ಪುತ್ತೂರು: ಕುಂಬ್ರ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಮುಂದಿನ 5 ವರ್ಷಗಳ ಆಡಳಿತ ಮಂಡಳಿಗೆ ನಿರ್ದೇಶಕರ ಆಯ್ಕೆಗೆ ಜ.01 ರಂದು ಚುನಾವಣೆ ನಡೆದಿದ್ದು ಎಲ್ಲ 12 ಸ್ಥಾನಗಳಲ್ಲಿಯೂ ಸಹಕಾರ ಭಾರತಿ ಬೆಂಬಲಿತ ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸಿದ್ದಾರೆ.
ಸಾಲಗಾರರ ಸಾಮಾನ್ಯ ಕ್ಷೇತ್ರದಿಂದ 5 ಸ್ಥಾನಗಳು, ಪ.ಜಾತಿ ಮೀಸಲು ಮತ್ತು ಪ.ಪಂಗಡ ಮೀಸಲು ಸ್ಥಾನದಿಂದ ತಲಾ 1, ಹಿಂದುಳಿದ ವರ್ಗ ಎ ಮತ್ತು ಹಿಂದುಳಿದ ವರ್ಗ ಬಿ. ಮೀಸಲು ಸ್ಥಾನದಿಂದ ತಲಾ 1 ಹಾಗೂ ಮಹಿಳಾ ಮೀಸಲು ಸ್ಥಾನ 1 ಮತ್ತು ಸಾಲಗಾರರಲ್ಲದ ಕ್ಷೇತ್ರದಿಂದ 1 ಸ್ಥಾನ ಸೇರಿ ಒಟ್ಟು 12 ಸ್ಥಾನಗಳಿಗೆ ಚುನಾವಣೆ ನಡೆಯಿತು.
ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದ ಸಾಲಗಾರರಲ್ಲದ ಕ್ಷೇತ್ರದಿಂದ ಸಂತೋಷ್ ಎ.ಸಿ, ಸಾಲಗಾರರ ಮಹಿಳಾ ಮೀಸಲು ಸ್ಥಾನಗಳಿಂದ ಮಲ್ಲಿಕಾ ಎ.ಜೆ ಮತ್ತು ರಾಜೀವಿ ಎಸ್.ರೈ, ಪ.ಜಾತಿ ಮೀಸಲು ಸ್ಥಾನದಿಂದ ವಸಂತ ಕುಮಾರ್, ಪ.ಪಂಗಡ ಮೀಸಲು ಸ್ಥಾನದಿಂದ ಶ್ರೀನಿವಾಸ ಪ್ರಸಾದ್ ಎಂ, ಹಿಂದುಳಿದ ವರ್ಗ ಎ ಮೀಸಲು ಸ್ಥಾನದಿಂದ ಸತೀಶ್ ಕರ್ಕೇರ, ಹಿಂದುಳಿದ ವರ್ಗ ಬಿ ಮೀಸಲು ಸ್ಥಾನದಿಂದ ಶಿವರಾಮ ಬಿ ಹಾಗೂ ಸಾಮಾನ್ಯ ಕ್ಷೇತ್ರದಿಂದ ಅಮರನಾಥ ರೈ, ಉಮೇಶ್ ಗೌಡ ಕೆ, ಪ್ರಕಾಶ್ಚಂದ್ರ ರೈ ಕೆ, ವಿನೋದ್ ಕುಮಾರ್ ಶೆಟ್ಟಿ ಎ ಮತ್ತು ಸೂರ್ಯನಾರಾಯಣ ಭಟ್ ಬಿ ಗೆಲುವು ಸಾಧಿಸಿದ್ದಾರೆ ಎಂದು ಚುನಾವಣಾ ರಿರ್ಟನಿಂಗ್ ಅಧಿಕಾರಿ ಶೋಭಾ ಎನ್.ಎಸ್ ಘೋಷಣೆ ಮಾಡಿದರು. ಕುಂಬ್ರ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭವಾನಿ ಬಿ.ಆರ್, ಸಿಬ್ಬಂದಿಗಳಾದ ವೀಣಾ ರೈ, ರಾಜ್‌ಪ್ರಕಾಶ್ ರೈ, ಉದಯ ಕುಮಾರ್, ರಾಜ್‌ಕಿರಣ್ ರೈ, ಭರತ್, ಶಾಂತ ಕುಮಾರ, ವೆಂಕಪ್ಪ ಡಿ, ಹರೀಶ್ ಎ, ಹರ್ಷಿತಾ, ಪ್ರೀತಿ, ಪ್ರದ್ವಿನ್ ಪ್ರಸಾದ್, ಶರತ್ ಸಹಕರಿಸಿದರು.
ಬಿಜೆಪಿ ಕಾರ್ಯಕರ್ತರಿಂದ ಸಂಭ್ರಮಾಚರಣೆ:
ಬಿಜೆಪಿ ಬೆಂಬಲಿತ ಸಹಕಾರ ಭಾರತಿಯ ಎಲ್ಲಾ 12 ಅಭ್ಯರ್ಥಿಗಳು ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರು. ಗೆಲುವು ಕಂಡ ಅಭ್ಯರ್ಥಿಗಳಿಗೆ ಹೂವಿನ ಮಾಲಾರ್ಪಣೆ ಹಾಗೇ ಪಕ್ಷದ ಚಿಹ್ನೆ ಹೊಂದಿರುವ ಶಾಲು ಹಾಕಿ ಅಭಿನಂದಿಸಿದರು. ಜೈಕಾರ ಕೂಗುವ ಮೂಲಕ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಕಛೇರಿಯಿಂದ ಕುಂಬ್ರ ಅಶ್ವತ್ಥಕಟ್ಟೆಯ ತನಕ ಮೆರವಣಿಗೆ ಬಂದು ಕುಂಬ್ರ ಜಂಕ್ಷನ್‌ನಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಲಾಯಿತು.
ರೈತ ಬಾಂಧವರ ಗೆಲುವು- ಪ್ರಕಾಶ್ಚಂದ್ರ ರೈ ಕೈಕಾರ:
ಗೆಲುವಿನ ಬಗ್ಗೆ ಪ್ರತಿಕ್ರಿಯೆ ನೀಡಿದ ಕುಂಬ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಹಾಲಿ ಅಧ್ಯಕ್ಷರೂ ಆಗಿರುವ ನೂತನ ನಿರ್ದೇಶಕ ಪ್ರಕಾಶ್ಚಂದ್ರ ರೈ ಕೈಕಾರರವರು ಇದು ರೈತ ಬಾಂಧವರ ಗೆಲುವು ಆಗಿದೆ. ಬಿಜೆಪಿ ಬೆಂಬಲಿತ ಸಹಕಾರ ಭಾರತಿಯ ಎಲ್ಲಾ 12 ಮಂದಿ ಅಭ್ಯರ್ಥಿಗಳು ಗೆಲುವು ಸಾಧಿಸಿರುವುದು ಖುಷಿ ತಂದಿದೆ. ಈ ಗೆಲುವಿನ ಹಿಂದೆ ಪಕ್ಷದ ಕಾರ್ಯಕರ್ತರ ಶ್ರಮ ಹಾಗೂ ಮತದಾರರ ಒಲವು ಇದೆ. ಈ ನಿಟ್ಟಿನಲ್ಲಿ ಎಲ್ಲಾ ಮತದಾರರಿಗೆ ಹಾಗೂ ಕಾರ್ಯಕರ್ತರಿಗೆ ಅಭಿನಂದನೆಗಳು ಹಾಗೇ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ ಎಂದು ಹೇಳಿದರು.
ಕಾರ್ಯಕರ್ತರ ಶ್ರಮ, ಮತದಾರರ ಒಲವು ಗೆಲುವು ತಂದುಕೊಟ್ಟಿದೆ: ಪ್ರಸನ್ನ ಕುಮಾರ್ ಮಾರ್ತ:
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತರವರು ಮಾತನಾಡಿ, ಕುಂಬ್ರ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘಕ್ಕೆ ಆಯ್ಕೆಯಾದ ಎಲ್ಲಾ ನಿರ್ದೇಶಕರುಗಳಿಗೆ ಪಕ್ಷದ ವತಿಯಿಂದ ಅಭಿನಂದನೆ ಸಲ್ಲಿಸುತ್ತೇನೆ. ಇದು ಪಕ್ಷದ ಗೆಲುವು ಆಗಿದೆ. ಇದರಲ್ಲಿ ಸಹಕರಿಸಿದ ಕಾರ್ಯಕರ್ತರಿಗೆ, ಮತದಾರರಿಗೆ ಹಾಗೂ ಪ್ರತ್ಯಕ್ಷ ಪರೋಕ್ಷವಾಗಿ ಸಹಕರಿಸಿದವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದರು. ಮುಂಡೂರು ಪ್ರಾ.ಕೃ.ಪ.ಸಹಕಾರಿ ಸಂಘದ ಚುನಾವಣೆಯಲ್ಲಿ ಪಕ್ಷದ ವತಿಯಿಂದ ಸಲ್ಲಿಸಿದ್ದ ಅಭ್ಯರ್ಥಿಗಳ ನಾಮಪತ್ರ ಹಿಂತೆಗೆದುಕೊಳ್ಳುವ ಪ್ರಕ್ರಿಯೆ ನಡೆಯಿತು. ಇದು ಪಕ್ಷದ ರಾಜಕೀಯ ತಂತ್ರಗಾರಿಕೆ ಆಗಿದೆ. ಕಾರ್ಯಕರ್ತರು ಸೋಲನ್ನು ಸವಾಲಾಗಿ ಸ್ವೀಕರಿಸುವವರು ಆಗಿದ್ದಾರೆ. ಬಿಜೆಪಿ ಯಾವತ್ತೂ ದ್ವೇಷದ ರಾಜಕಾರಣ ಬಯಸುವುದಿಲ್ಲ. ಇದನ್ನೇ ನೆಪವಾಗಿಟ್ಟುಕೊಂಡು ಕಾಂಗ್ರೆಸ್‌ನ ನೂತನ ಬ್ಲಾಕ್ ಅಧ್ಯಕ್ಷರು ಹೀಯಾಳಿಸುವ ಮಾತುಗಳನ್ನಾಡಿದ್ದಾರೆ. ಇದು ಸರಿಯಲ್ಲ. ಅವರ ಮಾತನ್ನು ಸವಾಲಾಗಿ ಸ್ವೀಕರಿಸಿದ ಪಕ್ಷವು ಕುಂಬ್ರದಲ್ಲಿ ಚುನಾವಣಾ ಮೈದಾನದಲ್ಲಿ ಅವರಿಗೆ ತಕ್ಕದಾದ ಉತ್ತರವನ್ನು ನೀಡಿದೆ ಎಂದು ಪ್ರಸನ್ನ ಕುಮಾರ್ ಮಾರ್ತ ತಿಳಿಸಿದರು. ಈ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವಿಗೆ ಸಹಕರಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಲೋಕಸಭಾ ಸದಸ್ಯ ಬ್ರಿಜೇಶ್ ಚೌಟ ಹಾಗೂ ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಪಕ್ಷದ ಹಿರಿಯ ಕಿರಿಯ ಮುಖಂಡರುಗಳಿಗೆ, ಕಾರ್ಯಕರ್ತರಿಗೆ ಅಭಿನಂದನೆಗಳನ್ನು ಸಲ್ಲಿಸುವುದಾಗಿ ತಿಳಿಸಿದರು.
ಸಹಕರಿಸಿದವರಿಗೆ ಧನ್ಯವಾದಗಳು-ದಯಾನಂದ ಶೆಟ್ಟಿ ಉಜಿರೆಮಾರು:
ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು ಮಾತನಾಡಿ, ಇದು ಪಕ್ಷದ ಸತ್ಯ,ನಿಷ್ಠೆ, ಪ್ರಾಮಾಣಿಕತೆಗೆ ಸಂದ ಜಯವಾಗಿದೆ. ಬಿಜೆಪಿ ಸೋಲೇ ಗೆಲುವಿನ ಸೋಪಾನ ಎಂದುಕೊಂಡು ಬೆಳೆದು ಬಂದಿರುವ ಪಕ್ಷವಾಗಿದೆ. ಇದು ಕಾರ್ಯಕರ್ತರ ಶಕ್ತಿಯಾಗಿದೆ. ಈ ಗೆಲುವಿನ ಹಿಂದೆ ಸಹಕರಿಸಿದ ಪಕ್ಷದ ಎಲ್ಲಾ ಕಾರ್ಯಕರ್ತರಿಗೆ, ಮತದಾರ ಬಾಂಧವರಿಗೆ ಹಾಗೇ ಪ್ರತ್ಯಕ್ಷ, ಪರೋಕ್ಷವಾಗಿ ಸಹಕರಿಸಿದ ಸರ್ವರಿಗೂ ಪಕ್ಷದ ವತಿಯಿಂದ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಹೇಳಿದರು.
ಮಾಜಿ ಶಾಸಕರಾದ ಸಂಜೀವ ಮಠಂದೂರು, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ನಗರಸಭಾ ಮಾಜಿ ಅಧ್ಯಕ್ಷ ಜೀವಂಧರ್ ಜೈನ್ ಬಿಜೆಪಿ ಗ್ರಾಮಾಂತರ ಮಂಡಲದ ನಿಕಟಪೂರ್ವ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಮಂಡಲದ ಉಪಾಧ್ಯಕ್ಷ ಹರಿಪ್ರಸಾದ್ ಯಾದವ್, ನಗರ ಮಂಡಲ ಅಧ್ಯಕ್ಷ ಶಿವಕುಮಾರ್, ನಗರ ಮಂಡಲದ ಉಪಾಧ್ಯಕ್ಷ ಸಂತೋಷ್ ಕುಮಾರ್ ರೈ ಕೈಕಾರ, ರೈತ ಮೋರ್ಛಾದ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಶೆಟ್ಟಿ ತಿಂಗಳಾಡಿ, ಒಳಮೊಗ್ರು ಗ್ರಾಮ ಪಂಚಾಯತ್ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ಅರಿಯಡ್ಕ ಗ್ರಾಪಂ ಅಧ್ಯಕ್ಷ ಸಂತೋಷ್ ಮಣಿಯಾಣಿ, ಬಿಜೆಪಿ ನೆಟ್ಟಣಿಗೆ ಮುಡ್ನೂರು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ರಾಜೇಶ್ ರೈ ಪರ್ಪುಂಜ, ಒಳಮೊಗ್ರು ಶಕ್ತಿಕೇಂದ್ರದ ಅಧ್ಯಕ್ಷ ಎಸ್.ಮಾಧವ ರೈ ಕುಂಬ್ರ, ಹರೀಶ್ ರೈ ಜಾರತ್ತಾರು, ಮಹೇಶ್ ರೈ ಕೇರಿ, ಪ್ರದೀಪ್, ಪ್ರವೀಣ್ ಪಲ್ಲತ್ತಾರು, ಉಷಾ ನಾರಾಯಣ್, ತಿಲಕ್ ರೈ ಕುತ್ಯಾಡಿ, ಸಚಿನ್ ಪಾಪೆಮಜಲು, ಲಿಂಗಪ್ಪ ಗೌಡ ಬಡಗನ್ನೂರು, ಪ್ರಭಾಕರ ಗೌಡ ಪೆರಿಗೇರಿ, ವೆಂಕಟೇಶ್, ವಿನೋದ್‌ರಾಜ್ ಅನಿಲೆ, ಭರತ್ ಈಶ್ವರಮಂಗಲ, ಸಂತೋಷ್ ರೈ ಕೈಕಾರ, ಸುಷ್ಮಾ ಸತೀಶ್, ಪುರಂದರ ಶೆಟ್ಟಿ ಮುಡಾಲ, ಅನಿಲ್ ರೈ ಬಾರಿಕೆ,ನವೀನ್ ರೈ ಪನಡ್ಕ, ರತನ್ ರೈ ಕುಂಬ್ರ, ಮೋಹನ್ ಆಳ್ವ ಮುಂಡಾಲಗುತ್ತು, ಸುರೇಶ್ ಆಳ್ವ ಈಶ್ವರಮಂಗಲ, ಹರೀಶ್ ಬಿಜತ್ರೆ, ನಿತೀಶ್ ಕುಮಾರ್ ಶಾಂತಿವನ, ಸನ್ವಿತ್ ರೈ ಕುಂಬ್ರ, ರಘುರಾಮ ಪಾಟಾಳಿ, ಸುಕುಮಾರ್ ಮಡ್ಯಂಗಳ, ಶ್ರೀದೀಪ್, ಚಂದ್ರಹಾಸ ರೈ ಪನಡ್ಕ, ಹರಿಪ್ರಸಾದ್ ರೈ ಅರಿಯಡ್ಕ,ಅನಿಲ್ ಕನ್ನಡ್ಕ, ಪದ್ಮನಾಭ ರೈ ಅರೆಪ್ಪಾಡಿ, ಯುವರಾಜ್ ಪೂಂಜ, ಮೇಘರಾಜ್, ಅರುಣ್ ರೈ ಬಿಜಳ, ಕರುಣಾ ರೈ ಬಿಜಳ, ಚಿರಾಗ್ ರೈ, ಆದರ್ಶ ರೈ, ರಮಾನಂದ ರೈ ಕೈಕಾರ ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.
ಸೋಲನ್ನು ಸವಾಲಾಗಿ ಸ್ವೀಕರಿಸಿದ್ದೇವೆ, ಮತದಾರರ ತೀರ್ಪಿಗೆ ಬದ್ಧ- ಅಶೋಕ್ ಪೂಜಾರಿ ಬೊಳ್ಳಾಡಿ:
ಕುಂಬ್ರ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ನಿರ್ದೇಶಕರುಗಳ ಆಯ್ಕೆಯ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಉತ್ತಮವಾಗಿ ಸ್ಪರ್ಧೆ ನೀಡಿದ್ದಾರೆ. ಸೋಲು ಗೆಲುವು ಇದ್ದಂತೆ. ಸೋಲನ್ನು ಸವಾಲಾಗಿ ಸ್ವೀಕರಿಸಿದ್ದೇವೆ. ಮತದಾರರ ತೀರ್ಪಿಗೆ ಬದ್ಧರಾಗಿದ್ದೇವೆ. ಮುಂದಿನ ದಿನಗಳಲ್ಲಿ ಶಾಸಕರ ಸಹಕಾರದೊಂದಿಗೆ ಸರಕಾರದಿಂದ ದೊರೆಯುವ ಕೃಷಿ ಸಾಲ, ಕೃಷಿ ವಿಮೆ ಇತ್ಯಾದಿ ಯೋಜನೆಗಳ ಸೌಲಭ್ಯವನ್ನು ಕೃಷಿಕರಿಗೆ ತಲುಪಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಕೃಷಿಕರೊಂದಿಗೆ ನಾವು ಸದಾ ಇದ್ದೇವೆ. ಚುನಾವಣೆಯಲ್ಲಿ ಸಹಕರಿಸಿದ ಪಕ್ಷದ ಕಾರ್ಯಕರ್ತರಿಗೆ, ಮತದಾರರ ಬಾಂಧವರಿಗೆ ಹಾಗೇ ಪ್ರತ್ಯಕ್ಷ ಪರೋಕ್ಷವಾಗಿ ಸಹಕರಿಸಿದ ಸರ್ವರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇವೆ ಎಂದು ಕಾಂಗ್ರೆಸ್ ವಲಯ ಅಧ್ಯಕ್ಷ ಅಶೋಕ್ ಪೂಜಾರಿ ಬೊಳ್ಳಾಡಿ ತಿಳಿಸಿದರು.
ರಾಜೀವಿ ಎಸ್.ರೈಗೆ ಅತ್ಯಧಿಕ ಮತ
ಕುಂಬ್ರ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕರುಗಳ ಆಯ್ಕೆ ಚುನಾವಣೆಯಲ್ಲಿ ಗೆಲುವು ಸಾಽಸಿರುವ ಸಹಕಾರ ಭಾರತಿ ಅಭ್ಯರ್ಥಿ. ಸಂಘದ ಮಾಜಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಜೀವಿ ಎಸ್.ರೈಯವರು ಅತ್ಯಧಿಕ 941 ಮತಗಳನ್ನು ಪಡೆದುಕೊಂಡಿದ್ದಾರೆ.
ಅಭ್ಯರ್ಥಿಗಳು ಗಳಿಸಿದ ಮತಗಳ ವಿವರ
ಅಮರನಾಥ ರೈ-793, ಇಕ್ಬಾಲ್ ಹುಸೇನ್-349, ಉಮೇಶ್ ಗೌಡ ಕೆ-778, ಪ್ರಕಾಶ್ಚಂದ್ರ ರೈ ಕೆ-855, ರಕ್ಷಿತ್ ರೈ ಎ-444, ರಾಕೇಶ್ ರೈ-292, ವಿನೋದ್ ಕುಮಾರ್ ಶೆಟ್ಟಿ ಎ-806, ವಿನೋದ್ ಶೆಟ್ಟಿ-368, ಸಾರ್ಥಕ್ ರೈ-361, ಸೂರ್ಯನಾರಾಯಣ ಭಟ್ ಬಿ-696, ವಿಶ್ವನಾಥ ಮೂಲ್ಯ-421, ಸತೀಶ್ ಕರ್ಕೇರ-796, ಭಾಸ್ಕರ ಗೌಡ-423, ಶಿವರಾಮ ಬಿ-796, ಕಲಾವತಿ ಪಿ.ಯಸ್-382, ಮಲ್ಲಿಕಾ ಎ.ಜೆ-851, ರಾಜೀವಿ ಎಸ್.ರೈ-941, ಶಾಂತ ಕುಮಾರಿ-271, ವಿಜಯ ಎಸ್.ಕೆ-358,
ಶ್ರೀನಿವಾಸ ಪ್ರಸಾದ್ ಎಂ-884, ಪ್ರಸನ್ನ ಕುಮಾರ್ ಯಂ-385, ವಸಂತ ಕುಮಾರ್-848 ಮತಗಳನ್ನು ಪಡೆದುಕೊಂಡಿದ್ದಾರೆ.