ಉಪ್ಪಿನಂಗಡಿ: ಸವಿ ಇಲೆಕ್ಟ್ರಾನಿಕ್ಸ್ ಉಪ್ಪಿನಂಗಡಿ ಇದರ ಸೀಸನ್-1ರ ಲಕ್ಕಿ ಸ್ಕೀಮ್ನ ಬಂಪರ್ ಡ್ರಾ ಜ.14ರಂದು ಸಂಜೆ ಮಳಿಗೆಯಲ್ಲಿ ನಡೆಯಿತು.
ಉಪ್ಪಿನಂಗಡಿ ಆರ್.ಕೆ.ಟ್ರೇಡರ್ಸ್ನ ಮಹಮ್ಮದ್ ಹನೀಫ್ ಅವರು ಡ್ರಾ ನಡೆಸಿಕೊಟ್ಟರು. ಉದ್ಯಮಿ ಸಚಿನ್ ಸುಂದರ ಗೌಡ, ಸವಿ ಫೂಟ್ವೇರ್ ಮಾಲಕ ಬಾಲಕೃಷ್ಣ ಗೌಡ ಮುಗೇರಡ್ಕ, ಪ್ರಗತಿ ಎಲೆಕ್ಟ್ರಿಕಲ್ಸ್ ಮಾಲಕ ರಾಘವ ಗೌಡ, ಬಾರ್ಲ ಪವರ್ ಟೂಲ್ಸ್ನ ಮಾಲಕ ಪುರಂದರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಸವಿ ಇಲೆಕ್ಟ್ರಾನಿಕ್ಸ್ ಮಾಲಕ ನವೀನ್ ಕುಮಾರ್ ಆರ್.ಎಸ್. ಸ್ವಾಗತಿಸಿದರು. ಸೀಸನ್-1ರ ಲಕ್ಕಿ ಸ್ಕೀಮ್ನ ಡ್ರಾ ವಿಜೇತರಾದ ಪದ್ಮುಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ನಿರ್ದೇಶಕ ಪಿಜಿನ ಮುಗೇರ ಅವರಿಗೆ ಟಿವಿಎಸ್ ಜುಪಿಟರ್ ಹಸ್ತಾಂತರಿಸಲಾಯಿತು. ಪ್ರತಿ ತಿಂಗಳು ರೂ.500ರಂತೆ ಒಟ್ಟು 25 ಕಂತುಗಳ ಲಕ್ಕಿ ಸ್ಕೀಮ್ನ ಕೊನೆಯ ಬಂಪರ್ ಡ್ರಾದಲ್ಲಿ ಗ್ರಾಹಕರಿಗೆ ಟಿವಿಎಸ್ ಜುಪಿಟರ್ ಗೆಲ್ಲುವ ಅವಕಾಶ ನೀಡಲಾಗಿತ್ತು. ಲಕ್ಕಿ ಸ್ಕೀಮ್ನ ಸೀಸನ್-2 ಶೀಘ್ರ ಆರಂಭಗೊಳ್ಳಲಿದೆ ಎಂದು ಮಾಲಕ ನವೀನ್ಕುಮಾರ್ ಆರ್.ಎಸ್. ತಿಳಿಸಿದ್ದಾರೆ.