ಉಪ್ಪಿನಂಗಡಿ: ರಸ್ತೆ ಗುಂಡಿ ತಪ್ಪಿಸಲು ರಸ್ತೆಯ ವಿರುದ್ಧ ದಿಕ್ಕಿನಲ್ಲಿ ಬಂದ ಕಾರೊಂದು ಇನ್ನೊಂದು ಕಪ್ಪು ಬಣ್ಣದ ಕಾರಿಗೆ ಡಿಕ್ಕಿ ಹೊಡಿದಿದ್ದು, ಈ ಸಂದರ್ಭ ಕಪ್ಪು ಬಣ್ಣದ ಕಾರು ಮಗುಚಿ ಬಿದ್ದು ಅದರಲ್ಲಿದ್ದವರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾದ ಘಟನೆ ಜ.23ರ ಸಂಜೆ 34 ನೆಕ್ಕಿಲಾಡಿಯ ವನಸುಮ ನರ್ಸರಿ ಬಳಿ ನಡೆದಿದೆ.
ಪುತ್ತೂರಿನಿಂದ 34ನೆಕ್ಕಿಲಾಡಿ ಕಡೆಗೆ ಬರುತ್ತಿದ್ದ ಕೆಎ.04ಎಂಜೆ9365 ನೋಂದಣಿ ಸಂಖ್ಯೆಯ ಬಿಳಿ ಬಣ್ಣದ ಕಾರು ವನಸುಮ ನರ್ಸರಿ ಬಳಿಯ ತಿರುವಿನಲ್ಲಿ ರಸ್ತೆಯ ಗುಂಡಿ ತಪ್ಪಿಸಲು ರಸ್ತೆಯ ವಿರುದ್ಧ ದಿಕ್ಕಿನಲ್ಲಿ ಬಂದಿದ್ದು, ಈ ಸಂದರ್ಭ 34 ನೆಕ್ಕಿಲಾಡಿ ಕಡೆಯಿಂದ ಪುತ್ತೂರು ಕಡೆಗೆ ತೆರಳುತ್ತಿದ್ದ ಕೆಎ08ಎಂ3917 ನೋಂದಣಿ ಸಂಖ್ಯೆಯ ಕಪ್ಪು ಬಣ್ಣದ ಕಾರಿಗೆ ಡಿಕ್ಕಿ ಹೊಡೆಯಿತು. ಡಿಕ್ಕಿಯ ರಭಸಕ್ಕೆ ನೆಕ್ಕಿಲಾಡಿ ಹೋಗುವ ಕಡೆ ಮುಖ ಮಾಡಿ ಮಗುಚಿ ಬಿದ್ದಿದೆ. ಕಾರಿನಲ್ಲಿದ್ದವರು ಸಣ್ಣಪುಟ್ಟ ಗಾಯಗೊಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.