ಜಿಲ್ಲಾ ಮಟ್ಟದ ಕ್ರೀಡೋತ್ಸವ: ವಿವೇಕಾನಂದ ಆ.ಮಾ ಶಾಲೆ ತೆಂಕಿಲದ ಕಬ್ ಮತ್ತು ಬುಲ್ ಬುಲ್ ವಿದ್ಯಾರ್ಥಿಗಳಿಗೆ ಪ್ರಥಮ ಸಮಗ್ರ ಪ್ರಶಸ್ತಿ

0

ಪುತ್ತೂರು:ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆ ಮೂಡಬಿದ್ರೆ ಸ್ಥಳೀಯ ಸಂಸ್ಥೆ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡಬಿದ್ರೆ ಇವರ ಸಹಭಾಗಿತ್ವದಲ್ಲಿ ಜನವರಿ 8 ಹಾಗೂ 9ರಂದುನಡೆದ ಜಿಲ್ಲಾ ಮಟ್ಟದ ಕಲೋತ್ಸವ ಹಾಗೂ ಕ್ರೀಡೋತ್ಸವದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ ಇಲ್ಲಿನ ಕಬ್ ಮತ್ತು ಬುಲ್ ಬುಲ್ ವಿದ್ಯಾರ್ಥಿಗಳು ಭಾಗವಹಿಸಿ ಹಲವಾರು ಪದಕಗಳನ್ನು ಗಳಿಸಿ ಕ್ರೀಡೋತ್ಸವ ವಿಭಾಗದಲ್ಲಿ ಪ್ರಥಮ ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ. 

 ಕಬ್ಸ್ ಕಲೋತ್ಸವ ವಿಭಾಗ – ಉದ್ಯಾನ್ ಎಮ್.4 ನೇ ತರಗತಿ ( ಮಂಜಾಚಾರಿ ಟಿ.ವಿ ಮತ್ತು ಪವಿತ್ರ ಸಿ.ಇ ದಂಪತಿಯ ಪುತ್ರ ) ಚಿತ್ರಕಲೆಯಲ್ಲಿ ದ್ವಿತೀಯ ಸ್ಥಾನ , ಬುಲ್ ಬುಲ್ ಕಲೋತ್ಸವ ವಿಭಾಗ – ಸಮನ್ವಿ ನಾಲ್ಕನೇ ತರಗತಿ ( ಶಿವರಾಮ ಎನ್.ಎಸ್  ಮತ್ತು ಅಶ್ವಿನಿ ಪಿ.ಎಸ್ ದಂಪತಿಯ ಪುತ್ರಿ ) ಅಭಿನಯಗೀತೆ ಯಲ್ಲಿ ತೃತೀಯ ಸ್ಥಾನ ಪಡೆದಿರುತ್ತಾರೆ. 

ಕಬ್  ಕ್ರೀಡೋತ್ಸವ ವಿಭಾಗ – ಉದ್ದ ಜಿಗಿತದಲ್ಲಿ ಹರ್ಷಲ್ ನಾಲ್ಕನೇ ತರಗತಿ (ಹರೀಶ್.ಎಚ್ ಹಾಗೂ ಅಶ್ವಿನಿ.ಕೆ  ದಂಪತಿಯ ಪುತ್ರ) ದ್ವಿತೀಯ ಸ್ಥಾನ,50 ಮೀಟರ್ ಓಟದ ಸ್ಪರ್ಧೆಯಲ್ಲಿ ಸುಮನ್ ಕುಮಾರ್ ಕೆ ಎಂ ನಾಲ್ಕನೇ ತರಗತಿ (ಮನೋಜ್ ಕುಮಾರ್ ಕೆ ಸಿ ಹಾಗೂ ಸುನಿತಾ ದಂಪತಿಯ ಪುತ್ರ ) ತೃತೀಯ ಸ್ಥಾನ, ಬುಲ್ ಬುಲ್ ಕ್ರೀಡೋತ್ಸವ ವಿಭಾಗ- ಉದ್ದ ಜಿಗಿತದಲ್ಲಿ  ದಿಶಾನಿ 3ನೇ ತರಗತಿ ( ಸದಾನಂದ ರೈ ಮತ್ತು ರೇಷ್ಮಾ ರೈಗಳ ಪುತ್ರಿ) ತೃತೀಯ ಸ್ಥಾನ, 100 ಮೀಟರ್ ಓಟದಲ್ಲಿ ಅನ್ಸಿಕಾ.ಎನ್ ನಾಲ್ಕನೇ ತರಗತಿ (ವಸಂತ ಗೌಡ ಮತ್ತು ಸುಜಾತ ಗೌಡ ಪುತ್ರಿ) ದ್ವಿತೀಯ ಸ್ಥಾನ ಹಾಗೂ 50 ಮೀಟರ್ ಓಟದಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾಳೆ.

 ಈ ಎಲ್ಲ ವಿದ್ಯಾರ್ಥಿಗಳಿಗೆ ಕಬ್ ವಿಭಾಗದ ಶಿಕ್ಷಕಿ ಪುಷ್ಪಲತಾ ಕೆ,  ರಶ್ಮಿ.ಎಚ್.ಕೆ,ರೇಖಾ.ವಿ  ಮತ್ತು ಬುಲ್ ಬುಲ್ ಶಿಕ್ಷಕಿ ಪವಿತ್ರ.ಕೆ.ರೈ ತರಬೇತಿ ನೀಡಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.  

LEAVE A REPLY

Please enter your comment!
Please enter your name here