ಪುತ್ತೂರು: “ನಮ್ಮ ಶಾಲೆ “ದ. ಕ. ಜಿ. ಪಂ. ಹಿ. ಪ್ರಾ ಶಾಲೆ ಸಾಮೆತ್ತಡ್ಕದಲ್ಲಿ 76ನೇ ವರ್ಷದ ಗಣರಾಜ್ಯ ದಿನ ಆಚರಣೆ ಮಾಡಿದರು.
ಸಾಮೆತ್ತಡ್ಕ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಗೋಪಾಲ ಕೃಷ್ಣ ಭಟ್ ಧ್ವಜಾರೋಹಣಗೈದರು. ಕಾರ್ಯಕ್ರಮದಲ್ಲಿ ನಮ್ಮ ವಾರ್ಡ್ ನ ನಗರ ಸಭಾ ಸದಸ್ಯ ಮನೋಹರ್,ವಿದ್ಯಾಭಿಮಾನಿ ದಿನೇಶ್ ಕಾಮತ್, SDMC ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು,SDMC ನಿಕಟಪೂರ್ವ ಅಧ್ಯಕ್ಷರು, ಪೋಷಕರು, ಅಕ್ಷರ ದಾಸೋಹ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಶಾಲೆಯ ಮುಖ್ಯ ಗುರು ಮರಿಯಾ ಅಶ್ರಫ್ ಸ್ವಾಗತಿಸಿ,ಕಾರ್ಯಕ್ರಮ ನಿರೂಪಿಸಿದರು.ಟ್ರಸ್ಟ್ ಪ್ರತಿನಿಧಿ ಇಂದಿವರ್ ಭಟ್, ಹಿರಿಯ ವಿದ್ಯಾರ್ಥಿ ಮೊಹಮ್ಮದ್ ಫಾಹಿಝ್ ಹಾಗೂ ಶಿಕ್ಷಕರು ಸಹಕರಿಸಿದರು.