ಪುತ್ತೂರು: ವಳತ್ತಡ್ಕ ಬದ್ರಿಯಾ ಜುಮ್ಮಾ ಮಸೀದಿಯ ಸ್ವಲಾತ್ ವಾರ್ಷಿಕೋತ್ಸವ ಜ.5ರಂದು ಮಸೀದಿ ವಠಾರದಲ್ಲಿ ಮಗ್ರಿಬ್ ನಮಾಝಿನ ಬಳಿಕ ನಡೆಯಲಿದೆ. ವಳತ್ತಡ್ಕ ಬದ್ರಿಯಾ ಜಮ್ಮಾ ಮಸೀದಿ ಖತೀಬ ಇಬ್ರಾಹಿಂ ದಾರಿಮಿ ದುವಾ ನೀಡಲಿದ್ದಾರೆ.
ಮಸೀದಿಯ ಯು.ಪಿ.ಹುಸೈನ್ ಮದನಿ ಸ್ವಾಗತಿಸಲಿದ್ದಾರೆ. ಮಸೀದಿ ಅಧ್ಯಕ್ಷ ಇಬ್ರಾಹಿಂ ಬಾತಿಷಾ ಅಧ್ಯಕ್ಷತೆ ವಹಿಸಲಿದ್ದಾರೆ. ರಾತ್ರಿ 8.30ರಿಂದ ಯು.ಕೆ.ಹನೀಫ್ ನಿಝಾಮಿ ಮೊಗ್ರಾಲ್ರವರು ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿವಿಧ ಗಣ್ಯರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.