ಪಡುಮಲೆ ಪೂಮಾಣಿ ದೈವದ ನೇಮ

0

ಬಡಗನ್ನೂರು: ಶ್ರೀ ಪೂಮಾಣಿ ಕಿನ್ನಿಮಾಣಿ (ಉಳ್ಳಾಕಲು) ಹಾಗೂ ರಾಜನ್ ದೈವಗಳ ದೈವಸ್ಥಾನ ಪಡುಮಲೆ ಇದರ ವಾರ್ಷಿಕ ನೇಮೋತ್ಸವ ಅಂಗವಾಗಿ ಜ.17 ರಂದು ಶ್ರೀ ಪೂಮಾಣಿ ದೈವದ ನೇಮ, ಪ್ರಸಾದ ವಿತರಣೆ ನಡೆಯಿತು.

ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷ ರವಿರಾಜ್ ಶೆಟ್ಟಿ ಅಣಿಲೆ,ಸದಸ್ಯರಾದ ದಯಾ ವಿ ರೈ ಬೆಳ್ಳಿಪಾಡಿ, ರವಿರಾಜ ರೈ ಸಜಂಕಾಡಿ, ಶಶಿಧರ ರೈ ಕುತ್ಯಾಳ, ಶ್ರೀಧರ ನಾಯ್ಕ ನೇರ್ಲಪಾಡಿ, ವಿಶ್ವನಾಥ ಪೂಜಾರಿ ಪೂಜಾರಿಮೂಲೆ, ಜಾತ್ರೋತ್ಸವ ಸಮಿತಿ ಅಧ್ಯಕ್ಷ ಸತೀಶ್ ರೈ ಕಟ್ಟಾವು, ಪ್ರಧಾನ ಕಾರ್ಯದರ್ಶಿ ಜನಾರ್ದನ ಪೂಜಾರಿ ಪದಡ್ಕ, ಜತೆ ಕಾರ್ಯದರ್ಶಿ ಸುರೇಶ್ ರೈ ಪಲ್ಲತ್ತಾರು, ಕೋಶಾಧಿಕಾರಿ ರಾಜೇಶ್ ರೈ ಮೇಗಿನಮನೆ,   ಕೃಷ್ಣ ರೈ ಕುದ್ಕಾಡಿ   ಅರ್ಚಕ ಮಹಾಲಿಂಗ ಸೇನವರಾದ ನಾರಾಯಣ ರಾವ್ ಪಡುಮಲೆ,  ಉದಯ ಕುಮಾರ್ ಪಡುಮಲೆ ರಾಮಣ್ಣ ಗೌಡ ಬಸವಹಿತ್ತಿಲು, ರತ್ನಾಕರ ರೈ ಕುದ್ಕಾಡಿ ಲೋಹಿತ್ ಮುಡಿಪಿನಡ್ಕ ಮತ್ತು ಊರಪರವೂರ ಭಕ್ತಾದಿಗಳು ಭಾಗವಹಿಸಿದರು.

ಜ.18 ರಂದು ಬೆಳಿಗ್ಗೆ ಬೆಳ್ಳಿಪ್ಪಾಡಿ ಪಡುಮಲೆ ಮನೆಯಿಂದ ಮಲರಾಯ ದೈವದ ಭಂಡಾರ ಬಂದು ಮಲರಾಯ ದೈವದ ನೇಮ, ಬಳಿಕ ವ್ಯಾಘ್ರ ಚಾಮುಂಡಿ (ರಾಜನ್) ದೈವದ ನೇಮ, ಪ್ರಸಾದ ವಿತರಣೆ,ಹಾಗೂ ಅನ್ನಪ್ರಸಾದ ನಡೆಯಲಿದೆ.ಸಂಜೆ 5ಕ್ಕೆ ಕನ್ನಡ್ಕ ತರವಾಡಿನ ದೈವಸ್ಥಾನದಿಂದ ರುದ್ರ ಚಾಮುಂಡಿ ದೈವದ ಭಂಡಾರ ಬಂದು, ರಾತ್ರಿ ಪಡುಮಲೆ-ದೊಡ್ಡಮನೆಯಲ್ಲಿ ಅವಭೃತ ಸ್ಥಾನ ನಡೆದು, ಕಟ್ಟೆ ಪೂಜೆ, ಬಳಿಕ ಧ್ವಜಾವರೋಹಣ, ರುದ್ರಚಾಮುಂಡಿ ದೈವದ ನೇಮ, ನವಕಾಭಿಷೇಕ,ಬಳಿಕ ಗುಳಿಗ ದೈವದ ನೇಮ ನಡೆಯಲಿದೆ.ರಾತ್ರಿ 8.00 ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

LEAVE A REPLY

Please enter your comment!
Please enter your name here