ಸತ್ಯಸಾಯಿ ಮಂದಿರದಲ್ಲಿ 60ನೇ ಉಚಿತ ನೇತ್ರಾ ಚಿಕಿತ್ಸಾ ಶಿಬಿರ

0

ಪುತ್ತೂರು: ಶ್ರೀಸತ್ಯಸಾಯಿ ಸೇವಾ ಸಮಿತಿ ಪುತ್ತೂರು ಮತ್ತು ಮುಖ್ಯರಸ್ತೆಯ ಅಂಚೆ ಕಚೇರಿ ಬಳಿಯ ಹೆಗೆ ಆರ್ಕೇಡ್‌ನಲ್ಲಿರುವ ಅಶ್ವಿನ್ ನೇತ್ರ ಚಿಕಿತ್ಸಾಲಯದ ಸಹಯೋಗದಲ್ಲಿ 60ನೇ ಉಚಿತ ನೇತ್ರಾ ಚಿಕಿತ್ಸಾ ಶಿಬಿರವು ಜ.26ರಂದು ಕೋರ್ಟ್‌ರಸ್ತೆಯ ಸತ್ಯಸಾಯಿ ಮಂದಿರದಲ್ಲಿ ನಡೆಯಿತು.


ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ನಿವೃತ್ತ ನೇತ್ರಾಧಿಕಾರಿ ಶಾಂತರಾಜ್ ದೃಷ್ಟಿದೋಷ ಇರುವವರಿಗೆ ಕಣ್ಣಿನ ಪರೀಕ್ಷೆ ನಡೆಸಿ ನಿಮ್ಮ ಆವಶ್ಯಕತೆಗೆ ತಕ್ಕಂತೆ ಕನ್ನಡಕಗಳನ್ನು ಉಚಿತವಾಗಿ ವಿತರಿಸಲಾಗುವುದು. ಲಭ್ಯವಿರುವ ಕನ್ನಡಕಗಳನ್ನು ವಿತರಿಸಲಾಗುವುದು. ಇನ್ನು ಉಳಿದವರಿಗೆ ಫೆ.9ರಂದು ಸತ್ಯಸಾಯಿ ಮಂದಿರಲ್ಲಿ ವಿತರಿಸಲಾಗುತ್ತಿದ್ದು ಶಿಬಿರಾರ್ಥಿಗಳಿಗೆ ನೀಡಿರುವ ಚೀಟಿಯ ತೋರಿಸಿ ಕನ್ನಡಕ ಪಡೆದುಕೊಳ್ಳಬೇಕು. ಪೊರೆಯ ಸಮಸ್ಯೆ ಇರುವವರಿಗೆ ವೆನ್‌ಲಾಕ್ ಆಸ್ಪತ್ರೆಯಲ್ಲಿ ಉಚಿತ ಶಸ್ತ್ರ ಚಿಕಿತ್ಸೆ ನಡೆಸಲಾಗುವುದು ಎಂದರು. ಅಶ್ವಿನ್ ಅಪ್ಟಿಕಲ್ಸ್‌ನ ತಜ್ಞ ವೈದ್ಯರಾದ ಡಾ.ಅಶ್ವಿನ್, ಡಾ.ವಿಕಾಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಡಾ.ಪ್ರಭಾಕರ ರಾವ್ ಮೆಮೋರಿಯಲ್ ಟ್ರಸ್ಟ್‌ನ ಅಧ್ಯಕ್ಷ ಡಾ.ಸತ್ಯಸುಂದರ ರಾವ್ ಸ್ವಾಗತಿಸಿದರು. ಶೋಭಾ ರಾವ್ ವಂದಿಸಿದರು. ಸಂಚಾಲಕ ದಯಾನಂದ ಕೆ.ಎಸ್ ಕಾರ್ಯಕ್ರಮ ನಿರೂಪಿಸಿದರು. ಹಿರಿಯರಾದ ಪದ್ಮನಾಭ ನಾಯಕ್ ಸಹಕರಿಸಿದರು. ಉಷಾ ರೈ ಹಾಗೂ ಪ್ರಶಾಂತಿ ಪ್ರಾರ್ಥಿಸಿದರು. ಶಿಬಿರದಲ್ಲಿ ಒಟ್ಟು 210 ಭಾಗವಹಿಸಿದ್ದರು. 179 ಮಂದಿಗೆ ಉಚಿತ ಕನ್ನಡಕ ವಿತರಿಸಲಾಯಿತು. 21 ಮಂದಿಯನ್ನು ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಆಯ್ಕೆ ಮಾಡಲಾಯಿತು.

LEAVE A REPLY

Please enter your comment!
Please enter your name here