ಪುತ್ತೂರು: ರಾಷ್ಟ್ರ ರಕ್ಷಣೆಗೆ ಸೌಹಾರ್ದತೆಗೆ ಸಂಕಲ್ಪ’ ಧೈಯದಲ್ಲಿ ಸಮಸ್ತ ಕೇಂದ್ರೀಯ ಜಂಇಯ್ಯತುಲ್ ಉಲಮಾದ ವಿದ್ಯಾರ್ಥಿ ಸಂಘಟನೆಯಾಗಿರುವ ಎಸ್‌ಕೆಎಸ್‌ಎಸ್ ಎಫ್ ವತಿಯಿಂದ ಗಣರಾಜ್ಯೋತ್ಸವದ ಅಂಗವಾಗಿ ಮಾನವ ಸರಪಳಿ ಕಾರ್ಯಕ್ರಮದ ಅಂಗವಾಗಿ ಜಾಥಾ ನಡೆಯಿತು.ಕುಂಬ್ರ ಅಬ್ರೋಡ್ ಹಾಲ್‌ನಿಂದ ಮಧ್ಯಾಹ್ನ 2 ಗಂಟೆಗೆ ಜಾಥಾಕ್ಕೆ ಚಾಲನೆ ನೀಡಲಾಯಿತು.
ಸಾಮಾಜಿಕ ನೇತಾರ ಮಹಮ್ಮದ್ ಬಡಗನ್ನೂರು ರವರು ಕಾರ್ಯಕ್ರಮದ ಸ್ವಾಗತ ಸಮಿತಿ ಚೇರ್ಮೆನ್ ಮಹಮ್ಮದ್ ಕೆ.ಎಚ್ ರವರಿಗೆ ಸಂಘಟನೆಯ ದ್ವಜವನ್ನು ಹಸ್ತಾಂತರಿಸಿ ಚಾಲನೆ ನೀಡಿದರು.
ಧಾರ್ಮಿಕ ಮುಖಂಡರಾದ ತಾಜುದ್ದಿನ್ ರಹ್ಮಾನಿ ದುವಾ ನೆರವೇರಿಸಿದರು.ಜಾಥಾದಲ್ಲಿ ಸಾವಿರಾರು ಮಂದಿ ಕಾರ್ಯಕರ್ತರುಗಳು, ಸುಮಾರು 20 ಕ್ಕೂ ಹೆಚ್ಚು ದಫ್ ತಂಡಗಳು, ಸ್ಕೌಟ್, ಗೈಡ್ಸ್ ತಂಡ ಮದ್ರಸಾ ವಿದ್ಯಾರ್ಥಿಗಳ ಕಲರವ ಜಾಥಕ್ಕೆ ಮೆರಗು ನೀಡಿತು.
ವಿಕಾಯ ವಿಂಗ್ಸ್ ತಂಡ ಸ್ವಯಂ ಸೇವಕರಾಗಿ ರ್ಯಾಲ್ಲಿ ನೇತೃತ್ವ ವಹಿಸಿತ್ತು.ಎಸ್ ಕೆ ಎಸ್ ಎಸ್ ಎಫ್ ಕ್ಯಾಂಪಸ್, ದಹವಾ, ತ್ವಹಿಬಾ, ವಿಜಿಲಿಯನ್ಸ್ ಹಾಗೂ ಶಾಖೆಯ ವಿವಿಧ ಭಾಗಗಳ ಆಂಬುಲೆನ್ಸ್ ವಾಹನಗಳು ಜಾಥಾದಲ್ಲಿ ಪಾಲ್ಗೊಂಡಿದ್ದವು. ಕೇಸರಿ ಬಿಳಿ ಹಸಿರು ಬಣ್ಣದ ದ್ವಜ, ಹಾಗೂ ವಿದ್ಯಾರ್ಥಿಗಳ ತಲೆಯಲ್ಲಿ ಟೋಪಿಗಳು ಆಕರ್ಷಣೆ ಮೂಡಿಸಿತು.
ಸಂಘಟನೆಯ ಇಸ್ಮಾಯಿಲ್ ಯಮಾನಿ, ಸಂಘಟನಾ ಕಾರ್ಯದರ್ಶಿ ಯಾಸರ್ ಚಿಬಿದ್ರೆ, ಜಿಲ್ಲಾ ಕಾರ್ಯದರ್ಶಿ ಅಶ್ರಫ್ ಮುಕ್ವೆ, ಕುಂಬ್ರ ವಲಯ ಅಧ್ಯಕ್ಷ ಮನ್ಸೂರ್ ಅಸ್ಲಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.