ಪುತ್ತೂರು: ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾ ವಾರ್ಷಿಕೋತ್ಸವದ ಪ್ರಯುಕ್ತ ಸ್ಪಂದನಾ ಸೇವಾ ಬಳಗ ಕುಂಬ್ರ ಇದರ ಆಶ್ರಯದಲ್ಲಿ ಮನೆ ಮನೆಗಳಲ್ಲಿ ರಾಮ ರಾಜ್ಯ ನಿರ್ಮಾಣದ ಕನಸು ನನಸಾಗಿಸುವ ಸಂಕಲ್ಪದೊಂದಿಗೆ ಸನಾತನ ಹಿಂದೂ ಧರ್ಮದ ಆಚಾರ ವಿಚಾರಗಳು ಮತ್ತು ನಂಬಿಕೆಗಳ ಬಗ್ಗೆ ಅರಿವು ಮೂಡಿಸುವ ಸಲುವಾಗಿ ‘ನಂಬಿಕೆಗಳು ಮತ್ತು ಅದರ ಅರ್ಥ ವಿವರಣೆ’ ಪುಸ್ತಕ ಬಿಡುಗಡೆ, ವಿತರಣೆ ಮತ್ತು ಮೌಲ್ಯಮಾಪನ ಉದ್ದೇಶ ಹೊಂದಿರುವ ‘ಸುಜ್ಞಾನ ದೀಪಿಕೆ’ ಕಾರ್ಯಕ್ರಮದ ಉದ್ಘಾಟನೆ, ಭಜನಾ ತಂಡಗಳಿಂದ ಕುಣಿತ ಭಜನೆಯ ಮೂಲಕ ಶ್ರೀರಾಮ ಸಂಕೀರ್ತಣೆಯ ‘ಭಕ್ತಿ ಲಾಸ್ಯ’ಅನಾವರಣಾ, ಧರ್ಮ ಜಾಗೃತಿಗಾಗಿ ಧಾರ್ಮಿಕ ಕೇಂದ್ರಗಳ ಮುಖ್ಯಸ್ಥರ ಸಮ್ಮಿಲನ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಅಮೂಲ್ಯ ಸೇವೆ ಗೈದವರಿಗೆ ಗೌರವ ಅರ್ಪಣೆ ಇತ್ಯಾದಿ ಕಾರ್ಯಕ್ರಮಗಳ ಸಂಗಮದೊಂದಿಗೆ ಧರ್ಮಜಾಗೃತಿಗಾಗಿ ರಾಮ ಸಂಕೀರ್ತನೆ ‘ಶ್ರೀ ರಾಮಲೀಲೋತ್ಸವ’ ಸುಜ್ಞಾನ ದೀಪಿಕೆ ಕಾರ್ಯಕ್ರಮದ ಉದ್ಘಾಟನೆ ಜ.26 ರಂದು ಕುಂಬ್ರ ಅಲಂಗಾರು ಗದ್ದೆಯಲ್ಲಿ ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆಯನ್ನು ಜ.13 ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ದೇವಸ್ಥಾನದ ವಠಾರದಲ್ಲಿ ಬಿಡುಗಡೆಗೊಳಿಸಲಾಯಿತು.
ಮಹಾವೀರ ಆಸ್ಪತ್ರೆಯ ವೈದ್ಯರಾದ ಡಾ.ಸುರೇಶ್ ಪುತ್ತೂರಾಯರವರು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರೆ, ವಿಶ್ವಹಿಂದೂ ಪರಿಷತ್ತ್‌ನ ಪ್ರಾಂತ ಉಪಾಧ್ಯಕ್ಷ ಯು.ಪೂವಪ್ಪರವರು ಪೋಸ್ಟರ್ ಬಿಡುಗಡೆಗೊಳಿಸಿದರು. ಇಬ್ಬರು ಅತಿಥಿಗಳು ಮಾತನಾಡಿ, ರಾಜಕೀಯ ರಹಿತವಾಗಿ ಧರ್ಮ ಜಾಗೃತಿಗಾಗಿ ಇಂತಹ ಕಾರ್ಯಕ್ರಮಗಳು ಬಹಳ ಅವಶ್ಯಕವೆಂದು ಹೇಳಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸ್ಪಂದನಾ ಸೇವಾ ಬಳಗದ ಗೌರವಾಧ್ಯಕ್ಷ ಮೋಹನ್ ದಾಸ್ ರೈ ಕುಂಬ್ರ ,ಅಧ್ಯಕ್ಷ ರತನ್ ರೈ ಕುಂಬ್ರ, ಕಾರ್ಯಾಧ್ಯಕ್ಷರಾದ ಅಶೋಕ್ ತ್ಯಾಗರಾಜ ನಗರ, ಪ್ರಧಾನ ಕಾರ್ಯದರ್ಶಿ ಹರೀಶ್ ರೈ ಜಾರತ್ತಾರು, ಶ್ರೀ ರಾಮ ಲೀಲ್ಲೋತ್ಸವ ಸಮಿತಿ ಸಂಚಾಲಕ ಸುಧಾಕರ್ ರೈ ಕುಂಬ್ರ, ಕೋಶಾಧಿಕಾರಿ ಚಂದ್ರ ಇದ್ಪಾಡಿ, ಉಪಾಧ್ಯಕ್ಷರಾದ ರಾಜೇಶ್ ರೈ ಪರ್ಪುಂಜ , ಗೌರವ ಸಲಹೆಗಾರರಾದ ಸಂತೋಷ್ ಮಣಿಯಾಣಿ , ಪ್ರಕಾಶ್ಚಂದ್ರ ರೈ ಕೈಕಾರ, ನಿತೀಶ್ ಕುಮಾರ್ ಶಾಂತಿವನ, ತಿಲಕ್ ರೈ ಕುತ್ಯಾಡಿ , ತ್ರಿವೇಣಿ ಪಲ್ಲತ್ತಾರು , ಕೋಶಾಧಿಕಾರಿ ಜನಾರ್ದನ ರೈ ಕೊಡಂಕಿರಿ, ಪದಾಧಿಕಾರಿಗಳಾದ ಚೇತನ್ ರೈ ಬೆದ್ರುಮಾರ್ ,ಪದ್ಮನಾಭ ಮುಂಡಾಲ, ಸಚಿನ್ ರೈ ಪಾಪೆಮಜಲು,ಮೋಹನ್ ಆಳ್ವ ಮುಂಡಾಳಗುತ್ತು ,ವಿದ್ಯಾಲತಾ ರೈ, ಸಿಂಚನ ಕುಂಬ್ರ, ಗಣೇಶ್ ಶೇಕಮಲೆ ,ಸುಧಾಕರ ಆಳ್ವ ಕಲ್ಲಡ್ಕ,ಮೋಹನ್ ಪಾಟಾಳಿ, ಚಿರಾಗ್ ರೈ ಬೆದ್ರುಮಾರ್, ರಾಮಕೃಷ್ಣ ರೈ ಕುಕ್ಕುಂಜೋಡು, ಅವಿನಾಶ್ ಪುರುಷರಕಟ್ಟೆ ,ಸುಭಾಷ್ ರೈ ಕುರಿಕ್ಕಾರ,ಉದಯ ಮಡಿವಾಳ ,ರಿತೇಶ್ ರೈ ಕೋಡಿಬೈಲು,ಕರುಣಾ ರೈ ಬಿಜಲ,ಅರುಣಾ ರೈ ಬಿಜಲ,ವಿಶ್ವನಾಥ ರೈ ಕೋಡಿಬೈಲು,ನೇಮಿರಾಜ್ ರೈ ಕುರಿಕ್ಕಾರ, ಮೋನಪ್ಪ ಪೂಜಾರಿ ಬಡೆಕ್ಕೊಡಿ,ಪ್ರವೀಣ್ ಪಣೆಕ್ಕಳ,ಕವಿತಾ ಹೆಚ್ ರೈ,ಹರಿಪ್ರಸಾದ್ ಎಂ ಎಸ್,ಜಗದೀಶ್ ಬಿ ,ನಿತಿನ್ ಮಡ್ಯಂಗಳ ಸಹಿತಿ ಹಲವು ಮಂದಿ ಉಪಸ್ಥಿತರಿದ್ದರು.
ಸ್ಪಂದನಾ ಸೇವಾ ಬಳಗದ ಅಧ್ಯಕ್ಷ ರತನ್ ರೈ ಕುಂಬ್ರ ಮತ್ತು ಸಂಚಾಲಕ ಸುಧಾಕರ ರೈ ಕುಂಬ್ರ ಅತಿಥಿಗಳಿಗೆ ಶಾಲು ಹಾಕಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಹರೀಶ್ ರೈ ಜಾರತ್ತಾರು ಸ್ವಾಗತಿಸಿ, ವಂದಿಸಿದರು.