ಪುತ್ತೂರು: ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆ ಮತ್ತು ಪುತ್ತೂರು ರೋಟರಿ ಯುವ ಇದರ ಸಹಯೋಗದಲ್ಲಿ ವಿಶ್ರಾಂತಿ ಕೊಠಡಿಯ ಉದ್ಘಾಟನಾ ಸಮಾರಂಭ ಕಾರ್ಯಕ್ರಮ ನಡೆಯಿತು.
ರೋಟರಿ ಯುವ ಪುತ್ತೂರು ನೀಡಿದ ಕೊಡುಗೆಯಾದ ವಿಶ್ರಾಂತಿ ಕೊಠಡಿಯನ್ನು ರೋಟರಿ ಯುವ ಪುತ್ತೂರಿನ ಅಧ್ಯಕ್ಷೆ ಅಶ್ವಿನಿ ಕೃಷ್ಣ ಮುಳಿಯ ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿ, ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ನವೀಕೃತಗೊಂಡ ವಿಜ್ಞಾನ ಪ್ರಯೋಗಾಲಯದ ಉದ್ಘಾಟನೆಯನ್ನು ವಿಶ್ರಾಂತ ಶಿಕ್ಷಕ ಕೆ ಚಂದ್ರಹಾಸ ಭಟ್ ಅವರು ನೆರವೇರಿಸಿ, ವಿದ್ಯಾರ್ಥಿಗಳಿಗೆ ಜೀವನ ಮೌಲ್ಯದ ವಿಚಾರಗಳನ್ನು ತಿಳಿಸುವುದರ ಜೊತೆಗೆ ಪ್ರಯೋಗಲಯದ ನವೀಕರಣಕ್ಕೂ ಸಹಾಯ ಹಸ್ತ ನೀಡಿದರು. ಹಲವು ವರ್ಷಗಳಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಸಹಾಯಾಸ್ತವನ್ನು ನೀಡುತ್ತಿರುವ ಹಿರಿಯ ವಿದ್ಯಾರ್ಥಿಯಾದ ಹಾಗೂ ಖ್ಯಾತ ಹಾಸ್ಯ ಕಲಾವಿದರಾದ ರವಿ ರಾಮಕುಂಜ ಅವರು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ವಿತರಿಸುವುದರ ಜೊತೆಗೆ ತಮ್ಮ ಜೀವನದ ಅನುಭವಗಳನ್ನು ಹಂಚಿಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಆರ್ ಕೆ ಲ್ಯಾಡರ್ಸ್ ನ ಮಾಲಕ ಕೇಶವ ಅಮೈ ವಹಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಪ್ರೌಢಶಾಲಾ ಮುಖ್ಯ ಗುರು ಸತೀಶ್ ಭಟ್ ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ಶಾಲಾ ಹಿತೈಷಿ ರಾಧಾಕೃಷ್ಣ ಎ ಹಾಗೂ ಗಣೇಶ್ ಕಟ್ಟಪುಣಿ ಅವರನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು.
ವಿದ್ಯಾರ್ಥಿಗಳಾದ ಪೂಜ್ಯಶ್ರೀ ಹಾಗು ಜೀವಿತಾ ಪ್ರಾರ್ಥಿಸಿದರು. ಶಾಲಾ ಹಿರಿಯ ಶಿಕ್ಷಕ ವೆಂಕಟೇಶ್ ದಾಮ್ಲೆ ವಂದಿಸಿದರು. ಶಿಕ್ಷಕಿಯಾದ ಕುಮಾರಿ ಅನುಷಾ ನಿರೂಪಿಸಿದರು. ಶಿಕ್ಷಕರಾದ ದಿನೇಶ್ ಬಿ,ಪ್ರವೀಣ್ ಕುಮಾರ್ ಸಹಕರಿಸಿದರು.