದ್ದಾರೆ. ಜಿ.ಎಲ್ ಸಮೂಹ ಸಂಸ್ಥೆಗಳ ಮ್ಯಾನೇಜಿಂಗ್ ಡೈರೆಕ್ಟರ್ ಬಲರಾಮ ಆಚಾರ್ಯ, ಅಕ್ಷಯ ಕಾಲೇಜು ಅಧ್ಯಕ್ಷ ಜಯಂತ ನಡುಬೈಲು, ವಿವೇಕಾನಂದ ಕಾಲೇಜು ಆಫ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಅಧ್ಯಕ್ಷ ಕೆ ವಿಶ್ವಾಸ್ ಶೆಣೈ, ಶ್ಯಾಮ್ ಜ್ಯುವೆಲ್ಸ್ ಗ್ರೂಪ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಕೃಷ್ಣನಾರಾಯಣ ಮುಳಿಯ, ಮಾಣಿ ಬಾಲವಿಕಾಸ ಟ್ರಸ್ಟ್ ಕಾರ್ಯದರ್ಶಿ ಮಹೇಶ್ ಶೆಟ್ಟಿ ಜೆ, ದ್ವಾರಕಾ ಸಮೂಹ ಸಂಸ್ಥೆಗಳ ಮ್ಯಾನೇಜಿಂಗ್ ಡೈರೆಕ್ಟರ್ ಗೋಪಾಲಕೃಷ್ಣ ಭಟ್ ಎ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಎಲ್ಲ ವಿಧದ ಡೊಮೆಸ್ಟಿಕ್, ಕಮರ್ಷಿಯಲ್, ಅಗ್ರಿಕಲ್ಚರಲ್ ಮತ್ತು ಇಂಡಸ್ಟ್ರಿಯಲ್ ಎಲೆಕ್ಟ್ರಿಕಲ್ ಸಾಮಾಗ್ರಿಗಳು, ಫ್ಯಾನುಗಳು ಮತ್ತು ಪಂಪ್ ಸೆಟ್ಟುಗಳ ವ್ಯಾಪಾರ ನಡೆಸುತ್ತ ಬಂದಿರುವ ಮೈತ್ರಿಯು ಇದೀಗ ಗ್ರಾಹಕರ ಸೌಲಭ್ಯಕ್ಕಾಗಿ ಗೃಹಬಳಕೆಯ ಡೆಕೊರೆಟಿವ್ ಲೈಟಿಂಗ್ ಮತ್ತು ಲ್ಯುಮಿನರೀಸ್ (ಅಲಂಕಾರಿಕ ವಿದ್ಯುತ್ ದೀಪಗಳ) ವಿಭಾಗವಾದ ಮಿಂಚ್‌ನ್ನು ಪ್ರಸ್ತುತಪಡಿಸುತ್ತಿದೆ.