ಅಧ್ಯಕ್ಷೆಯಾಗಿ ಹೇಮಲತಾ, ಉಪಾಧ್ಯಕ್ಷರಾಗಿ ಗಂಗಾಧರ ಕನ್ಯಾಮಂಗಲ
ಪುತ್ತೂರು: ಕುಮಾರ ಮಂಗಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನ ಎಸ್.ಡಿ.ಎಂ.ಸಿ ರಚನೆಯನ್ನು ಸವಣೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಂದರಿ ಬಿ.ಎಸ್ ಮತ್ತು ಉಪಾಧ್ಯಕ್ಷರಾದ ಜಯಶ್ರೀ ಕುಚ್ಛೆಜಾಲು ಇವರ ಉಪಸ್ಥಿತಿಯಲ್ಲಿ ರಚಿಸಲಾಯಿತು.
ಎಸ್.ಡಿ. ಎಂ.ಸಿ ಅಧ್ಯಕ್ಷರಾಗಿ ಹೇಮಲತಾ ಮತ್ತು ಉಪಾಧ್ಯಕ್ಷರಾಗಿ ಗಂಗಾಧರ ಕನ್ಯಾಮಂಗಲ ಇವರು ಸರ್ವಾನುಮತದಿಂದ ಆಯ್ಕೆಯಾದರು. ಸದಸ್ಯರಾಗಿ ಯಶೋಧ ನೂಜಾಜೆ, ಸರಿತಾ, ವೇದಾವತಿ, ಮಮತಾ, ಶ್ಯಾಮಲಾ, ಅಕ್ಕು, ರೇಖಾ, ಸ್ಮಿತಾ, ಲೀಲಾವತಿ, ತಾರಾಮಣಿ, ಸುರೇಖಾ, ಜಯಂತಿ ಕೆ., ಸುಂದರ, ರಮೇಶ್, ಸಂಜೀವಶೆಟ್ಟಿ, ಕೃಷ್ಣಪ್ಪಗೌಡ ಬೊಳ್ಳಾಜೆ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ನಾಮನಿರ್ದೇಶಿತ ಸದಸ್ಯರಾಗಿ ಸವಣೂರು ಗ್ರಾಮ ಪಂಚಾಯತ್ ಸದಸ್ಯ ಶೀನಪ್ಪ ಶೆಟ್ಟಿ ನೆಕ್ರಾಜೆ, ಶಿಕ್ಷಕ ಪ್ರತಿನಿಧಿಯಾಗಿ ಶ್ಯಾಮ್. ಕೆ, ವಿದ್ಯಾರ್ಥಿ ಪ್ರತಿನಿಧಿಯಾಗಿ ರಶ್ಮಿ.ಆರ್ ಆಯ್ಕೆಯಾದರು. ಪದನಿಮಿತ್ತ ಸದಸ್ಯರಲ್ಲಿ ಕಾರ್ಯದರ್ಶಿಯಾಗಿ ಶಾಲೆಯ ಮುಖ್ಯ ಗುರು ಸಂತೋಷ್ ಎನ್.ಟಿ, ಆರೋಗ್ಯ ಕಾರ್ಯಕರ್ತೆ ಅಕ್ಷತಾ.ಕೆ, ಅಂಗನವಾಡಿ ಕಾರ್ಯಕರ್ತೆ ಜಾನಕಿರನ್ನು ಆಯ್ಕೆ ಮಾಡಲಾಯಿತು. ಸವಣೂರು ಗ್ರಾಮ ಪಂಚಾಯತ್ ಸದಸ್ಯ ಗಿರಿಶಂಕರ ಸುಲಾಯ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಹೇಶ್ ಕೆ ಸವಣೂರು, ಹಿರಿಯ ವಿದ್ಯಾರ್ಥಿ ಸಂಘದ ಜೊತೆ ಕಾರ್ಯದರ್ಶಿಯಾದ ಉಮೇಶ್ ಬೇರಿಕೆ ಕುಮಾರಮಂಗಲ
ಉಪಸ್ಥಿತರಿದ್ದರು.