ಪುತ್ತೂರು: ಷಣ್ಮುಖದೇವ ಪ್ರೌಢಶಾಲೆಯಲ್ಲಿ ರೋಟರಿ ಕ್ಲಬ್ ಪುತ್ತೂರು. ಸೆಂಟ್ರಲ್ ರೋಟರಿ ಜಿಲ್ಲೆ 3181 ವಲಯ 5 ಇದರ ವತಿಯಿಂದ ಶಾಲಾ ವಿದ್ಯಾರ್ಥಿಗಳಿಗೆ ಪರೀಕ್ಷಾ ಭಯ ನಿವಾರಣಾ ಕಾರ್ಯಗಾರ ನಡೆಯಿತು.
ರೋಟರಿಯ ಅಧ್ಯಕ್ಷರಾದ ರೊ| ಅಶ್ರಫ್ ಮೊಬೈಲ್ ಬಳಕೆಯಿಂದ ದೂರವಿದ್ದು ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಕಡೆಗೆ ಗಮನ ಹರಿಸುವಂತೆ ಕಿವಿ ಮಾತು ಹೇಳಿದರು. ಸಂಪನ್ಮೂಲ ವ್ಯಕ್ತಿಗಳಾದ ರೊ| ರಾಕೇಶ್ ಶೆಟ್ಟಿಯವರು ಅರಿವು ಕಾರ್ಯಕ್ರಮದ ಅಡಿಯಲ್ಲಿ ಮಕ್ಕಳಿಗೆ ಗುರಿ ಉದ್ದೇಶಗಳನ್ನು ಸಾಧಿಸುವ ಕುರಿತು ಮಾಹಿತಿ ನೀಡಿದರು. ಇನ್ನೋರ್ವ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ರೊ| ಚಂದ್ರಹಾಸ ರೈಯವರು ಮಾತನಾಡಿ, ಮಕ್ಕಳಿಗೆ ಪರೀಕ್ಷೆಯನ್ನು ಎದುರಿಸಿ ಮೌಲ್ಯಯುತ ಶಿಕ್ಷಣ ಪಡೆದು ಸತ್ಪ್ರಜೆಗಳಾಗಿ ಬದುಕಲು ಬೇಕಾದ ಉತ್ತಮ ವಿಚಾರಗಳನ್ನು ತಿಳಿಸಿದರು.
ಶಾಲಾ ಸಂಚಾಲಕರಾದ ಶಿವರಾಮ ಭಟ್ ಬೀರ್ಣಕಜೆ ಸ್ವಾಗತಿಸಿ, ಕೃಷ್ಣವೇಣಿ ವಂದಿಸಿದರು. ಕಾರ್ಯಕ್ರಮವು ಶಾಲೆಯ ಖಜಾಂಚಿಗಳಾದ ದಿವಾಕರ ರೈ ಕೆರೆಮೂಲೆಯವರ ಮಾರ್ಗದರ್ಶನದೊಂದಿಗೆ ಸಂಪನ್ನಗೊಂಡಿತು.ಶಾಲಾ ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳು ಪೋಷಕರು, ಕಾರ್ಯಕ್ರಮದ ಯಶಸ್ಸಿನಲ್ಲಿ ಭಾಗಿಗಳಾದರು.