ಪುತ್ತೂರು: ದ.ಕ ಜಿಲ್ಲಾ ಸಹಕಾರಿ ಯೂನಿಯನ್ ಇದರ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕರಾದ ಶಶಿಕುಮಾರ್ ರೈ ಬಾಲ್ಯೊಟ್ಟು ರವರಿಗೆ ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ಪುತ್ತೂರು ಶಾಖೆಯಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಿತು.
ಡಿಸಿಸಿ ಬ್ಯಾಂಕಿನ ಪುತ್ತೂರು ಶಾಖೆಯ ವ್ಯವಸ್ಥಾಪಕ ಹರೀಶ್ ರೈ , ಕುಂಬ್ರ ಶಾಖೆಯ ವಿಶ್ವನಾಥ್ ಗೌಡ , ಸುಬ್ರಹ್ಮಣ್ಯ ಶಾಖೆಯ ವಿಶ್ವನಾಥ್ , ಸೂಪರ್ವೈಸರ್ ವಸಂತ್ ಎಸ್, ನರಿಮೊಗ್ರು ಸಿ.ಎ ಬ್ಯಾಂಕಿನ ಸಿಇಓ ಮಧುಕರ್ ಎಚ್ , ಮುಂಡೂರು ಸಿ ಎ ಬ್ಯಾಂಕಿನ ಜಯಪ್ರಕಾಶ್ ರೈ ಶುಭಹಾರೈಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶಶಿಕುಮಾರ್ ರೈ, ಜಿಲ್ಲಾ ಸಹಕಾರಿ ಯೂನಿಯನ್ ಬಲಾಡ್ಯಗೊಳಿಸಲು ತಾಲೂಕು ಮಟ್ಟದಲ್ಲಿ ಸಮಿತಿ ರಚಿಸಿ ಆ ಮೂಲಕ ವಿಶೇಷ ಯೋಜನೆ ಹಾಕಿಕೊಳ್ಳಲಾಗಿದ್ದು, ಇದಕ್ಕೆ ಸಹಕರಿಸಬೇಕೆಂದು ವಿನಂತಿಸಿ, ಸಹಕಾರಿ ಕ್ಷೇತ್ರದ ಯಾವುದೇ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವ ಭರವಸೆಯೊಂದಿಗೆ ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕೆದಂಬಾಡಿ ಸಿ ಎ ಬ್ಯಾಂಕಿನ ವಿನಯ ರೈ , ಪಾಣಾಜೆಯ ಹರೀಶ್ ಭಟ್ , ಡಿಸಿಸಿ ಬ್ಯಾಂಕ್ ಪುತ್ತೂರು ಶಾಖೆಯ ಅಧಿಕಾರಿಗಳು, ಸೂಪರ್ವೈಸರ್ ಗಳು ಹಾಗೂ ಸಿಬ್ಬಂದಿಗಳು ನವೋದಯದ ಸೂಪರ್ವೈಸರ್ ಚಂದ್ರಶೇಖರ ಉಪಸ್ಥಿತರಿದ್ದರು. ಸವಣೂರು ಸಿ.ಎ ಬ್ಯಾಂಕಿನ ಮುಖ್ಯಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಡಿಸಿಸಿ ಬ್ಯಾಂಕಿನ ದೀಕ್ಷಿತ್ ಇಳಂತಾಜೆ ವಂದಿಸಿದರು.