ನಾಮ ಪತ್ರ ಸಲ್ಲಿಕೆಗೆ ಜ. 11 ಕೊನೆಯ ದಿನ, 68 ಗ್ರಾಮಗಳ 1181 ಆರ್ಹ ಮತದಾರರು
ಪುತ್ತೂರು: ಪುತ್ತೂರು- ಕಡಬ ತಾಲೂಕಿನ 68 ಗ್ರಾಮಗಳ ವ್ಯಾಪ್ತಿಯನ್ನು ಹೊಂದಿರುವ ಪುತ್ತೂರು ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ (ಪಿಎಲ್‌ಡಿ) ಬ್ಯಾಂಕ್‌ಗೆ ಮುಂದಿನ 5 ವರ್ಷಗಳ ಅವಧಿಯ ನೂತನ ಆಡಳಿತ ಮಂಡಳಿ ಸದಸ್ಯರ ಆಯ್ಕೆಗಾಗಿ ಜ.19ರಂದು ಚುನಾವಣೆ ನಿಗದಿಯಾಗಿದೆ.ಪುತ್ತೂರು ಕೋ-ಆಪರೇಟಿವ್ ಟೌನ್ ಬ್ಯಾಂಕ್ ಸಭಾಂಗಣ ಮತ್ತು ವಠಾರದಲ್ಲಿ ಪೂರ್ವಾಹ್ನ 9 ಗಂಟೆಯಿಂದ ಅಪರಾಹ್ನ 4 ಗಂಟೆಯವರೆಗೆ ಚುನಾವಣೆ ನಡೆಯಲಿದೆ. ಜ.11 ರಂದು ನಾಮ ಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ.
ಬ್ಯಾಂಕಿನ ಒಟ್ಟು 14 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಸಾಮಾನ್ಯ ಸ್ಥಾನ-7, ಪರಿಶಿಷ್ಟ ಜಾತಿ ಮೀಸಲು-1 ಸ್ಥಾನ, ಪರಿಶಿಷ್ಟ ಪಂಗಡ ಮೀಸಲು-1 ಸ್ಥಾನ, ಹಿಂದುಳಿದ ವರ್ಗ ಎ’ ಮೀಸಲು-1 ಸ್ಥಾನ, ಹಿಂದುಳಿದ ವರ್ಗಬಿ’ ಮೀಸಲು-1 ಸ್ಥಾನ, ಮಹಿಳಾ ಮೀಸಲು-2 ಸ್ಥಾನ ಹಾಗೂ ಸಾಲಗಾರರಲ್ಲದ ಕ್ಷೇತ್ರದ 1 ಸ್ಥಾನ ಸೇರಿದಂತೆ ಒಟ್ಟು 14 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಸಾಲಗಾರ ಕ್ಷೇತ್ರದಿಂದ ಒಟ್ಟು ಹದಿಮೂರು ವಲಯಗಳನ್ನಾಗಿ ವಿಂಗಡಿಸಿ ಮೀಸಲು ನಿಗದಿ ಪಡಿಸಲಾಗಿದೆ.ಸಾಲಗಾರರಲ್ಲದ ಕ್ಷೇತ್ರದಿಂದ ಬ್ಯಾಂಕಿನ ಕಾರ್ಯಕ್ಷೇತ್ರದ ಯಾವುದೇ ಅರ್ಹ ಸದಸ್ಯ ಸ್ಪರ್ಧೆ ಮಾಡಬಹುದಾಗಿದೆ.
ವಲಯವಾರು ಮೀಸಲು
ಪುತ್ತೂರು(ಸಾಮಾನ್ಯ)
ಗ್ರಾಮಗಳ ವ್ಯಾಪ್ತಿ- ಪುತ್ತೂರು ಕಸ್ಭಾ, ಆರ್ಯಾಪು, ಕೆಮ್ಮಿಂಜೆ, ಕಬಕ, ಕುಡಿಪ್ಪಾಡಿ ಹಾಗೂ ಬಲ್ನಾಡು)
ನರಿಮೊಗ್ರು(ಪ.ಜಾತಿ)
ಗ್ರಾಮಗಳ ವ್ಯಾಪ್ತಿ- ನರಿಮೊಗರು, ಶಾಂತಿಗೋಡು, ಸರ್ವೆ, ಪುಣ್ಚಪ್ಪಾಡಿ ಹಾಗೂ ಸವಣೂರು)
ಕೋಡಿಂಬಾಡಿ(ಸಾಮಾನ್ಯ)
ಗ್ರಾಮಗಳ ವ್ಯಾಪ್ತಿ- ಕೋಡಿಂಬಾಡಿ, ಬನ್ನೂರು, ಚಿಕ್ಕಮುಡ್ನೂರು, ಬೆಳ್ಳಿಪ್ಪಾಡಿ ಹಾಗೂ ಪಡ್ನೂರು)
ಉಪ್ಪಿನಂಗಡಿ(ಸಾಮಾನ್ಯ)
ಗ್ರಾಮಗಳ ವ್ಯಾಪ್ತಿ- ಉಪ್ಪಿನಂಗಡಿ, 34-ನೆಕ್ಕಿಲಾಡಿ, ಹಿರೇಬಂಡಾಡಿ, ಬಜತ್ತೂರು ಹಾಗೂ ಗೋಳಿತ್ತೊಟ್ಟು)
ಆಲಂಕಾರು(ಪ.ಪಂಗಡ)
ಗ್ರಾಮಗಳ ವ್ಯಾಪ್ತಿ-ಅಲಂಕಾರು, ಕ್ಯೊಲ, ಹಳೇ ನೇರಂಕಿ, ರಾಮಕುಂಜ ಹಾಗೂ ಆಲಂತಾಯ)
ನೆಲ್ಯಾಡಿ(ಸಾಮಾನ್ಯ) ಗ್ರಾಮಗಳ ವ್ಯಾಪ್ತಿ- ನೆಲ್ಯಾಡಿ, ಕೌಕ್ರಾಡಿ, ಇಚ್ಲಂಪಾಡಿ, ಕೋಣಾಲು ಹಾಗೂ ಶಿರಾಡಿ)
ಕಡಬ(ಮಹಿಳೆ)
ಗ್ರಾಮಗಳ ವ್ಯಾಪ್ತಿ-ಕಡಬ, ಕೋಡಿಂಬಾಳ, 103-ನೆಕ್ಕಿಲಾಡಿ, ಕೋಣಾಜೆ ಹಾಗೂ ರೆಂಜಲಾಡಿ)
ಬಂಟ್ರ(ಹಿಂದುಳಿದ ವರ್ಗ ಬಿ)
ಗ್ರಾಮಗಳ ವ್ಯಾಪ್ತಿ-ಬಂಟ್ರ, ಐತ್ತೂರು, ಕೊಂಬಾರು, ಬಿಳಿನೆಲೆ ಹಾಗೂ ಶಿರಿಬಾಗಿಲು)
ಬೆಳಂದೂರು(ಮಹಿಳೆ)
ಗ್ರಾಮಗಳ ವ್ಯಾಪ್ತಿ-ಬೆಳಂದೂರು, ಕಾಮಣ, ಕಾಣಿಯೂರು, ಕುದ್ಮಾರು, ಚಾರ್ವಕ ಹಾಗೂ ದೋಳ್ಪಾಡಿ)
ಬೆಟ್ಟಂಪಾಡಿ(ಸಾಮಾನ್ಯ)
ಗ್ರಾಮಗಳ ವ್ಯಾಪ್ತಿ- ಬೆಟ್ಟಂಪಾಡಿ, ಇರ್ದೆ, ಪಾಣಾಜೆ, ನಿಡ್ಪಳ್ಳಿ ಹಾಗೂ ಬಡಗನ್ನೂರು)
ಕೆದಂಬಾಡಿ(ಸಾಮಾನ್ಯ) ಗ್ರಾಮಗಳ ವ್ಯಾಪ್ತಿ- ಕೆದಂಬಾಡಿ, ಕೊಳ್ಳಿಗೆ, ಕೆಯ್ಯೂರು, ಕುರಿಯ, ಪಾಲ್ತಾಡಿ ಹಾಗೂ ಮುಂಡೂರು)
ಬಲ್ಯ(ಹಿಂದುಳಿದ ವರ್ಗ ಎ)
ಗ್ರಾಮಗಳ ವ್ಯಾಪ್ತಿ- ಬಲ್ಯ, ಪೆರಾಬೆ, ಕುಂತೂರು, ನೂಜಿಬಾಳ್ತಿಲ ಹಾಗೂ ಕುಟ್ರುಪಾಡಿ)
ಅರಿಯಡ್ಕ (ಸಾಮಾನ್ಯ) ಗ್ರಾಮಗಳ ವ್ಯಾಪ್ತಿ- ಅರಿಯಡ್ಕ, ಮಾಡ್ನೂರು, ಒಳಮೊಗ್ರು, ನೆಟ್ಟಣಿಗೆಮುಡ್ನೂರು ಹಾಗೂ ಪಡುವನ್ನೂರು ಗ್ರಾಮಗಳನ್ನು ಒಳಗೊಂಡಿದೆ.
ಸ್ಪರ್ಧಿಸಲು ಇಚ್ಚಿಸುವ ಬ್ಯಾಂಕಿನ ಅರ್ಹ ಸದಸ್ಯರು ತಮ್ಮ ನಾಮಪತ್ರವನ್ನು ಬ್ಯಾಂಕಿನ ಕೇಂದ್ರ ಕಛೇರಿಯಲ್ಲಿ ಜ.11ರವರೆಗೆ ಸಲ್ಲಿಸಲು ಅವಕಾಶವಿದೆ. ಪೂರ್ವಾಹ್ನ 10 ಗಂಟೆಯಿಂದ ಅಪರಾಹ್ನ 12.30 ಗಂಟೆಯವರೆಗೆ ನಾಮಪತ್ರ ಸಲ್ಲಿಸಲು ಅವಕಾಶವಿದೆ ಎಂದು ಚುನಾವಣಾ ಅಧಿಕಾರಿ ಎಸ್.ಎಂ. ರಘುರವರು ತಿಳಿಸಿದ್ದಾರೆ
ಮೂರು ಮಂದಿಯಿಂದ ನಾಮ ಪತ್ರ ಸಲ್ಲಿಕೆ
ಈಗಾಗಲೇ ಬಿಜೆಪಿ ಬೆಂಬಲಿತ ಸಹಕಾರ ಭಾರತಿಯಿಂದ ಒಬ್ಬರು ಹಾಗೂ ಕಾಂಗ್ರೆಸ್ ಬೆಂಬಲಿತ ಇಬ್ಬರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.ಸಾಲಗಾರ ಕ್ಷೇತ್ರದಲ್ಲಿ ನರಿಮೊಗ್ರು ವಲಯ ಪ.ಜಾತಿ ಮೀಸಲು ಸ್ಥಾನದಿಂದ ಸಹಕಾರ ಭಾರತಿ ಅಭ್ಯರ್ಥಿಯಾಗಿ ಬಾಬು ಮುಗೇರ ಬಾವಿಕಟ್ಟೆ, ಅರಿಯಡ್ಕ ವಲಯ ಸಾಮಾನ್ಯ ಮೀಸಲು ಸ್ಥಾನದಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ವಿಕ್ರಂ ರೈ ಸಾಂತ್ಯ, ಕೋಡಿಂಬಾಡಿ ವಲಯ ಸಾಮಾನ್ಯ ಮೀಸಲು ಸ್ಥಾನದಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ರಾಜಶೇಖರ ಜೈನ್ ನಾಮಪತ್ರ ಸಲ್ಲಿಸಿದ್ದಾರೆ. ಜ. 9 ರಂದು ಯಾವುದೇ ನಾಮ ಪತ್ರ ಸಲ್ಲಿಕೆಯಾಗಿಲ್ಲ
ಮತದಾನಕ್ಕೆ ಗುರುತು ಚೀಟಿ ಕಡ್ಡಾಯ
ಮತದಾನಕ್ಕೆ ಗುರುತು ಚೀಟಿ ಕಡ್ಡಾಯವಾಗಿದ್ದು, ಸದಸ್ಯರುಗಳು ಗುರುತು ಚೀಟಿಯನ್ನು ಪಡೆಯದಿದ್ದಲ್ಲಿ ೨ ಭಾವಚಿತ್ರವನ್ನು ಬ್ಯಾಂಕಿಗೆ ನೀಡಿ, ಗುರುತಿನ ಚೀಟಿಯನ್ನು ಜ. ೧೮ ರೊಳಗೆ ಪಡೆದುಕೊಳ್ಳಬಹುದು.
68 ಗ್ರಾಮಗಳ 1181 ಆರ್ಹ ಮತದಾರರು
ಪುತ್ತೂರು ಮತ್ತು ಕಡಬ ತಾಲೂಕಿನ 68 ಗ್ರಾಮಗಳ 1181 ಆರ್ಹ ಮತದಾರರು ಚುನಾವಣೆಯಲ್ಲಿ ಮತಚಲಾಯಿಸಲಿದ್ದಾರೆ.