ಬಡಗನ್ನೂರು: ಪಡುಮಲೆ ಕೋಟಿ – ಚೆನ್ನಯ್ಯ ಜನ್ಮಸ್ಥಾನ ಸಂಚಲನ ಸೇವಾ ಟ್ರಸ್ಟ್ ಪಡುಮಲೆ ಕೋಟಿ ಚೆನ್ನಯರ ಜನ್ಮಸ್ಥಾನ ಮತ್ತು ಮೂಲಸ್ಥಾನ, ಇದರ ವತಿಯಿಂದ ಜ. 25 ರಂದು ಶ್ರೀ ನಾಗಬ್ರಹ್ಮರಿಗೆ ಮತ್ತು ಪರಿವಾರ ದೇವರಿಗೆ ವಿಶೇಷ ಪೂಜೆ, ತಾಯಿ ದೇಯಿಬೈದೆತಿಗೆ “ದೀಪೋತ್ಸವ” ಕಾರ್ಯಕ್ರಮ ನಡೆಯಿತು.
ಜ.25 ರಂದು ಕ್ಷೇತ್ರದ ತಂತ್ರಿವರ್ಯರಾದ ಬ್ರಹ್ಮಶ್ರೀ ವೇಧಮೂರ್ತಿ ಕುಂಟಾರು ವಾಸುದೇವ ತಂತ್ರಿಯವರ ಮಾರ್ಗದರ್ಶನದಲ್ಲಿ ಬ್ರಹ್ಮಶ್ರೀ ವೇದಮೂರ್ತಿ ರವೀಶ ತಂತ್ರಿಯವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನಡೆದು ಮಧ್ಯಾಹ್ನ ಮಹಾ ಮಂಗಳಾರತಿ ಪ್ರಸಾದ ವಿತರಣೆ, ಸಂಜೆ ನಾಗಬ್ರಹ್ಮರಿಗೆ ಮತ್ತು ಪರಿವಾರ ದೇವರಿಗೆ ವಿಶೇಷ ಪೂಜೆ, “ದೇವಿ ಸ್ವರೂಪಿಣಿ”ತಾಯಿ ದೇಯಿಬೈದೆದಿಗೆ “ದೀಪೋತ್ಸವ” ವಿಜೃಂಭಣೆಯಿಂದ ನಡೆಯುತ್ತದೆ.
ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ದೀಪೋತ್ಸವಕ್ಕೆ ಚಾಲನೆ ನೀಡಿ ಸಂದರ್ಭೋಚಿತ ಮಾತನಾಡಿ, ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಕೋಟಿ – ಚೆನ್ನಯ್ಯ ಜನ್ಮಸ್ಥಾನ ಸಂಚಲನ ಸಮಿತಿ ಸದಸ್ಯರಾದ ವಿಜಯ ಕುಮಾರ್ ಸೊರಕೆ, ರಂಜನ್ ಮಿಜಾರು ಸೇರಿದಂತೆ ಹಲವಾರು ಗಣ್ಯರು ವಿವಿಧ ಗರಡಿ ಮುಖ್ಯಸ್ಥರು, ದರ್ಶನ ಪಾತ್ರಿಗಳು ಮತ್ತು ಊರ ಪರವೂರ ಭಕ್ತಾದಿಗಳು ಭಾಗವಹಿಸಿದರು.
ಮುಂದೆ ಪ್ರತೀ ವರ್ಷ ಜನವರಿ ತಿಂಗಳ ನಾಲ್ಕನೇ ಶನಿವಾರ ನಾಗಬ್ರಹ್ಮರಿಗೆ ಮತ್ತು ಪರಿವಾರ ದೇವರಿಗೆ ವಿಶೇಷ ಪೂಜೆ. ತಾಯಿ ದೇಯಿಬೈದೆತಿಗೆ “ದೀಪೋತ್ಸವ” , ಮತ್ತು ಪ್ರತೀ ತಿಂಗಳು ಸಂಕ್ರಮಣದಂದು ಶ್ರೀ ಸನ್ನಿಧಿಯಲ್ಲಿ ವಿಶೇಷ ಪೂಜೆ ನಡೆಯಲಿದೆ ಎಂದು ಕೋಟಿ – ಚೆನ್ನಯ್ಯ ಜನ್ಮಸ್ಥಾನ ಸಂಚಲನ ಸಮಿತಿ ಹರಿಕೃಷ್ಣ ಬಂಟ್ವಾಳ ಹೇಳಿದರು.