ರಾಮಕುಂಜ: ಕೊಯಿಲ ಗ್ರಾಮದ ಆತೂರು ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ನೀರಜ್‌ಕುಮಾರ್ ರೈ ಅರುವಾರ ಆಯ್ಕೆಗೊಂಡಿದ್ದಾರೆ.
ಜ.17ರಂದು ದೇವಸ್ಥಾನದ ಆಡಳಿತಾಧಿಕಾರಿ ಸುಜಾತ ಕೆ. ಇವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಅಧ್ಯಕ್ಷರ ಆಯ್ಕೆ ಮಾಡಲಾಯಿತು. ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪ್ರಧಾನ ಅರ್ಚಕ ವಿಷ್ಣುಮೂರ್ತಿ ಬಡೆಕ್ಕಿಲ್ಲಾಯ, ಸುನೀತ್‌ರಾಜ್ ಶೆಟ್ಟಿ, ಯತೀಶ್ ಗುಂಡಿಜೆ, ಶ್ರೀಧರ ಪೂಜಾರಿ, ಗೋಪಾಲ ನಾಯ್ಕ್, ಸಂಜೀವ ಮಡಿವಾಳ, ಸುಜಾತ ಜೆ.ಶೆಟ್ಟಿ, ಮೀನಾಕ್ಷಿ ಯಂ. ಸಭೆಯಲ್ಲಿ ಉಪಸ್ಥಿತರಿದ್ದರು.