ಬಲ್ನಾಡು ಸಮೃದ್ಧಿ ಸಂಜೀವಿನಿ ಒಕ್ಕೂಟದ ಮಹಾಸಭೆ

0

ಪುತ್ತೂರು: ಸಮೃದ್ಧಿ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಬಲ್ನಾಡು ಇದರ 2023-24 ನೇ ಸಾಲಿನ ವಾರ್ಷಿಕ ಮಹಾಸಭೆಯು ಜ.06ರಂದು ಒಕ್ಕೂಟದ ಅಧ್ಯಕ್ಷೆ ಮಮತಾರವರ ಅಧ್ಯಕ್ಷತೆಯಲ್ಲಿ ಬಲ್ನಾಡು ಗ್ರಾ.ಪಂ ಸಭಾಂಗಣದಲ್ಲಿ ನಡೆಯಿತು.


ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಬಲ್ನಾಡು ಗ್ರಾ. ಪಂ. ಅಧ್ಯಕ್ಷೆ ಪರಮೇಶ್ವರಿ ಬಿ .ಆರ್. ಮಾತನಾಡಿ, ಒಕ್ಕೂಟ ಇನ್ನಷ್ಟು ಉತ್ತಮ ಕೆಲಸಗಳನ್ನು ಮುಂದುವರಿಸಿ ಮಹಿಳೆಯರು ಇನ್ನಷ್ಟು ಪ್ರಯೋಜನಗಳನ್ನು ಪಡೆಯುವಂತಾಗಲಿ ಎಂದು ಹಾರೈಸಿದರು.


ನ್ಯಾಯವಾದಿ ರಾಜೇಶ್ವರಿ ಮಾತನಾಡಿ, ಲಿಂಗತ್ವಧಾರಿತ ಅಸಮಾನತೆ ವಿಷಯವಾಗಿ ಸ್ವ ಸಹಾಯ ಸಂಘದ ಸದಸ್ಯರಿಗೆ ಮಾಹಿತಿ ಹಾಗೂ ಸಮಾಲೋಚನೆ ನಡೆಸಿದರು. ತಾಲೂಕು ವಲಯ ಮೇಲ್ವಿಚಾರಕಿ ನಮಿತಾರವರು ಯೋಜನೆಯನ್ನುದೇಶಿಸಿ ಮಾತನಾಡಿದರು. ಅಮೂಲ್ಯ ಸಾಕ್ಷರತಾ ಕೇಂದ್ರದ ಗೀತಾ, ಬಲ್ನಾಡು ಗ್ರಾ.ಪಂ ಪಿಡಿಓ ದೇವಪ್ಪ ಪಿ.ಆರ್., ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಸುಜಾತ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಘನತ್ಯಾಜ್ಯ ಘಟಕಕ್ಕೆ ನಿರ್ವಹಣೆಯಲ್ಲಿ ಸಹಕಾರ ನೀಡಿದ ಪ್ರೇಮಲತಾ ಸಾರ್ಯ ರವರನ್ನು ಸನ್ಮಾನಿಸಲಾಯಿತು. ಗ್ರಾ.ಪಂ ಅಧ್ಯಕ್ಷರು ಹಾಗೂ ಸದಸ್ಯರನ್ನು ಗೌರವಿಸಲಾಯಿತು. ಅತ್ಯುತ್ತಮವಾಗಿ ನಿರ್ವಹಿಸಿದ ಶ್ರೀ ಉಳ್ಳಾಲ್ತಿ ಸ್ತ್ರೀ ಶಕ್ತಿ ಸ್ವಸಹಾಯ ಸಂಘ ಬಲ್ನಾಡು, ಶ್ರೀ ಲಕ್ಷ್ಮೀ ಸ್ತ್ರೀ ಶಕ್ತಿ ಸ್ವಸಹಾಯ ಸಂಘ ಸಾಜ, ಮಾತೃಶ್ರೀ ಸಂಜೀವಿನಿ ಸ್ವಸಹಾಯ ಸಂಘ ಮುರುಂಗಿ ಸಂಘಗಳಿಗೆ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು. ಲಕ್ಕಿ ಚೀಟಿಯ ಮೂಲಕ ಅದೃಷ್ಟ ಮಹಿಳೆಯನ್ನು ಆಯ್ಕೆ ಮಾಡಿ ಬಹುಮಾನ ನೀಡಲಾಯಿತು.


ಸ್ಥಳೀಯ ಸಮುದಾಯ ಸಂಪನ್ಮೂಲ ವ್ಯಕ್ತಿ ಉಮಾವತಿ.ಕೆ.ಪ್ರಾರ್ಥಿಸಿದರು. ಸ್ಥಳೀಯ ಸಮುದಾಯ ಸಂಪನ್ಮೂಲ ವ್ಯಕ್ತಿ ಅಕ್ಷತಾ. ಎಂ.ಕೆ. ಸ್ವಾಗತಿಸಿದರು. ಒಕ್ಕೂಟದ ಕಾರ್ಯದರ್ಶಿ ವರದಿ ವಾಚಿಸಿದರು. ಲೆಕ್ಕಪರಿಶೋಧನಾ ವರದಿಯನ್ನು ಕೃಷಿ ಉದ್ಯೋಗ ಸಖಿ ಪದ್ಮಿನಿ ಮಂಡಿಸಿದರು. ಕೃಷಿ ಸಖಿ ವಿಮಲ ವಂದಿಸಿದರು. ಮುಖ್ಯ ಪುಸ್ತಕ ಬರಹಗಾರ ಅಂಬಿಕಾ.ಕೆ. ಕಾರ್ಯಕ್ರಮ ನಿರೂಪಿಸಿದರು. ಬಿ. ಸಿ ಸಖಿ ಶೋಭಾ ಕೆ.ಆರ್, ಘನತ್ಯಾಜ್ಯ ಸಿಬ್ಬಂದಿ ಅರುಣಾ, ಚೇತನ, ಪಶು ಸಖಿ ದೀಪಿಕಾ , ಪದಾಧಿಕಾರಿಗಳಾದ ಮಮತಾ, ಯಮುನಾ, ಜ್ಯೋತಿ, ಸುಂದರಿ, ಯಶೋಧ, ಮೀನಾಕ್ಷಿ ಸಹಕರಿಸಿದರು.

ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕರು, ಸಮುದಾಯ ಆರೋಗ್ಯ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಒಕ್ಕೂಟದ ಪದಾಧಿಕಾರಿಗಳು, ಸ್ವಸಹಾಯ ಸಂಘಗಳ ಸದಸ್ಯರು, ಗ್ರಾಮ ಪಂಚಾಯತ್ ಸದಸ್ಯರು, ಪಂಚಾಯತ್ ಸಿಬ್ಬಂದಿಗಳು, ಒಕ್ಕೂಟದ ಎಲ್ಲ ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here