ಪುತ್ತೂರು: ಕೆದಿಲ ಗ್ರಾಮದ ದೇಂತಡ್ಕ ಶ್ರೀ ವನದುರ್ಗಾ ದೇವಸ್ಥಾನದಲ್ಲಿ ಜ.14ರಿಂದ ನಡೆಯಲಿರುವ ವರ್ಷಾವಧಿ ಜಾತ್ರೋತ್ಸವದ ಗೊನೆ ಮೂಹೂರ್ತವು ಜ.07ರಂದು ನೆರವೇರಿತು.
ದೇವಸ್ಥಾನದ ಅರ್ಚಕ ವೇ.ಮೂ ವಡ್ಯ ನಾರಾಯಣ ಭಟ್ ಗೊನೆ ಮುಹೂರ್ತ ನೆರವೇರಿಸಿದರು. ದೇವಸ್ಥಾನದ ಶ್ರೀ ವನದುರ್ಗಾ ಸೇವಾ ಟ್ರಸ್ಟಿನ ಅಧ್ಯಕ್ಷ ಜತ್ತನಕೋಡಿ ಸುಂದರ ಭಟ್, ಟ್ರಸ್ಟಿಗಳಾದ ಅನಂತಕೃಷ್ಣ ಮುರ್ಗಜೆ, ಗಿರಿಶಂಕರ ಕೈಲಾರ್, ಅಂಗರಾಜೆ ಈಶ್ವರ ಜೋಯಿಸ, ಜತ್ತನಕೋಡಿ ಶಂಕರ ಭಟ್, ರಾಮಕೃಷ್ಣ ಪುಂಜತ್ತೊಡಿ, ರಘು ಅಜಿಲ ಮಿತ್ತಿಲ, ಕೃಷ್ಣಾನಂದ ಬರೆಂಗಾಯಿ, ದೇವತಾ ಸಮಿತಿ ಅಧ್ಯಕ್ಷ ಶ್ಯಾಮ ನಾರಾಯಣ ಸದಸ್ಯರುಗಳಾದ ಗೋಪಾಲಕೃಷ್ಣ ಭಟ್ ಒಳಂಗಜೆ , ಸತೀಶ್ ಮುರುವ, ಮೋಹನ ಕಜೆ, ಪೂಜಾ ಸಹಾಯಕರಾದ ಗಣೇಶ್ ಮತ್ತು ರತ್ನಾಕರ ಹಾಗೂ ಭಕ್ತಾಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.