ಪುತ್ತೂರು: ಫೆ. 15 ಮತ್ತು 16 ರಂದು ನಡೆಯಲಿರುವ ಪುಣ್ಚಪ್ಪಾಡಿ ಗ್ರಾಮದ ಸಾರಕರೆಬೀಡು ಶ್ರೀ ಧರ್ಮರಸು ಉಳ್ಲಾಕುಲು ಮತ್ತು ಪರಿವಾರದ ದೈವಗಳ ಜಾತ್ರೋತ್ಸವದ ಆಮಂತ್ರಣ ಪತ್ರ ಬಿಡುಗಡೆಯು ಜ.14 ರಂದು ಶ್ರೀ ಧರ್ಮರಸು ಉಳ್ಳಾಕುಲು ಮತ್ತು ಪರಿವಾರ ದೈವಗಳ ಕಲ್ಲಮಾಡದ ಅಂಗಣದಲ್ಲಿ ಜರಗಿತು.
ದೈವಸ್ಥಾನದ ಆಡಳಿತ ಮೊಕ್ತೇಸರ ಮಹಾಬಲ ಶೆಟ್ಟಿ ಕೊಮ್ಮಂಡರವರ ಮಾರ್ಗದರ್ಶನದಲ್ಲಿ ಕಾರ್‍ಯಕ್ರಮ ನಡೆಯಿತು. ಪುಣ್ಚಪ್ಪಾಡಿ ಗ್ರಾಮದ ಹಿರಿಯರಾದ, ಕೃಷಿಕ ಬದಿಯಡ್ಕ ಶಿವಪ್ಪ ಗೌಡರವರು ಅಮಂತ್ರಣ ಪತ್ರ ಬಿಡುಗಡೆಗೊಳಿಸಿದರು. ಶ್ರೀ ಧರ್ಮರಸು ಉಳ್ಳಾಕುಲು ಮತ್ತು ಪರಿವಾರದೈವಗಳ ಸಮಿತಿಯ ಸದಸ್ಯರು, ಆಡಳಿತ ಮುಖ್ಯಸ್ಥರು, ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.ಪ್ರಕಾಶ ರೈ ಸಾರಕರೆ ಸ್ವಾಗತಿಸಿ ,ಕರುಣಾಕರ ಗೌಡ ಸಾರಕರೆ ವಂದಿಸಿದರು. ಶಿವಪ್ರಸಾದ್ ರೈ ಸಾರಕರೆ ಕಾರ್‍ಯಕ್ರಮ ನಿರೂಪಿಸಿದರು.