ಪುತ್ತೂರು: ಸಂತ ಫಿಲೋಮಿನ ಅನುದಾನಿತ ಪ್ರೌಢಶಾಲೆ ಮತ್ತು ಸಂತ ಫಿಲೋಮಿನಾ ಆಂಗ್ಲ ಪ್ರಾಥಮಿಕ ಶಾಲೆಯ ಜಂಟಿ ಸಹಯೋಗದೊಂದಿಗೆ ಗಣರಾಜ್ಯೋತ್ಸವ ಆಚರಿಸಿದರು. ಫಿಲೋಮಿನ ಅನುದಾನಿತ ಪ್ರೌಢಶಾಲೆಯ ಮುಖ್ಯಗುರು ವಂ|ಮ್ಯಾಕ್ಸಿಮ್ ಡಿಸೋಜಾರವರು ಧ್ವಜಾರೋಹಣ ನಡೆಸಿ ಶುಭಾಶಯ ಹೇಳಿದರು.
ಸಂತ ಫಿಲೋಮಿನಾ ಅನುದಾನಿತ ಪ್ರೌಢಶಾಲೆಯ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷೆ ಸೌಮ್ಯ ಭಟ್, ಸಂತ ಫಿಲೋಮಿನಾ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಲೋರ, ರಕ್ಷಕ ಶಿಕ್ಷಕ ಸಂಘದ ಜತೆ ಕಾರ್ಯದರ್ಶಿ ಸರಿತಾ ಪ್ರಮೋದ್, ಉಭಯ ಶಾಲೆಗಳ ವಿದ್ಯಾರ್ಥಿ ನಾಯಕರಾದ ಮಾಸ್ಟರ್ ತರುಣ್ ಮತ್ತು ಮಾಸ್ಟರ್ ಹಾರುಶ್ ರೈ ಉಪಸ್ಥಿತರಿದ್ದರು. ಉಭಯ ಶಾಲಾ ವಿದ್ಯಾರ್ಥಿನಿಯರಾದ ಕು. ಜರೀನಾ ಮತ್ತು ಕು.ಆದ್ಯ ಪ್ರಸಾದ್ ದಿನದ ವಿಶೇಷತೆ ಕುರಿತು ಮಾತನಾಡಿದರು.
ಶಿಕ್ಷಕಿ ಶಿಲ್ಪ ಕಾರ್ಯಕ್ರಮ ನಿರೂಪಿಸಿದರು. ಸಂತ ಫಿಲೋಮಿನ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕಿ ದೀಪ್ತಿ ವಂದಿಸಿದರು. ಪರೇಡ್ ಕಮಾಂಡರ್ ಆಗಿ ಕ್ಯಾಡೆಟ್ ಶ್ರೀಶ, ಪೈಲೆಟ್ಸ್‌ಗಳಾಗಿ ಕ್ಯಾಡೆಟ್ಸ್ ಶರಣ್ಯ ಮತ್ತು ವಿಜೇತ, ಶಾಲಾ ವಾದ್ಯವೃಂದ ಹಿರಿಯ ವಿದ್ಯಾರ್ಥಿ ವೇಣುಗೋಪಾಲ ರಾಷ್ಟ್ರಗೀತೆ ನುಡಿಸಿದರು. ಸಂತ ಫಿಲೋಮಿನಾ ಆಂಗ್ಲ ಮಾಧ್ಯಮ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಸದಾಶಿವ ಹಾಗೂ ಉಭಯ ಶಾಲೆಯ ಶಿಕ್ಷಕರು ಮತ್ತು ಶಿಕ್ಷಕೇತರ ಬಳಗದವರು ಸಹಕರಿಸಿದರು.