ವಿಟ್ಲ: ವಿಟ್ಲದ ಮಹತೋಭಾರ ಶ್ರೀಪಂಚಲಿಂಗೇಶ್ವರ ದೇವಸ್ಥಾನದ ಕಾಲಾವಧಿ ಜಾತ್ರೋತ್ಸವ ಪ್ರಯುಕ್ತ ನೃತ್ಯೋಪಾಸನಾ ಕಲಾ ಅಕಾಡೆಮಿ(ರಿ.) ಪುತ್ತೂರು ಇದರ ವಿಟ್ಲ ಶಾಖೆಯ ಕಲಾ
ತಂಡದಿಂದ ‘ನೃತ್ಯೋಹಂ’ ಭರತನಾಟ್ಯ ಕಾರ್ಯಕ್ರಮ ನಡೆಯಿತು.
ವಿಟ್ಲ ಅರಮನೆ ನರಸಿಂಹ ವರ್ಮ ಮತ್ತು ವೀಣಾ ನರಸಿಂಹ ವರ್ಮ ಇವರು ದೀಪಪ್ರಜ್ವಲನೆ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ನೃತ್ಯೋಪಾಸನಾ ಕಲಾ ಅಕಾಡೆಮಿಯ ನೃತ್ಯಗುರು, ವಿದುಷಿ
ಶಾಲಿನಿ ಆತ್ಮಭೂಷಣ್, ವಿಟ್ಲ ಅರಮನೆಯ ಕೃಷ್ಣಯ್ಯ, ರಾಜಾರಾಮ ವರ್ಮ, ಆರ್.ಕೆ.ಆರ್ಟ್ಸ್‌ನ ರಾಜೇಶ್, ವಿಟ್ಲ ಆರಕ್ಷಕ ಠಾಣೆಯ ಮಹಿಳಾ ಸಬ್ ಇನ್‌ಸ್ಪೆಕ್ಟರ್ ವಿದ್ಯಾ, ವಿಟ್ಲ ಜೇಸಿ ಅಧ್ಯಕ್ಷೆ ಸೌಮ್ಯ ಚಂದ್ರಹಾಸ ಕೊಪ್ಪಳ ಉಪಸ್ಥಿತರಿದ್ದರು. ಬಳಿಕ ನೃತ್ಯೋಪಾಸನಾ ಅಕಾಡೆಮಿಯ ವಿಟ್ಲ ಶಾಖೆಯ ತಂಡದಿಂದ ಭರತನಾಟ್ಯ ಕಾರ್ಯಕ್ರಮ ಜರುಗಿತು. ರಾಧಾಕೃಷ್ಣ ಎರುಂಬು ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕ ಬಾಲಕೃಷ್ಣ ವಿಟ್ಲ ವಂದಿಸಿದರು.