ಜ.7-8: ಮಡ್ಯೂಟ್ಟು ಈಶ್ವರಮಂಗಲ ತರವಾಡಿನಲ್ಲಿ ಶ್ರೀ ನಾಗ ಪ್ರತಿಷ್ಠೆ

0

ಅರಿಯಡ್ಕ: ಶ್ರೀ ಧೂಮಾವತಿ, ಶ್ರೀ ಪಂಜುರ್ಲಿ ಮತ್ತು ಪರಿವಾರ ದೈವಗಳ ದೈವಸ್ಥಾನ, ಮಡ್ಯೂಟ್ಟು ತರವಾಡು, ಈಶ್ವರಮಂಗಲದಲ್ಲಿ ನೂತನವಾಗಿ ನಿರ್ಮಿಸಿದ ಶ್ರೀ ನಾಗದೇವರ ಕಟ್ಟೆಯಲ್ಲಿ ಶ್ರೀನಾಗ ಪ್ರತಿಷ್ಠೆ ಕಾರ್ಯಕ್ರಮ ಜನವರಿ 7 ಮತ್ತು 8 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.


ಬ್ರಹ್ಮಶ್ರೀ ವಾಸುದೇವ ತಂತ್ರಿ ಕುಂಟಾರು ರವರ ಮಾರ್ಗದರ್ಶನದಲ್ಲಿ, ಬ್ರಹ್ಮಶ್ರೀ ರವೀಶ್ ತಂತ್ರಿ ಕುಂಟಾರು ರವರ ನೇತೃತ್ವದಲ್ಲಿ ಜ.7 ರಂದು ಸರ್ಪ ಸಂಸ್ಕಾರ, ಶುದ್ದಿಕಲಶ, ವಾಸ್ತು ಹೋಮ, ವಾಸ್ತು ಪೂಜೆ ಮತ್ತು ಜನವರಿ 8 ರಂದು ಬೆಳಿಗ್ಗೆ ಘಂಟೆ 9:16 ರ ಕುಂಭ ಲಗ್ನದ ಶುಭಮುಹೂರ್ತದಲ್ಲಿ ಶ್ರೀ ನಾಗ ಪ್ರತಿಷ್ಠೆ ಕಾರ್ಯಕ್ರಮ ನಡೆಯಲಿದೆ. ಮದ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ ಎಂದು ಮಡ್ಯೂಟ್ಟು ತರವಾಡು ಕುಟುಂಬಸ್ಥರು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here