ಅಧ್ಯಕ್ಷೆ: ವಸಂತಿ ಪರ್ಪುಂಜ, ಉಪಾಧ್ಯಕ್ಷೆ: ಕೈರುನ್ನೀಸಾ ಪರ್ಪುಂಜ
ಪುತ್ತೂರು: ಒಳಮೊಗ್ರು ಗ್ರಾಮದ ಪರ್ಪುಂಜ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯನ್ನು ಜ.7 ರಂದು ರಚನೆ ಮಾಡಲಾಯಿತು.
ಅಧ್ಯಕ್ಷೆಯಾಗಿ ವಸಂತಿ ಪರ್ಪುಂಜ, ಉಪಾಧ್ಯಕ್ಷೆಯಾಗಿ ಕೈರುನ್ನೀಸಾ ಪರ್ಪುಂಜ, ಸಮಿತಿ ಸದಸ್ಯರುಗಳಾಗಿ ಜಯಶ್ರೀ, ಕುಸುಮಾ, ಸವಿತಾ, ಪುರುಷೋತ್ತಮ, ರೇಖಾ, ಮಹಾಂತೇಶ್, ದೇವಕಿ, ಗೀತಾ, ರಮೀಝ, ಝೋಹರಾ, ಅನೀಷಾ, ರಹಮತ್ತುನ್ನೀಸಾ, ಆಸ್ಮಾ, ವಸಂತ ಗೌಡ, ಶಿವರಾಮ ನಾಯಕ್,ಭವಾನಿರವರನ್ನು ಆಯ್ಕೆ ಮಾಡಲಾಯಿತು.ನಾಮ ನಿರ್ದೇಶಿತ ಸದಸ್ಯರಾಗಿ ಸಾಮಾನ್ಯ ಸ್ಥಾಯಿ ಸಮಿತಿ ಸದಸ್ಯರಾದ ಸುಂದರಿ, ಶಿಕ್ಷಕ ಪ್ರತಿನಿಧಿಯಾಗಿ ಶಾಂತಿ ಮೊರಸ್, ವಿದ್ಯಾರ್ಥಿ ಪ್ರತಿನಿಧಿಯಾಗಿ ಆಯಿಷತ್ ನಾಫಿಯಾ, ಅಂಗನವಾಡಿ ಪ್ರತಿನಿಧಿ ಯಮುನಾ, ಆರೋಗ್ಯ ಪ್ರತಿನಿಧಿ ಪ್ರಮೀಳಾರವರು ನಾಮನಿರ್ದೇಶನಗೊಂಡರು.
ಒಳಮೊಗ್ರು ಗ್ರಾಮ ಪಂಚಾಯತ್ ಉಪಾಧ್ಯಕ್ಷ,ಸಾಮಾನ್ಯ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಅಶ್ರಫ್ ಉಜಿರೋಡಿರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಒಳಮೊಗ್ರು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ಸ್ಥಾಯಿ ಸಮಿತಿ ಸದಸ್ಯರಾದ ರೇಝಾ ಯತೀಶ್, ಬಿ.ಸಿ ಚಿತ್ರಾ, ಸುಂದರಿ ಪರ್ಪುಂಜ, ಶಾಲಾಭಿವೃದ್ಧಿ ಸಮಿತಿ ನಿಕಟಪೂರ್ವ ಅಧ್ಯಕ್ಷ ಸುರೇಶ್ ನಾಯಕ್ ಹಾಗೂ ಪೋಷಕರು ಉಪಸ್ಥಿತರಿದ್ದರು. ಮುಖ್ಯಗುರು ಚಂದ್ರಾವತಿ ಕೆ ಸ್ವಾಗತಿಸಿ, ಸಹಶಿಕ್ಷಕಿ ಶಾಂತಿ ಮೊರಸ್ ವಂದಿಸಿದರು. ಅತಿಥಿ ಶಿಕ್ಷಕಿ ಜಯಮಾಲ ಎ.ಎನ್, ಶಶಿ ಬಿ.ಜಿ ಸಹಕರಿಸಿದ್ದರು.