ಜ.5: ಬೆಳ್ಳಿಪಾಡಿ ಶ್ರೀ ಸುಬ್ರಮಣ್ಯ ದೇವಸ್ಥಾನದಲ್ಲಿ”ನಾಗ ಮಾಣಿಕ್ಯ” ನಾಟಕ ಪ್ರದರ್ಶನ

0

ಪುತ್ತೂರು: ಶ್ರೀ ಬಾಲಕೃಷ್ಣ ಪೂಜಾರಿ ನಿರಾಲ ಪೆರುವಾಯಿ ಸಾರಥ್ಯದ ಗಯಾಪದ ಕಲಾವಿದೆರ್ ಉಬಾ ರ್ ಅಭಿನಯದ “ನಾಗ ಮಾಣಿಕ್ಯ”ತುಳು ಚಾರಿತ್ರಿಕ ಪೌರಾಣಿಕ ನಾಟಕವು ಜ.5ರಂದು ಬೆಳ್ಳಿ ಪಾಡಿ ಶ್ರೀ ಸುಬ್ರಮಣ್ಯ ದೇವಸ್ಥಾನದ ಕಿರುಷಷ್ಠಿಯ ಪ್ರಯುಕ್ತ ರಾತ್ರಿ 9.30 ಕ್ಕೆ ನಡೆಯಲಿದೆ.

ಬಾಲಕೃಷ್ಣ ಪೂಜಾರಿ ನಿರಾಲ, ಪೆರುವಾಯಿ ಸಾರಥ್ಯದ ಗಯಾಪದ ಕಲಾವಿದೆರ್ ಉಬಾ ರ್ ಅಭಿನಯದ ಈ ವರ್ಷದ ” ಸೂಪರ್ ಹಿಟ್ ನಾಟಕ ತುಳುರಂಗಭೂಮಿಯಲ್ಲಿ ಸಂಚಲನ ಮೂಡಿಸಿ ಕಲಾಭಿಮಾನಿಗಳ ಮೆಚ್ಚುಗೆಯನ್ನು ಗಳಿಸಿದೆ. ರವಿಶಂಕರ ಶಾಸ್ತ್ರೀ ಪುಣಚ ಇವರ ಪರಿಕಲ್ಪನೆಯಲ್ಲಿ ಮೂಡಿ ಬಂದ ಚಾರಿತ್ರಿಕ ತುಳುನಾಟಕ “ನಾಗ ಮಾಣಿಕ್ಯ” ವನ್ನು ರಚಿಸಿ ನಿರ್ದೇಶನವನ್ನು ಮಾಡಿದ್ದಾರೆ.


ಸಂಗೀತ ಮಾಂತ್ರಿಕ ಕಾರ್ತಿಕ್ ಶಾಸ್ತ್ರಿ ಮಣಿಲ ಇವರ ಸಂಗೀತದೊಂದಿಗೆ ,ಉದಯ್ ಆರ್. ಪುತ್ತೂರು ಇವರ ಸಾಹಿತ್ಯದ , ಸಂಧ್ಯಾ ಶ್ರೀ ಹಿರೇಬಂಡಾಡಿ ಇವರ ನೃತ್ಯ ಸಂಯೋಜನೆ,ರಾಜೇಶ್ ಶಾಂತಿನಗರ ಇವರ ಸಲಹೆ, ಸಹಕಾರದೊಂದಿಗೆ ಗುಣಕಾರ ಅಗ್ನಾಡಿ ಅವರ ನಿರ್ವಹಣೆ, ರಂಗ ವಿನ್ಯಾಸದ ವಿಶೇಷ ಪರಿಕಲ್ಪನೆ , ಲಿತು ಸೌಂಡ್ಸ್ ಮತ್ತು ಲೈಟ್ಸ್, ಇದರ ಕೃಷ್ಣ ಮುಂಡ್ಯ, ಸಿದ್ದು ಬೆದ್ರ , ಪ್ರದೀಪ್ ಕಾವು ಮತ್ತು ಶ್ರೀ ನವ್ಯಾ ರಾಜ್ ಕಲ್ಲಡ್ಕ ಇವರ ಮುಖ ವರ್ಣಿಕೆಯೊಂದಿಗೆ ಪ್ರದರ್ಶನಗೊಳ್ಳಲಿದೆ.



ಕಲಾವಿದರಾಗಿ ಕಿಶೋರ್ ಜೋಗಿ ಉಬಾರ್, ದಿವಾಕರ್ ಸು ರ್ಯ , ಸತೀಶ್ ಶೆಟ್ಟಿ ಹೆನ್ನಾಳ, ರಂಗಯ್ಯ ಬಲ್ಲಾಳ್ ಕೆದಂಬಾಡಿ ಬೀಡು, ರಾಜೇಶ್ ಶಾಂತಿ ನಗರ, ರಾಜಶೇಖರ ಶಾಂತಿ ನಗರ, ಅನುಷಾ ಜೋಗಿ ಪುರುಷರ ಕಟ್ಟೆ, ಸಂಧ್ಯಾ ಹಿರೇಬಂಡಾಡಿ, ಸುನಿಲ್ ಪೆರ್ನೆ, ಚೇತನ್ ಪಡೀಲ್, ಲಕ್ಷ್ಮಣ ಬೆಳ್ಳಿಪ್ಪಾಡಿ, ಉಷಾ ಲಕ್ಷ್ಮಣ ಬೆಳ್ಳಿಪ್ಪಾಡಿ, ಉದಯ್. ಆರ್.ಪುತ್ತೂರು, ಅನೀಶ್ ಉಬಾರ್ , ಎ. ಎನ್.ಕೊಳoಬೆ ರಾಮಕುಂಜ, ಭರತ್ ಕುಮಾರ್ ಶಾಂತಿನಗರ, ಲಿತಿನ್ ಶಾಂತಿ ನಗರ, ಹರ್ಷ ಶಾಂತಿ ನಗರ, ಹೃತೀಕಾ ಕೆ ಬೆಳ್ಳಿಪ್ಪಾಡಿ, ಕು ವಿಲಾಸಿನಿ ಶಾಂತಿನಗರ , ಮನ್ವಿತ್ ಬೆಳ್ಳಿಪ್ಪಾಡಿ, ಬಿ. ಪ್ರಣಿ ತ. ಶಾಂತಿ ನಗರ, ಇವರ ಅಮೋಘ ಅಭಿನಯದಲ್ಲಿ ನಾಟಕವು ಮೂಡಿ ಬರಲಿದೆ.


9902543273,8073641071,9008136330 9980389016, ನಾಟಕ ಪ್ರದರ್ಶನದ ಬುಕಿಂಗ್ ಗೆ ಈ ದೂರವಾಣಿ ಸಂಖ್ಯೆ ಯನ್ನು ಸಂಪರ್ಕಿಸುವಂತೆ ಸಂಸ್ಥೆಯ ಪ್ರಕಟನೆ ತಿಳಿಸಿದೆ.

LEAVE A REPLY

Please enter your comment!
Please enter your name here