





ಪುತ್ತೂರು: ಈಶ ಸಂಜೀವಿನಿ ತಾಲೂಕು ಮಟ್ಟದ ಒಕ್ಕೂಟ ಇದರ 2024-25ನೇ ಸಾಲಿನ ವಾರ್ಷಿಕ ಮಹಾಸಭೆ ಪುತ್ತೂರು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಅ.24ರಂದು ನಡೆಯಿತು.


ಮಮತಾ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಈಶ ಸಂಜೀವಿನಿ ತಾಲೂಕು ಮಟ್ಟದ ಒಕ್ಕೂಟ ಅಧ್ಯಕ್ಷೆ ವಹಿಸಿ ಸ್ವಾಗತಿಸಿ, ದೀಪ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಎಲ್ಲ ಒಕ್ಕೂಟದ ಪದಾಧಿಕಾರಿಗಳು ಮಾಸಿಕ ಸಭೆಗಳಲ್ಲಿ ಭಾಗವಹಿಸಿ, ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೆ ತರಬೇಕೆಂದು ಮನವಿ ಮಾಡಿದರು. ಮಹಿಳೆಯರನ್ನು ಸ್ವ ಸಹಾಯ ಸಂಘಗಳಿಗೆ ಸೇರಿಸಿ ಯೋಜನೆಯ ಸೌಲಭ್ಯಗಳನ್ನು ಪಡೆಯುವಲ್ಲಿ ಒಕ್ಕೂಟ ಪ್ರಮುಖ ಪಾತ್ರವಹಿಸಬೇಕು ಎಂದರು. ಒಕ್ಕೂಟದ ಕಾರ್ಯದರ್ಶಿ ಶಾಲಿನಿ 2024-25ನೇನೇ ಸಾಲಿನ ವಾರ್ಷಿಕ ವರದಿ ಮಂಡಿಸಿದರು. ಕೋಶಾಧಿಕಾರಿ ಸಂಗೀತಾ ವಾರ್ಷಿಕ ಲೆಕ್ಕಪತ್ರ ವರದಿ ಮಂಡಿಸಿದರು.





ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಜಗತ್ ಕೆ.ಮಾತನಾಡಿ, ವಾರ್ಷಿಕ ಮಹಾಸಭೆ ಎಲ್ಲಾ ಪದಾಧಿಕಾರಿಗಳು ಸೇರಿ ಚರ್ಚೆ ನಡೆಸಬೇಕಾದ ಪ್ರಮುಖ ವೇದಿಕೆ ಎಂದು ಹೇಳಿದರು. ಒಕ್ಕೂಟದ ನೊಂದಣಿ ನವೀಕರಣ, ಪದಾಧಿಕಾರಿಗಳ ಜವಾಬ್ದಾರಿ ಹಾಗೂ ಕಾರ್ಯದ ಪ್ರಾಮಾಣಿಕತೆಯ ಕುರಿತು ಮಾರ್ಗದರ್ಶನ ನೀಡಿದರು.

ಸಭೆಯಲ್ಲಿ 2025-26ನೇ ಸಾಲಿನ ವಾರ್ಷಿಕ ಕ್ರಿಯಾ ಯೋಜನೆಯ ಕುರಿತು ಮಾಹಿತಿ ನೀಡಿ,ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ಪದಾಧಿಕಾರಿಗಳಿಗೆ ತರಬೇತಿ ನೀಡುವುದು
ತಾಲೂಕು ಮಟ್ಟದ ಮಾಸಿಕ ಸಭೆಗೆ ಚಹಾ-ಉಪಹಾರ ಅನುದಾನ,ಮಾದಕ ವ್ಯಸನದ ಬಗ್ಗೆ ಕಿರು ನಾಟಕ,ತಾಲೂಕು ಮಟ್ಟದಲ್ಲಿ ಆಟಿ ಕೂಟ ಕಾರ್ಯಕ್ರಮ,ಪೋಷಣ್ ಪಕ್ವಾಡ್ ಹಾಗೂ ದೀಪ ಸಂಜೀವಿನಿ ಕಾರ್ಯಕ್ರಮ,ಸಂಜೀವಿನಿ ಸಂತೆ ಆಯೋಜನೆ,ಗ್ರಾಮ ಸಮೃದ್ಧಿ ಸ್ಥಿತಿಸ್ಥಾಪಕತ್ವ ಯೋಜನೆಯಡಿ ತರಬೇತಿ ನೀಡುವುದರ ಕುರಿತು ಮಾಹಿತಿ ತಿಳಿಸಲಾಯಿತು.
ಈ ಸಂದರ್ಭದಲ್ಲಿ ಪದಾದಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಪುತ್ತೂರು ತಾಲೂಕಿನ ಎಲ್ಲಾ ಪಂಚಾಯತ್ ಒಕ್ಕೂಟದ ಅಧ್ಯಕ್ಷರು, ಕಾರ್ಯದರ್ಶಿಗಳು, ಉಪಸಮಿತಿಯ ಸದಸ್ಯರು ಹಾಗೂ ತಾಲೂಕು ಅಭಿಯಾನ ನಿರ್ವಹಣಾ ಘಟಕದ ಸಿಬ್ಬಂದಿಗಳು ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ನಳಿನಿ ಪ್ರಾರ್ಥಿಸಿ, ಡೇ-ಎನ್ ಆರ್ ಎಲ್ ಎಮ್ ಯೋಜನೆಯ ವಲಯ ಮೇಲ್ವಿಚಾರಕಿ ನಮಿತಾ ಕೆ. ವಂದಿಸಿ, ನಿರೂಪಿಸಿದರು.










