ಕಾಣಿಯೂರು: ಸ. ಹಿ. ಪ್ರಾ. ಶಾಲೆ ನಾಣಿಲದಲ್ಲಿ 76ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ವಸಂತ ದಲಾರಿ ಅವರು ಧ್ವಜಾರೋಹಣ ನೆರವೇರಿಸಿದರು.
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಕಡಬ ಆರಕ್ಷಕ ಠಾಣೆಯ ಸಿಬ್ಬಂದಿ ಮಹೇಶ್ ರವರು ಮಕ್ಕಳ ಸುರಕ್ಷತೆ ಮತ್ತು ಪೋಷಕರ ಜವಾಬ್ದಾರಿ ಮತ್ತು ಕರ್ತವ್ಯಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ಸಭಾಧ್ಯಕ್ಷ ವಹಿಸಿದ ಎಸ್ ಡಿ ಎಂ ಸಿ ಅಧ್ಯಕ್ಷ ವಸಂತ ದಲಾರಿಯವರು ಮಾತನಾಡಿ, ಅಖಂಡ ಭಾರತ ವಿಶ್ವಗುರುವಾಗಲಿ ಎಂದು ಶುಭ ಹಾರೈಸಿದರು.
ಪುಟಾಣಿ ಮಕ್ಕಳು ಮತ್ತು ಸಹ ಶಿಕ್ಷಕರಾದ ಸುನಿಲ್ ಅವರು ಗಣರಾಜ್ಯೋತ್ಸವದ ಮಹತ್ವವ ತಿಳಿಸಿದರು. ಈ ಸಂದರ್ಭದಲ್ಲಿ ಕಾಣಿಯೂರು ಗ್ರಾ.ಪಂ. ಸದಸ್ಯೆ ತೇಜಕುಮಾರಿ ಉದ್ಲಡ್ಡ, ಶಾಲಾ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷೆ ಶೋಭಾ ಬಾಕಿಲ, ವಿದ್ಯಾರ್ಥಿ ನಾಯಕಿ ಅಸ್ಮಿತ ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರು, ಶಿಕ್ಷಕ ವೃಂದ, ಪೋಷಕರು, ಭಾಗವಹಿಸಿದರು. ಮುಖ್ಯಗುರು ಪದ್ಮಯ ಗೌಡ ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿದರು. ಸಹಶಿಕ್ಷಕಿ ಮೋಹಿನಿ ಎನ್ ವಂದಿಸಿದರು. ಗೌರವ ಶಿಕ್ಷಕಿ ಚೇತನ ಕಾರ್ಯಕ್ರಮ ನಿರೂಪಿಸಿದರು.