ಕೆಮ್ಮಾಯಿ: ಚಿಕ್ಕಮುಡ್ನೂರು ಗ್ರಾಮದ ಮೂಡಾಯೂರು ಆರಿಗೊ ಪೆರ್ಮಂಡ ಗರೋಡಿಯಲ್ಲಿ ಮೂಡಾಯೂರುಗುತ್ತು ಕುಟುಂಬದವರ ನೇತೃತ್ವದಲ್ಲಿ ಶ್ರೀ ಬೈದೇರುಗಳ ನೇಮ ಜ.8 ರಿಂದ 12ರವರೆಗೆ ನಡೆಯಿತು.
ಜ.8ರಂದು ಪೆರ್ಮಂಡ ಗರೋಡಿಯಲ್ಲಿ ಹೋಮ, ಸ್ಥಳ ಶುದ್ಧೀಕರಣ, ಜ.10ರಂದು ಶ್ರೀಮಹಾ ವಿಷ್ಣುಮೂರ್ತಿ ದೇವರಿಗೆ ರಂಗಪೂಜೆ ಮತ್ತು ಮೂಡಾಯೂರು ಗುತ್ತಿನಿಂದ ದೈವದ ಭಂಡಾರ ತೆಗೆದು ಬಳಿಕ ಬೈದೇರುಗಳ ತಂಬಿಲ ಸೇವೆ ನಡೆಯಿತು. ಜ.11ರಂದು ಇಷ್ಟದೇವತೆ ಮತ್ತು ಏಳ್ನಾಡು ದೈವಗಳ ನೇಮ, ಜ.12ರಂದು ಶ್ರೀಬೈದೇರುಗಳ ನೇಮ, ಗರಡಿ ಇಳಿದ ಬಳಿಕ ಮಾಣಿಬಾಲೆ ನೇಮ, ಕಡ್ಸಲೆ ಬಲಿ ಹಾಗೂ ಇತರ ಕಾರ್ಯಕ್ರಮಗಳು ನಡೆದು ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಆಕರ್ಷಕ ಸಿಡಿಮದ್ದು ಪ್ರದರ್ಶನ ನಡೆಯಿತು.
ಸನ್ಮಾನ:
ಗೌರವ ಡಾಕ್ಟರೇಟ್ ಪುರಸ್ಕೃತ ಡಾ| ಯಂ ಗೋಪಾಲಕೃಷ್ಣ ಮೂಡಾಯೂರು, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸ್ಯಾಕ್ಸೋಫೋನ್ ವಾದಕ ಎಂ ವೇಣುಗೋಪಾಲ್ ಪುತ್ತೂರು, ತಾಲೂಕು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಂ ತಿಮ್ಮಪ್ಪ ಪೂಜಾರಿ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಪೂಜಾರಿ ಬಡಾವು ರವರನ್ನು ಮೂಡಾಯೂರುಗುತ್ತು ಶ್ರೀ ಬೈದೇರುಗಳ ನೇಮೋತ್ಸವ ಸಮಿತಿಯಿಂದ ಸನ್ಮಾನಿಸಲಾಯಿತು.
ವಿವಿಧ ಶಾಲಾ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಮೂಡಾಯೂರುಗುತ್ತು ಕುಟುಂಬದ ಬಿ. ಧನ್ಯ ಕುಮಾರ್ ರೈ ಬಿಳಿಯೂರುಗುತ್ತು ಹಾಗೂ ಡಾ. ಎಂ. ಅಶೋಕ್ ಪಡಿವಾಳ್ ಮೂಡಾಯೂರು ಗುತ್ತು, ನರೇಂದ್ರ ಪಡಿವಾಳ್ ಮೂಡಾಯೂರುಗುತ್ತು, ಹರ್ಷೇಂದ್ರ ಪಡಿವಾಳ್ ಸೇರಿದಂತೆ ಮೂಡಾಯೂರುಗುತ್ತು ಕುಟುಂಬಸ್ಥರು, ಗಣ್ಯರು, ಭಕ್ತಾದಿಗಳು ಉಪಸ್ಥಿತರಿದ್ದರು. ಕೆಮ್ಮಾಯಿ ಶ್ರೀ ವಿಷ್ಣು ಯುವಕ ಮಂಡಲದ ಪ್ರಾಯೋಜಕತ್ವದಲ್ಲಿ ಕೆಮ್ಮಾಯಿ ಜಂಕ್ಷನ್‌ನಿಂದ ಮೂಡಾಯೂರು ಆರಿಗೊ ಗರಡಿಯವರೆಗೆ ರಸ್ತೆಯುದ್ದಕ್ಕೂ ಲೈಟಿಂಗ್ಸ್ ವ್ಯವಸ್ಥೆ ಮಾಡಲಾಗಿತ್ತು. ಸ್ಥಳೀಯರು ಸಹಕರಿಸಿದರು.
ಗರೋಡಿಯಲ್ಲಿ ಪೂರ್ವ ಸಂಪ್ರದಾಯದಂತೆ ಪ್ರತೀ ಮಂಗಳವಾರ ಬೈದೇರುಗಳಿಗೆ ಹಾಲು, ಅಕ್ಕಿ ಅರ್ಪಿಸುವ ಕಾರ್ಯಕ್ರಮ ನಡೆಯುತ್ತಿದೆ.