





ಪುತ್ತೂರು: ಕಳೆದ 19 ವರ್ಷಗಳಿಂದ ಕಲ್ಲೇಗ ಕಲ್ಕುಡ ಕಲ್ಲುರ್ಟಿ ದೈವಸ್ಥಾನದ ಬಳಿಯಿರುವ ಅಶ್ವಿನಿ ಕಾಂಪ್ಲೆಕ್ಸ್’ನಲ್ಲಿ ವ್ಯವಹರಿಸುತ್ತಿದ್ದ ಹೋಟೆಲ್ ‘ಶ್ರೀಕೃಷ್ಣ ಭವನ’ ಶುದ್ದ ಸಸ್ಯಹಾರಿ ಫಲಾಹಾರ ಮಂದಿರವು ಕಲ್ಲೇಗ ದೈವಸ್ಥಾನದ ಮುಂಭಾದಲ್ಲಿರುವ ಪಟ್ಲ ಕಾಂಪ್ಲೆಕ್ಸ್’ಗೆ ಸ್ಥಳಾಂತರಗೊಂಡು ಜ.24ರಂದು ಶುಭಾರಂಭಗೊಂಡಿತು.


ಸ್ಥಳಾಂತರಗೊಂಡಿರುವ ಹೋಟೆಲ್‌ನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ನಾನು ಕಾಲೇಜು ಜೀವನದಿಂದಲೇ ಶ್ರೀಕೃಷ್ಣ ಭವನ ಹೋಟೆಲ್‌ನ ಆಹಾರಗಳ ರುಚಿಯನ್ನು ಸವಿದವನು. ಈಗಲೂ ಅದೇ ಗುಣಮಟ್ಟವನ್ನು ಉಳಿಸಿಕೊಂಡಿದ್ದಾರೆ. ಅಂದು ಬಹಳಷ್ಟು ಮಂದಿ ಬಡ ವಿದ್ಯಾರ್ಥಿಗಳಿಗೆ ಅನ್ನಪೂರ್ಣೆಯಾಗಿ ಹಸಿವು ನೀಗಿಸಿದವರು. ನಗುಮೊಗದ ಸೇವೆಯೊಂದಿಗೆ ಬೆಳೆದು ಬಂದಿರುವ ಕೃಷ್ಣಪ್ಪ ಗೌಡರವರ ಶ್ರೀಕೃಷ್ಣ ಭವನ ಹೋಟೆಲ್ ಇಂದು ಅತ್ಯಾಧುನಿಕ ಮಾದರಿಯ ಅಡುಗೆ ವಿಧಾನಗಳನ್ನು ಅಳವಡಿಸಿಕೊಂಡು ಫೈವ್ ಸ್ಟಾರ್ ಮಾದರಿಯಲ್ಲಿ ಶುಭಾರಂಭಗೊಂಡಿದ್ದು ಬೆಳೆಯುತ್ತಿರುವ ನಗರಕ್ಕೆ ಕೊಡುಗೆ ನೀಡಿದ್ದಾರೆ ಎಂದರು.






ಮುಖ್ಯ ಅತಿಥಿಯಾಗಿದ್ದ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ಪ್ರಾಮಾಣಿಕ ಸೇವೆ ನೀಡಿದಾಗ ಉದ್ಯಮ ಉನ್ನತ ಮಟ್ಟಕ್ಕೆ ಬೆಳೆಯುತ್ತದೆ ಎನ್ನುವುದಕ್ಕೆ ಕೃಷ್ಣಪ್ಪ ಗೌಡರವರ ಶ್ರೀಕೃಷ್ಣ ಭವನ ಹೋಟೇಲ್ ಸಾಕ್ಷಿಯಾಗಿದೆ. ಪುತ್ತೂರಿನಲ್ಲಿ ವೇಗವಾಗಿ ಬೆಳೆಯುತ್ತಿರುವ ನೆಹರುನಗರಕ್ಕೆ ದೊಡ್ಡ ಹೋಟೆಲ್‌ನ ಆವಶ್ಯಕತೆಯಿದ್ದು ಅದನ್ನು ಪೂರೈಸಿದ್ದಾರೆ ಎಂದರು.

ನ್ಯಾಯವಾದಿ ಚಿದಾನಂದ ಬೈಲಾಡಿ, ನಗರ ಸಭಾ ಸದಸ್ಯ ದಿನೇಶ್ ಶೇವಿರೆ, ಕಟ್ಟಡದ ಮ್ಹಾಲಕ ವಿಜಯ ಪಟ್ಲ, ಶ್ರೀಧರ ಪಟ್ಲ, ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷ ದಿನೇಶ್ ಸಾಲ್ಯಾನ್ ಬನ್ನೂರು, ನಾಗೇಶ್ ಕೆಡೆಂಜಿ, ವಸಂತ ನೆಕ್ರಾಜೆ, ಪ್ರವೀಣ್ ಕುಂಟ್ಯಾನ, ಲಿಂಗಪ್ಪ ಗೌಡ ಸೇರಿದಂತೆ ಹಲವು ಮಂದಿ ಗಣ್ಯರು ಆಗಮಿಸಿ ಶುಭಹಾರೈಸಿದರು.
ವಸಂತ ವಿರಮಂಗಲ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಮ್ಹಾಲಕರ ಪುತ್ರ ಮುರಳೀಧರ ಕೆ.ಎಲ್ ವಂದಿಸಿದರು. ಮ್ಹಾಲಕ ಕೃಷ್ಣಪ್ಪ ಗೌಡ ಅತಿಥಿಗಳನ್ನು ಶಾಲು ಹಾಕಿ, ಸ್ಮರಣಿಕ ನೀಡಿ ಗೌರವಿಸಿದರು. ಮ್ಹಾಲಕರ ಪತ್ನಿ ಲಲಿತಾ, ಪುತ್ರರಾದ ನಿರಂಜನ ಕೆ.ಎಲ್., ಅರುಣೋದಯ ಕೆ.ಎಲ್ ಉಪಸ್ಥಿತರಿದ್ದರು.










