ವಿವೇಕಾನಂದರ ತತ್ವಗಳು ಯುವಜನತೆಯ ಜೀವನ ಬೆಳಗಿಸುತ್ತದೆ – ಕಿಶೋರ್ ಕುಮಾರ್ ಬೊಟ್ಯಾಡಿ
ಸವಣೂರು: ಸ್ವಾಮಿ ವಿವೇಕಾನಂದರು ಜೀವಿಸಿದ ಅವಧಿ ಬಹಳ ಕಡಿಮೆಯಾದರೂ ಅವರ ತತ್ವಗಳು ಈ ಭೂಮಂಡಲ ಇರುವವರೆಗೂ ಶಾಶ್ವತವಾಗಿ ಉಳಿಯಲಿವೆ.ವಿವೇಕಾನಂದರ ತತ್ವಗಳು ಯುವಜನತೆಯ ಜೀವನವನ್ನು ಬೆಳಗಿಸಲಿದೆ ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ ಹೇಳಿದರು.
ಅವರು ಸವಣೂರು ಸ.ಪ.ಪೂ.ಕಾಲೇಜಿನಲ್ಲಿ ದ.ಕ.ಜಿಲ್ಲಾಡಳಿತ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಂಗಳೂರು ,ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಯುವಜನ ಒಕ್ಕೂಟ ಮಂಗಳೂರು ಕಡಬ ತಾಲೂಕು ಪಂಚಾಯತ್ , ಸವಣೂರು ಗ್ರಾಮ ಪಂಚಾಯತ್ ,ಸವಣೂರು ಸರಕಾರಿ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢ ಶಾಲಾ ವಿಭಾಗ, ರಾಜ್ಯ ಪ್ರಶಸ್ತಿ ಪುರಸ್ಕೃತ ಸವಣೂರು ಯುವಕ ಮಂಡಲ ಸವಣೂರು ಇವುಗಳ ಜಂಟಿ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆಯ ಅಂಗವಾಗಿ ನಡೆದ ಯುವ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು
ಕಡಬ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ರಾಕೇಶ್ ರೈ ಕೆಡೆಂಜಿ ವಿವೇಕಾನಂದರ ತತ್ವ ಆದರ್ಶಗಳ ಕುರಿತು ಉಪನ್ಯಾಸ ನೀಡಿದರು.ಸವಣೂರು ಪ.ಪೂ.ಕಾಲೇಜಿನ ಪ್ರಾಚಾರ್ಯೆ ಪದ್ಮಾವತಿ ಎನ್.ಪಿ.ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದು ,ಜಿಲ್ಲಾ ಯುವಜನ ಒಕ್ಕೂಟದ ಸುರೇಶ್ ರೈ ಸೂಡಿಮುಳ್ಳು,ಸವಣೂರು ಪ.ಪೂ.ಕಾಲೇಜಿನ ಕಾರ್ಯಾಧ್ಯಕ್ಷ ಗಿರಿಶಂಕರ ಸುಲಾಯ,ಪ್ರೌಢಶಾಲಾ ಮುಖ್ಯಗುರು ರಘು ಬಿ.ಆರ್.,ಉಪನ್ಯಾಸಕರಾದ ಹರಿಶಂಕರ್ ಕೆ.ಎಂ,ರೀನಾ,ಸವಣೂರು ಯುವಕ ಮಂಡಲದ ಮಾಜಿ ಅಧ್ಯಕ್ಷ ಸಚಿನ್ ಭಂಡಾರಿ ಮೊದಲಾದವರಿದ್ದರು.
ಸವಣೂರು ಯುವಕ ಮಂಡಲದ ಅಧ್ಯಕ್ಷ ಜಿತಾಕ್ಷ ಜಿ. ಸ್ವಾಗತಿಸಿ, ಕಾರ್ಯದರ್ಶಿ ಕೀರ್ತನ್ ಕೋಡಿಬೈಲು ವಂದಿಸಿದರು. ಸವಣೂರು ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಮಾಮಚ್ಚನ್ ಕಾರ್ಯಕ್ರಮ ನಿರೂಪಿಸಿದರು.