ಅರಿಯಡ್ಕ: ಶ್ರೀ ಕೃಷ್ಣ ಭಜನಾ ಮಂದಿರ ರಿ ಕೌಡಿಚ್ಚಾರು -ಅರಿಯಡ್ಕ ಇದರ 43 ನೇ ವರ್ಷದ ಅರ್ಧ ಏಕಾಹ ಭಜನಾ ಮಂಗಲೋತ್ಸವ ಹಾಗೂ ಯಕ್ಷಗಾನ ಬಯಲಾಟ ಜ.7 ರಂದು ಶ್ರೀ ಕೃಷ್ಣ ಭಜನಾ ಮಂದಿರದಲ್ಲಿ ನಡೆಯಿತು.
ಬೆಳಿಗ್ಗೆ ಗಣಪತಿ ಹೋಮ, ಶ್ರೀ ರಾಮ ಭಜನಾ ಮಂದಿರ ಕೆದಂಬಾಡಿ ಇದರ ಮಾಜಿ ಅಧ್ಯಕ್ಷ ಕಡಮಜಲು ಸುಭಾಷ್ ರೈಯವರು ದೀಪ ಬೆಳಗಿಸಿ ಅರ್ಧ ಏಕಾಹ ಭಜನೆಗೆ ಚಾಲನೆ ನೀಡಿದರು.ಸೂರ್ಯಾಸ್ತ ಮಾನದ ವರೆಗೆ ಭಜನಾ ತಂಡಗಳಾದ,ಶ್ರೀ ಕೃಷ್ಣ ಭಜನಾ ಮಂದಿರ ಕೌಡಿಚ್ಚಾರು-ಅರಿಯಡ್ಕ ಮತ್ತು ಶ್ರೀ ಕೃಷ್ಣ ಮಹಿಳಾ ಭಜನಾ ಮಂಡಳಿ ಕೌಡಿಚ್ಚಾರು, ತುಡರ್ ಭಜನಾ ಸಂಘ ನನ್ಯ ಕಾವು, ಶ್ರೀ ರಾಮ ಭಜನಾ ಮಂಡಳಿ ಸನ್ಯಾಸಿ ಗುಡ್ಡೆ ಕೆದಂಬಾಡಿ, ಶ್ರೀ ದುರ್ಗಾ ವಾಹಿನಿ ಮಹಿಳಾ ಭಜನಾ ಸಂಘ ಮಾಣಿಯಡ್ಕ, ಶ್ರೀ ಮಹಾಲಿಂಗೇಶ್ವರ ಮಹಿಳಾ ಭಜನಾ ಸಂಘ ಬೆಟ್ಟಂಪಾಡಿ, ಶ್ರೀ ಸರ್ವ ಶಕ್ತಿ ಮಹಿಳಾ ಭಜನಾ ಮಂಡಳಿ ಪಡುಮಲೆ, ಶ್ರೀ ಮಹಾಲಕ್ಷ್ಮಿ ವನಿತಾ ಭಜನಾ ಮಂಡಳಿ ಸುಳ್ಯ ಪದವು, ಶ್ರೀ ಅಯ್ಯಪ್ಪ ಮಹಿಳಾ ಭಜನ ಸಂಘ ಪೆರಿಗೇರಿ, ಶ್ರೀ ರಾಮಕೃಷ್ಣ ಮತ್ತು ಶ್ರೀ ಮುತ್ತು ಮಾರಿಯಮ್ಮ ಭಜನಾ ಮಂಡಳಿ ಕೌಡಿಚ್ಚಾರು, ಶ್ರೀ ಮಹಾಲಕ್ಷ್ಮಿ ಭಜನಾ ಮಂಡಳಿ ದೊಡ್ಡಡ್ಕ, ಮತ್ತು ಶ್ರೀ ವೆಂಕಟರಮಣ ಭಜನಾ ಮಂಡಳಿ ಮಡ್ಯಂಗಳ ಇವರಿಂದ ಭಜನಾ ಸಂಕೀರ್ತನೆ ನಡೆಯಿತು.
ನಾಗನ ಕಟ್ಟೆಯಲ್ಲಿ ವಿಶೇಷ ತಂಬಿಲ ಸೇವೆ ನಡೆಯಿತು.ಮಧ್ಯಾಹ್ನ ಶ್ರೀ ಕೃಷ್ಣ ದೇವರಿಗೆ ಮಹಾಮಂಗಳಾರತಿ, ಸಂಜೆ ಸೂರ್ಯಾಸ್ತ ಸಮಯದಲ್ಲಿ ಭಜನಾ ಸಮಾಪ್ತಿಗೊಂಡಿತು.ರಾತ್ರಿ ಯಕ್ಷಗಾನ ಸೇವಾರ್ಥಿಗಳಿಂದ ಶ್ರೀ ಜ್ಞಾನ ಶಕ್ತಿ ಸುಬ್ರಹ್ಮಣ್ಯ ಕೃಪಾ ಪೋಷಿತ ಯಕ್ಷಗಾನ ಮಂಡಳಿ ನಾಗವೃಜ ಕ್ಷೇತ್ರ ಪಾವಂಜೆ ಮೇಳದವರಿಂದ ಯಕ್ಷ ಧ್ರುವ ಪಟ್ಲ ಸತೀಶ್ ಶೆಟ್ಟಿಯವರ ಸಾರಥ್ಯದಲ್ಲಿ ಶ್ರೀ ದೇವಿ ಮಹಾತ್ಮೆ ಕಥೆ ನಡೆಯಿತು.
ಅನ್ನ ಸಂತರ್ಪಣೆ….
ಕಾರ್ಯಕ್ರಮದಲ್ಲಿ 2000 ಮಿಕ್ಕಿ ಜನರು ಅನ್ನ ಪ್ರಸಾದ ಸ್ವೀಕರಿಸಿದರು.ಅನ್ನದಾನದ ಪ್ರಾಯೋಜಕತ್ವವನ್ನು ಕುತ್ಯಾಡಿ ಸಂದೀಪ್,ಸುಜನಿ, ಶಿವಾನಿ ಬೆಂಗಳೂರು, ಅರಿಯಡ್ಕ ಕಿಶೋರ್ ಶೆಟ್ಟಿ,ಶಶಿ ಕುಮಾರ್ ರೈ ಬಾಲ್ಯೋಟ್ಟು ಮತ್ತು ಸುಧಾಕರ ಸಿ ರೈ ಪುಣೆ ವಹಿಸಿದ್ದರು.ಆಕರ್ಷಕ ಸಿಡಿಮದ್ದು ಪ್ರದರ್ಶನವನ್ನು ಕೋಟಿ ಚೆನ್ನಯ ಗೆಳೆಯರ ಬಳಗ ಪಾಪೆಮಜಲು, ಹೂವಿನ ಅಲಂಕಾರವನ್ನು ವಿವೇಕಾನಂದ ಯುವಕ ವೃಂದ ಕೌಡಿಚ್ಚಾರು, ಬ್ಯಾಂಡ್ ವಾದ್ಯ ಸೇವೆಯನ್ನು ಸಂದೀಪ್ ದೇವಾಡಿಗ ಅರಿಯಡ್ಕ ಮತ್ತು ಬಳಗ, ಸ್ಮರಣಿಕೆಯನ್ನು ಮರದಮುತ್ತು ಕೌಡಿಚ್ಚಾರು ನೀಡಿ ಸಹಕರಿಸಿದರು.
ಸನ್ಮಾನ…
ಮೇಳದ ಕಲಾವಿದರಾದ ಭಾಗವತ ಪ್ರಫುಲ್ಲ ಚಂದ್ರ ನೆಲ್ಯಾಡಿ ಮತ್ತು ಮಾಧವ ಬಂಗೇರಾ ರವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಶಾಸಕರ ಭೇಟಿ…
ಕೌಡಿಚ್ಚಾರು ಪ್ರಧಾನ ರಸ್ತೆಯಿಂದ ಮಂದಿರದ ತನಕ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಿರುವ ಶಾಸಕ ಅಶೋಕ್ ಕುಮಾರ್ ರೈಯವರು ಕ್ಷೇತ್ರಕ್ಕೆ ಭೇಟಿ ನೀಡಿ
ದೀಪ ಬೆಳಗಿಸಿ ರಸ್ತೆಯನ್ನು ಲೋಕಾರ್ಪಣೆ ಮಾಡಿದರು.ಕಾರ್ಯಕ್ರಮದಲ್ಲಿ ಶಾಸಕರನ್ನು ಮಂದಿರದ ವತಿಯಿಂದ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀ ಕೃಷ್ಣ ಭಜನಾ ಮಂದಿರದ ಪದಾಧಿಕಾರಿಗಳು ಹಾಗೂ ಸದಸ್ಯರು, ಭಜನಾ ಸಂಕೀರ್ತನಾ ಸಮಿತಿ ಪದಾಧಿಕಾರಿಗಳು ಹಾಗೂ ಸದಸ್ಯರು, ಹಾಗೂ ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಸಹಕರಿಸಿದರು.