ಪುತ್ತೂರು: ಸಿಲ್ಕ್ ಮತ್ತು ಸಾರಿಗಳು ಅಂದರೆ ಮಹಿಳೆಯರಿಗೆ ಯಾವಾಗಲೂ ಅಚ್ಚುಮೆಚ್ಚು. ಎಷ್ಟು ಸಾರಿ ಖರೀದಿಸಿದರೂ ಮಹಿಳೆಯರಿಗೆ ಸಾಕು ಎನಿಸುವುದಿಲ್ಲ. ವಿವಿಧ ವಿನ್ಯಾಸದ ಉಡುಪುಗಳ ಖರೀದಿಗೆ ಮಹಿಳೆಯರು ಮುಗಿಬೀಳುತ್ತಲೇ ಇರುತ್ತಾರೆ. ಇದೀಗ ಮಕರ ಸಂಕ್ರಾಂತಿ ಶುಭ ಸಂದರ್ಭದಲ್ಲಿ ಸಾರಿ ಖರೀದಿಗೆ ಬೊಳುವಾರಿನ ತಮನ್ವಿ ಸಿಲ್ಕ್ಸ್ ಮತ್ತು ಸಾರೀಸ್ ಮಳಿಗೆ ಅವಕಾಶ ನೀಡುತ್ತಿದೆ.
ಬೊಳುವಾರಿನ ಮುಖ್ಯರಸ್ತೆಯ ಇನ್‌ಲ್ಯಾಂಡ್ ಮಯೂರ ಬಿಲ್ಡಿಂಗ್‌ನಲ್ಲಿ ವ್ಯವಹರಿಸುತ್ತಿರುವ ತಮನ್ವಿ ಸಿಲ್ಸ್ಕ್ ಮತ್ತು ಸಾರೀಸ್‌ನಲ್ಲಿ ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಸಂಕ್ರಾಂತಿ ಆಫರ್ ಜ.14ರಿಂದ ಆರಂಭಗೊಂಡು 16ರವರೆಗೆ ನಡೆಯಲಿದೆ. ಇಲ್ಲಿ ಖರೀದಿಯಲ್ಲಿ ಶೇ.15ರವರೆಗೆ ಡಿಸ್ಕೌಂಟ್ ಆಯೋಜಿಸಿದೆ. ಸಾರಿಗಳ ಬೆಲೆ ರೂ.250ರಿಂದ ಹಾಗೂ ಟಾಪ್‌ಗಳ ಬೆಲೆ ರೂ.299ರಿಂದ ಆರಂಭಗೊಳ್ಳಲಿದೆ. ದುಪ್ಪಟ್ಟಾ, ಸಾರಿ ಶೇಪರ್, ಇನ್ನರ್‌ವೇರ್, ರೇಷ್ಮೆ ಸಿಲ್ಕ್, ಸೆಮಿ ಸಿಲ್ಕ್, ಬ್ರೈಡಲ್ ಸಾರಿ, ಕಾಟನ್ ಸಿಲ್ಕ್ ಸಾರಿಗಳು, ಬನಾರಸ್ ಸಾರಿಗಳು, ಸಲ್ವಾರ್ ಸೇರಿದಂತೆ ಮಹಿಳೆಯರ ವಿವಿಧ ಉಡುಪುಗಳು ಡಿಸ್ಕೌಂಟ್‌ನಲ್ಲಿ ಲಭ್ಯವಿದೆ.
ವಿವಿಧ ವಿನ್ಯಾಸದ, ಕಡಿಮೆ ಬೆಲೆಯ ಉಡುಪುಗಳನ್ನು ಖರೀದಿಸಲು ಮಹಿಳೆಯರಿಗೆ ಅವಕಾಶವಿದ್ದು ಡಿಸ್ಕೌಂಟ್ ಸೇಲ್ ಕೇವಲ ನಾಲ್ಕು ದಿನಗಳು ಮಾತ್ರ ಲಭ್ಯವಿದೆ. ಗ್ರಾಹಕರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಮಾಲಕ ವಿಜೇತ್ ಮಾಲಾಶ್ರೀ ತಿಳಿಸಿದ್ದಾರೆ.