ಸೀನಿಯರ್ ಎಸಿ ಜುಬಿನ್ ಮೊಹಪಾತ್ರ ರಾಯಚೂರಿಗೆ ವರ್ಗಾವಣೆ

0


ಪುತ್ತೂರು: ಇತ್ತೀಚೆಗಷ್ಟೆ ಭಡ್ತಿ ಹೊಂದಿ ಪುತ್ತೂರು ಉಪವಿಭಾಗದ ಹಿರಿಯ ಸಹಾಯಕ ಆಯುಕ್ತರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಜುಬಿನ್ ಮೊಹಪಾತ್ರ ಅವರನ್ನು ರಾಯಚೂರು ನಗರಪಾಲಿಕೆ ಆಯುಕ್ತರಾಗಿ ನೇಮಕಗೊಳಿಸಿ ಸರಕಾರ ವರ್ಗಾವಣೆ ಮಾಡಿ ಆದೇಶಿಸಿದೆ.


2021ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿರುವ ಜುಬಿನ್ ಮೊಹಾಪಾತ್ರ ಅವರು 2023ರ ಡಿ.27ರಂದು ಪುತ್ತೂರು ಉಪವಿಭಾಗಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಹೊಸ ವರ್ಷದ ಆರಂಭದಲ್ಲಿ ಸರಕಾರ ಕೆಲವು ಐಎಎಸ್ ಅಧಿಕಾರಿಗಳಿಗೆ ಮುಂಭಡ್ತಿ ನೀಡಿತ್ತು. ಅದರಲ್ಲಿ ಜುಬಿನ್ ಮೊಹಾಪಾತ್ರ ಅವರೂ ಒಬ್ಬರಾಗಿದ್ದರು. ಭಡ್ತಿ ಹೊಂದಿದ ಬಳಿಕ ಅವರು ಹಿರಿಯ ಸಹಾಯಕ ಆಯುಕ್ತರಾಗಿ ಪುತ್ತೂರಿನಲ್ಲೇ ಕರ್ತವ್ಯ ಮುಂದುವರಿಸಿದ್ದರು. ಇದೀಗ ಅವರನ್ನು ರಾಯಚೂರು ನಗರಪಾಲಿಕೆ ಕಮಿಷನರ್ ಆಗಿ ನೇಮಕಗೊಳಿಸಿ ವರ್ಗಾವಣೆ ಮಾಡಲಾಗಿದೆ. ತೆರವಾಗಲಿರುವ ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತರ ಹುದ್ದೆಗೆ ಇನ್ನಷ್ಟೇ ನೇಮಕವಾಗಬೇಕಿದೆ.


ಒಡಿಸ್ಸಾ ರಾಜ್ಯದ ಭುವನೇಶ್ವರ್ ಮೂಲದವರಾಗಿರುವ ಜುಬಿನ್ ಮೊಹಾಪಾತ್ರರವರು ಆರಂಭದಲ್ಲಿ ಐಟಿ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದರು. ಐಎಎಸ್ ಮಾಡುವ ಮೊದಲು 2019ರಲ್ಲಿ ಐಪಿಎಸ್ ಪೂರ್ಣಗೊಳಿಸಿ 26 ತಿಂಗಳುಗಳ ಕಾಲ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದರು. ಅದಾದ ಬಳಿಕ 46ನೇ ರ‍್ಯಾಂಕ್‌ನೊಂದಿಗೆ ಐಎಎಸ್ ಪೂರ್ಣಗೊಳಿಸಿ ಕಾರವಾರದಲ್ಲಿ ಪ್ರೊಬೇಷನರಿ ಅವಧಿ ಮುಗಿಸಿ ಪ್ರಥಮ ನೇಮಕಾತಿಯಾಗಿ ಪುತ್ತೂರು ಉಪವಿಭಾಗಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು.

LEAVE A REPLY

Please enter your comment!
Please enter your name here