ವಿಟ್ಲ: ಮಾಣಿ ಹಿ.ಪ್ರಾ. ಶಾಲೆಯಲ್ಲಿ ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ಬಂಟ್ವಾಳ ತಾಲೂಕು ಘಟಕದಿಂದ ಅನಾವರಣ ವಿಶೇಷ ಸ್ಪರ್ಧೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಮಾಣಿ ಪಂಚಾಯತ್ ನ ಅಧ್ಯಕ್ಷರಾದ ಸುದೀಪ್ ಕುಮಾರ್ ಶೆಟ್ಟಿ ಉದ್ಘಾಟಿಸಿದರು. ಗ್ರಾ.ಪಂ. ಸದಸ್ಯ ಮೆಲ್ವಿನ್, ಸಮೂಹ ಸಂಪನ್ಮೂಲ ವ್ಯಕ್ತಿಯಾದ ಸತೀಶ್ ರಾವ್ , ಮುಖ್ಯ ಶಿಕ್ಷಕಿಯಾದ ಚಂದ್ರಾವತಿ, ಆಮಂತ್ರಣ ಪರಿವಾರದ ಸಂಸ್ಥಾಪಕರಾದ ವಿಜಯಕುಮಾರ್ ಜೈನ್, ಬಂಟ್ವಾಳ ಘಟಕದ ಅಧ್ಯಕ್ಷ ರಶ್ಮಿತಾ ಸುರೇಶ್ ಜೋಗಿಬೆಟ್ಟು, ರಾಜ್ಯ ಸದಸ್ಯರಾದ ಹೆಚ್ಕೆ ನಯನಾಡು, ಪದಾಧಿಕಾರಿಗಳಾದ ರಾಕೇಶ್, ಹಿತೇಶ್, ಸುಚಿತ್ರ ಭಟ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಿಗೆ ಕಲಿಕಾ ಸ್ಪಧೆಗಳನ್ನು ಏರ್ಪಡಿಸಿ ಬಹುಮಾನವನ್ನು ವಿತರಿಸಲಾಯಿತು. ಜಿಲ್ಲಾ ಉಪಾಧ್ಯಕ್ಷರಾದ ವಿಂಧ್ಯಾ ಎಸ್. ರೈ ಕಡೇಶಿವಾಲಯ ಪ್ರಾಸ್ತವಿಕ ಮಾತನ್ನಾಡಿದರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿ, ಸ್ವಾಗತಿಸಿ, ವಂದಿಸಿ, ನಿರೂಪಿಸಿದರು.