ಪುತ್ತೂರು: ಸಿವಿಲ್ ಕನ್ಸಲ್ಟೆನ್ಸ್ ಮತ್ತು ಕಾಂಟ್ರಾಕ್ಟರ್‌ನಲ್ಲಿ ಜನಮಾನಸವಾಗಿರುವ ಪುತ್ತೂರಿನ ಎವಿಜಿ ಅಸೋಸಿಯೇಟ್ಸ್‌ನ ರಜತ ಸಂಭ್ರಮದ ಅಂಗವಾಗಿ ಜ.19ರಂದು ಚಿತ್ರೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಬನ್ನೂರಿನ ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್‌ನಲ್ಲಿ ಬೆಳಿಗ್ಗೆ ಗಂಟೆ 9.30 ರಿಂದ ಚಿತ್ರೋತ್ಸವ ಆರಂಭಗೊಳ್ಳಲಿದೆ. ಯೋಗದಲ್ಲಿ ನ್ಯಾಷನಲ್ ಅವಾರ್ಡ್ ಪುರಸ್ಕೃತ ಮನ್ನಿತ್ ನೀರ್ಪಾಜೆ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಐಕ್ಯಾಮ್ ಅಕಾಡೆಮಿ ಆಫ್ ಆರ್ಟ್ಸ್ ಪುತ್ತೂರು ಇದರ ಸ್ಥಾಪಕರು ಮತ್ತು ನಿರ್ದೇಶಕರೂ ಆಗಿರುವ ನಿಕಿತಾ ಪಾಣಾಜೆ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಬಾಲಜಿ ಪೈಂಟ್‌ನ ಮಾಲಕ ಕಳುವಾಜೆ ವೆಂಕಟ್ರಮಣ ಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. ಬಳಿಕ ಚಿತ್ರಕಲಾ ಸ್ಪರ್ಧೆ ನಡೆಯಲಿದೆ ಎಂದು ಕಾರ್ಯಕ್ರಮದ ಸಂಯೋಜಕಿ ಸೌಮ್ಯಶ್ರೀ ಹೆಗ್ಡೆ ಮತ್ತು ಎವಿಜಿ ಅಸೋಸಿಯೇಟ್ಸ್‌ನ ಮಾಲಕ ಎ.ವಿ.ನಾರಾಯಣ ಅವರು ತಿಳಿಸಿದ್ದಾರೆ.