ವೀರಮಂಗಲ: ಪಿಎಂಶ್ರೀ ಶಾಲೆಯಲ್ಲಿ ರಾಷ್ಟ್ರೀಯ ಯುವ ದಿನಾಚರಣೆ

0

ಸ್ವಾಮಿ ವಿವೇಕಾನಂದರು ಈ ದೇಶದ ಅನರ್ಘ್ಯ ರತ್ನ- ಎ.ವಿ.ನಾರಾಯಣ

ಪುತ್ತೂರು: ಧೀಶಕ್ತಿಗೆ ಇನ್ನೊಂದು ಉದಾಹರಣೆಯಾಗಿರುವ ನರೇಂದ್ರ ನಮ್ಮ ವಿವೇಕಕ್ಕೆ ಆನಂದ ನೀಡುವ ಅನರ್ಘ್ಯ ರತ್ನ ಎಂದು ಎ.ವಿ.ಜಿ ಆಂಗ್ಲ ಮಾದ್ಯಮ ಶಾಲೆಯ ಸಂಚಾಲಕ ಎ.ವಿ.ನಾರಾಯಣ ನುಡಿದರು. ಅವರು ಪಿಎಂಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವೀರಮಂಗಲದಲ್ಲಿ ರಾಷ್ಟ್ರೀಯ ಯುವ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಹಾಗೂ ಹಿರಿಯ ವಿದ್ಯಾರ್ಥಿ ಸಂಘ ವೀರಮಂಗಲ ಇವರ ಆಯೋಜನೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಸಂತ ವೀರಮಂಗಲ ಉದ್ಘಾಟಿಸಿದರು. ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಮೈ ಗೂಡಿಸುವ ನಿಟ್ಟಿನಲ್ಲಿ ಹೇಗೆ ಪ್ರಯತ್ನಗಳನ್ನು ಮಾಡಬಹುದು ಎಂದು ವಿವರಿಸಿದರು.

ಎಸ್.ಡಿ.ಎಂ.ಸಿ ಅಧ್ಯಕ್ಷ ರವಿಚಂದ್ರ, ಉಪಾಧ್ಯಕ್ಷೆ ನವ್ಯ ಸಂಘಟನಾ ಕಾರ್ಯದರ್ಶಿಗಳಾದ ಗೋಪಾಲಕೃಷ್ಣ, ಹಿರಿಯ ವಿದ್ಯಾರ್ಥಿಗಳಾದ ಹರೀಶ್ ಆಚಾರ್ಯ, ವೆಂಕಟ್ರಮಣ, ಹರ್ಷ ಗುತ್ತು, ಸೋಮಶೇಖರ, ಶಾಂತರಾಮ, ಸುರೇಶ್ ಗಂಡಿ, ರಮೇಶ್, ಅರ್ಚನಾ, ಅನುಪಮಾ, ಚಂದ್ರಾವತಿ, ಜಯಪ್ರಕಾಶ್, ಶಿಕ್ಷಕರಾದ ಶ್ರೀಲತಾ,ಶಿಲ್ಪರಾಣಿ,ಸೌಮ್ಯ, ಸುಮಿತ್ರಾ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here