ರಾಮಕುಂಜ: ಕಡಬ ತಾಲೂಕಿನ ಹಳೆನೇರೆಂಕಿ ಗ್ರಾಮದ ನೇರೆಂಕಿಗುತ್ತು ಶ್ರೀ ಚಕ್ರವರ್ತಿ ಕೊಡಮಣಿತ್ತಾಯ ದೈವಸ್ಥಾನ ಮತ್ತು ಶ್ರೀ ಬ್ರಹ್ಮಬೈದರ್ಕಳ ಗರಡಿಯಲ್ಲಿ ಜ.12 ಮತ್ತು 13ರಂದು ಶ್ರೀ ದೈವಗಳ ನೇಮೋತ್ಸವ ಮತ್ತು ಶ್ರೀ ಬ್ರಹ್ಮಬೈದರ್ಕಳ ಜಾತ್ರೋತ್ಸವ ನಡೆಯಲಿದ್ದು ಆ ಪ್ರಯುಕ್ತ ಗೊನೆ ಮುಹೂರ್ತ ಜ.6ರಂದು ನಡೆಯಿತು.
ಶಿವಪ್ಪ ಗೌಡ ಅರಸಿನಮಕ್ಕಿ ಗೊನೆ ಮುಹೂರ್ತ ನೆರವೇರಿಸಿದರು. ಈ ಸಂದರ್ಭದಲ್ಲಿ ದೈವಸ್ಥಾನದ ಆಡಳಿತ ಸಮಿತಿ ಕಾರ್ಯದರ್ಶಿ ಕಿರಣ್ ಪಾದೆ, ಜೊತೆ ಕಾರ್ಯದರ್ಶಿ ಶ್ಯಾಮ್‌ಪ್ರಸಾದ್ ಕಾಯಾರ, ಪ್ರಮುಖರಾದ ಸತ್ಯನಾರಾಯಣ ಭಟ್, ಸಂಜೀವ ಪೂಜಾರಿ ಬಟ್ಲಡ್ಕ, ಜನಾರ್ದನ ಪೂಜಾರಿ ಕದ್ರ, ದಾಮೋದರ ಕೊಂಬಾರು, ರುಕ್ಮಯ್ಯ ಗೌಡ, ಸಂಜೀವ ಗೌಡ ಮುಳಿಮಜಲು, ಜತ್ತಪ್ಪ ಗೌಡ ಬರೆಂಬೆಟ್ಟು, ವೆಂಕಪ್ಪ ಗೌಡ ಬರೆಂಬೆಟ್ಟು, ಪೂವಪ್ಪ ಗೌಡ ಕುಂಞಿರೋಡಿ, ಪದ್ಮಯ್ಯ ಪೂಜಾರಿ ಕದ್ರ, ಪುರುಷೋತ್ತಮ ಬರೆಂಬೆಟ್ಟು, ಯಶೋಧರ ಪೆರಿಯಡ್ಕ, ಅಣ್ಣು ಪೂಜಾರಿ ಸಾಂತ್ಯ, ಸಂಕಪ್ಪ ಪೂಜಾರಿ ಸಾಂತ್ಯ, ಜಯೇಶ್ ಸಾಂತ್ಯ, ಆಕಾಶ್ ಕದ್ರ, ಮೇದಪ್ಪ ಪೂಜಾರಿ ಉಂಡಿಲ, ಮೋನಪ್ಪ ಗೌಡ ಬರೆಂಬೆಟ್ಟು, ಲಿಂಗಪ್ಪ ಗೌಡ ಪಾತೃಮಾಡಿ, ದಾಮೋದರ ಗೌಡ ಬರೆಂಬೆಟ್ಟು, ಪುರುಷೋತ್ತಮ ಕದ್ರ ಕ್ವಾಟ್ರಸ್, ಕೇಶವ ಹಿರಿಂಜ, ದೀಕ್ಷಿತ್ ಕದ್ರ, ಉಮೇಶ್ ಹೊಸಮಾರಡ್ಡ, ದುಗ್ಗಪ್ಪ ಗೌಡ ಹೊಸಮಾರಡ್ಡ, ಗರಡಿಯ ಪಾತ್ರಿಗಳಾದ ಕೋಟಿ ಮತ್ತು ಚೆನ್ನಯ ಕೊಂಡಾಡಿಕೊಪ್ಪ ಹಾಗೂ ಇನ್ನಿತರರು ಉಪಸ್ಥಿತರಿದ್ದರು.