ಉಪ್ಪಿನಂಗಡಿ: ಶ್ರೀ ರಾಮ ಮೂರ್ತಿಯ ಪುರಪ್ರವೇಶ

0

ಉಪ್ಪಿನಂಗಡಿ: ಇಲ್ಲಿನ ವೇದಶಂಕರ ನಗರದಲ್ಲಿನ ಶ್ರೀ ರಾಮ ಶಾಲೆಯಲ್ಲಿ ಜನವರಿ 22 ರಂದು ಪ್ರತಿಷ್ಠಾಪನೆಗೊಳ್ಳಲಿರುವ ಹನುಮಂತ ಸಹಿತ ಶ್ರೀ ರಾಮನ ಮೂರ್ತಿಯ ಪುರ ಪ್ರವೇಶ ಕಾರ್ಯಕ್ರಮ ಗುರುವಾರದಂದು ಭವ್ಯ ಮೆರವಣಿಗೆಯೊಂದಿಗೆ ನಡೆಯಿತು.


ಅಯೋಧ್ಯೆಯಲ್ಲಿ ಶ್ರೀ ರಾಮ ದೇವಾಲಯವು ಲೋಕಾರ್ಪಣೆಗೊಂಡು ಇದೇ ಜನವರಿಗೆ ಪ್ರತಿಷ್ಠಾ ವಾರ್ಷಿಕೋತ್ಸವವು ನಡೆಯುತ್ತಿರುವ ಕಾಲಘಟ್ಟದಲ್ಲೇ ಶ್ರೀ ರಾಮಭಕ್ತ ಹನುಮಂತ ಸಹಿತ ಶ್ರೀ ರಾಮನ ವಿಗ್ರಹವನ್ನು ಶಾಲಾ ಆವರಣದಲ್ಲಿ ಸ್ಥಾಪಿಸಲು ಶಾಲಾಡಳಿತವು ಸಂಕಲ್ಪಿಸಿದ ಹಿನ್ನೆಲೆಯಲ್ಲಿ ವಿಗ್ರಹದ ನಿರ್ಮಾಣ ಕಾರ್ಯವು ಪೂರ್ಣಗೊಂಡ ಬಳಿಕ ವಿಗ್ರಹವನ್ನು ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ವಠಾರದಿಂದ ನೂರಾರು ವಿದ್ಯಾರ್ಥಿಗಳ ಜಯಘೋಷದೊಂದಿಗೆ ಮೆರವಣಿಗೆಯಲ್ಲಿ ಶಾಲಾ ಆವರಣಕ್ಕೆ ತಂದರು.


ಕಾರ್ಯಕ್ರಮದಲ್ಲಿ ಶ್ರೀ ರಾಮ ಶಾಲಾ ಆಡಳಿತದ ಅಧ್ಯಕ್ಷ ಸುನಿಲ್ ಅನಾವು, ಶಾಲಾ ಸಂಚಾಲಕ ಯು.ಜಿ. ರಾಧಾ, ವಿಶ್ವಹಿಂದೂ ಪರಿಷತ್ ಅಧ್ಯಕ್ಷ ಸುದರ್ಶನ , ಗೆಳೆಯರು 94 ಸಂಘಟನೆಯ ಅಧ್ಯಕ್ಷ ರಾಧಾಕೃಷ್ಣ ಬೊಳ್ಳಾವು, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಕೆ ಸುಧಾಕರ ಶೆಟ್ಟಿ , ಶ್ರೀ ಮಾಧವ ಶಿಶು ಮಂದಿರ ಸಮಿತಿಯ ಅಧ್ಯಕ್ಷ ಮನೋಜ್ ಶೆಟ್ಟಿ, ಪ್ರಮುಖರಾದ ಸುರೇಶ್ ಜಿ, ಕೈಲಾರ್ ರಾಜಗೋಪಾಲ ಭಟ್, ಸುರೇಶ್ ಅತ್ರಮಜಲು, ಸುಧೀರ್ ವನಸುಮ, ಗುಣಕರ ಅಗ್ನಾಡಿ, ರಾಜೇಶ್ ಶಾಂತಿನಗರ, ಗಣೇಶ್ ಕುಲಾಲ್, ರವೀಂದ್ರ ಆಚಾರ್ಯ, ಕಂಗ್ವ್ವೆ ವಿಶ್ವನಾಥ ಶೆಟ್ಟಿ , ಹರಿರಾಮಚಂದ್ರ, ಜಯಶ್ರೀ ಜನಾರ್ದನ್ ,ಭವ್ಯ, ಅಶೋಕ್ ಕುಮಾರ್ ರೈ ಅರ್ಪಿಣಿಗುತ್ತು, ಬಾಲಕೃಷ್ಣ , ವಿದ್ಯಾಧರ ಜೈನ್, ಉದಯ ಅತ್ರಮಜಲು , ಗೀತಾಲಕ್ಷ್ಮಿ ತಾಳ್ತಜೆ, ಅನುರಾಧ ಆರ್ ರೈ, ಜಯಂತ ಪೊರೋಳಿ, , ಲೋಕೇಶ್ ಆಚಾರ್ಯ, ಕಿಶೋರ್ ನೀರಕಟ್ಟೆ ಮೊದಲಾದವರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here