ಪುತ್ತೂರು ತಾಲೂಕು ಆಡಳಿತ ಸೌಧ, ತಾಲೂಕು ಕಚೇರಿ ಸಭಾಂಗಣದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಪುತ್ತೂರು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಶ್ರೀ ಮಡಿವಾಳ ಮಾಚಿದೇವ ಜಯಂತಿ ದಿನಾಚರಣೆ
ಪುತ್ತೂರು ಸಂತ ಫಿಲೋಮಿನಾ ಕಾಲೇಜಿನ ಕ್ರೀಡಾಂಗಣದಲ್ಲಿ ಬೆಳಿಗ್ಗೆ ೧೦ಕ್ಕೆ ಅಭಿರಾಮ್ ಫ್ರೆಂಡ್ಸ್ ಕ್ಲಬ್ನ ಪುತ್ತೂರು ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟದ ಉದ್ಘಾಟನೆ, ಸಂಜೆ ೭ಕ್ಕೆ ಟ್ರೋಫಿ ಅನಾವರಣ
ಕಾಣಿಯೂರು ಗ್ರಾ.ಪಂ ಸಭಾಭವನದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಗ್ರಾಮಸಭೆ
ಕೊಲ ಗ್ರಾ.ಪಂ ಸಭಾಭವನದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ೧ನೇ ವಾರ್ಡ್, ೧೧.೩೦ಕ್ಕೆ ೨ನೇ ವಾರ್ಡ್, ಕೊಲ ಕಿ.ಪ್ರಾ. ಶಾಲೆಯಲ್ಲಿ ಅಪರಾಹ್ನ ೨.೩೦ಕ್ಕೆ ೩ನೇ ವಾರ್ಡ್ನ ವಾರ್ಡುಸಭೆ
ಕೆದಂಬಾಡಿ ಹಿ.ಪ್ರಾ. ಶಾಲೆಯಲ್ಲಿ ಬೆಳಿಗ್ಗೆ ೧೦ರಿಂದ ಕೆದಂಬಾಡಿ ೧ನೇ ವಾರ್ಡ್, ಸಾರೆಪುಣಿ ಅಂಗನವಾಡಿ ಕೇಂದ್ರದಲ್ಲಿ ೧೧ಕ್ಕೆ ಕೆದಂಬಾಡಿ ೨ನೇ ವಾರ್ಡ್, ಕೆದಂಬಾಡಿ ಗ್ರಾ.ಪಂ ಕಚೇರಿಯಲ್ಲಿ ಅಪರಾಹ್ನ ೩ಕ್ಕೆ ಕೆದಂಬಾಡಿ ೩ನೇ ವಾರ್ಡ್, ೪ಕ್ಕೆ ೪ನೇ ವಾರ್ಡ್ನ ವಾರ್ಡುಸಭೆ
ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಪ್ರಧಾನ ಕಛೇರಿಯಲ್ಲಿ ಬೆಳಿಗ್ಗೆ ೧೦ರಿಂದ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯ ನಾಮಪತ್ರ ಸಲ್ಲಿಕೆ
ಹೊಸಮಠ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಪ್ರಧಾನ ಕಛೇರಿಯಲ್ಲಿ ಬೆಳಿಗ್ಗೆ ೧೦ರಿಂದ ಆಡಳಿತ ಮಂಡಳಿ ನಿರ್ದೇಶಕರ ಸಾಮಾನ್ಯ ಚುನಾವಣೆಯ ನಾಮಪತ್ರ ಸಲ್ಲಿಕೆ
ಮುಕ್ರ್ರಂಪಾಡಿ ಸುಭದ್ರಾ ಕಲಾ ಮಂದಿರದಲ್ಲಿ ಸಂಜೆ ೩ರಿಂದ ಮುಕ್ರಂಪಾಡಿ ಆಯುರ್ ಬ್ಯೂಟಿ ಸೆಂಟರ್ನಿಂದ ೧೨ನೇ ವರ್ಷದ ಸಂಭ್ರಮಾಚರಣೆ, ವಸಂತಲಕ್ಷ್ಮಿ ದಂಪತಿಯ ೨೫ನೇ ವಿವಾಹ ವಾರ್ಷಿಕೋತ್ಸವ, ಮುಂಬೈ, ಬೆಂಗಳೂರಿನಲ್ಲಿ ಇಂಟರ್ನ್ಯಾಷನಲ್ ಮೇಕಪ್ ತರಬೇತಿಯ ಅನುಭವ, ಗರ್ಭಿಣಿ ಮಹಿಳೆಯರಿಗೆ “ಮಡಿಲು” ತುಂಬುವ ಕಾರ್ಯಕ್ರಮ
ತೆಂಕಿಲ ಕೊಟ್ಟಿಬೆಟ್ಟು ಏಳ್ನಾಡುಗುತ್ತು ತರವಾಡು ಮನೆಯಲ್ಲಿ ರಾತ್ರಿ ೬ಕ್ಕೆ ಕೊಟ್ಟಿಬೆಟ್ಟು ಏಳ್ನಾಡುಗುತ್ತು ಮನೆಯಿಂದ ಭಂಡಾರ ತೆಗೆಯುವುದು, ಅನ್ನಸಂತರ್ಪಣೆ, ರಾತ್ರಿ ೮ರಿಂದ ಪಿಲಿಚಾಮುಂಡಿ, ವರ್ಣರ ಪಂಜುರ್ಲಿ ನೇಮ
ಬಲ್ನಾಡು ಗ್ರಾಮದ ಉಜ್ರುಪಾದೆ ಕಾರಣಿಕದ ಸ್ವಾಮಿ ಕೊರಗಜ್ಜ ಕ್ಷೇತ್ರದಲ್ಲಿ ಬೆಳಿಗ್ಗೆ ಗಣಹೋಮ, ಕಲಶಾಭಿಷೇಕ, ರಾತ್ರಿ ೭ಕ್ಕೆ ಶ್ರೀ ಕೊರಗಜ್ಜ ದೈವದ ವರ್ಷಾವಧಿ, ಹರಕೆ ನೇಮೋತ್ಸವ
ಇರ್ದೆ ವಿಷ್ಣುಮೂರ್ತಿ ದೇವಾಲಯ ಗೋಪಾಲಕ್ಷೇತ್ರ, ಪೂಮಾಣಿ -ಕಿನ್ನಿಮಾಣಿ, ರಾಜನ್ ದೈವಗಳ ಕದಿಕೆ ಚಾವಡಿಯಲ್ಲಿ ಸಂಜೆ ೪ರಿಂದ ಬಲಿವಾಡು, ಹಸಿರುವಾಣಿ ಶೇಖರಣೆ, ಉಗ್ರಾಣ ಮುಹೂರ್ತ, ರಣಮಂಗಲ ಶ್ರೀ ಸುಬ್ರಹ್ಮಣ್ಯ ದೈವಸ್ಥಾನದಿಂದ ದೈವಗಳ ಭಂಡಾರ ಆಗಮನ, ರಾತ್ರಿ ೮ರಿಂದ ಅತ್ತಾಳ ಪೂಜೆ
ಒಳಮೊಗ್ರು ಗ್ರಾಮದ ಶ್ರೀ ಕುಕ್ಕುಮುಗೇರು ಉಳ್ಳಾಕುಲು ದೈವಸ್ಥಾನದಲ್ಲಿ ಬೆಳಿಗ್ಗೆ ೯ಕ್ಕೆ ಉರ್ವದಲ್ಲಿ ಗಣಪತಿ ಹೋಮ, ಶುದ್ಧಿ ಕಲಶ, ತಂಬಿಲ ಸೇವೆ, ಸಂಜೆ ೬ಕ್ಕೆ ದುರ್ಗಾಪೂಜೆ, ರಾತ್ರಿ ೯ಕ್ಕೆ ಶ್ರೀ ಧೂಮಾವತಿ, ಪರಿವಾರ ದೈವಗಳ ಭಂಡಾರ ಇಳಿಸುವುದು, ೧೦.೩೦ಕ್ಕೆ ಪಂಜುರ್ಲಿ ದೈವದ ನೇಮ
ಕೋಡಿಂಬಾಡಿ ಅಶ್ವತ್ಥಕಟ್ಟೆ ಧರ್ಮಶ್ರೀ ಭಜನಾ ಮಂದಿರದ ವತಿಯಿಂದ ಬೆಳಿಗ್ಗೆ ಏಕಾಹ ಭಜನೆ, ಮಧ್ಯಾಹ್ನ ಅಶ್ವತ್ಥಕಟ್ಟೆಯಲ್ಲಿ ೭ನೇ ವರ್ಷದ ಸಾರ್ವಜನಿಕ ಶ್ರೀ ಅಶ್ವತ್ಥಪೂಜೆ, ಸಂಜೆ ೪೭ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ
ಅನಂತಾಡಿ ಶ್ರೀ ಉಳ್ಳಾಲ್ತಿ ವೈದ್ಯನಾಥೇಶ್ವರ, ಹೊಸಮ್ಮ ಶ್ರೀ ಬ್ರಹ್ಮಬೈದರ್ಕಳ ಗರಡಿ, ಅಣ್ಣಪ್ಪ ಪಂಜುರ್ಲಿ ಪರಿವಾರ ದೈವಗಳ ಕ್ಷೇತ್ರ ಬಾಕಿಲಗುತ್ತುವಿನಲ್ಲಿ ಬೆಳಿಗ್ಗೆ ೧೦ಕ್ಕೆ ಹೋಮ ಪಂಚಕಜ್ಜಾಯ, ಅಪರಾಹ್ನ ೪ಕ್ಕೆ ಶ್ರೀ ಅಣ್ಣಪ್ಪ ಪಂಜುರ್ಲಿ, ಕಲ್ಲುರ್ಟಿ ಪಂಜುರ್ಲಿ ಭಂಡಾರ ಇಳಿಯುವುದು, ಸಂಜೆ ೫.೩೦ಕ್ಕೆ ಶ್ರೀ ಅಣ್ಣಪ್ಪ ಪಂಜುರ್ಲಿ ಕೋಲ, ರಾತ್ರಿ ೮.೩೦ಕ್ಕೆ ಶ್ರೀ ಕಲ್ಲುರ್ಟಿ ಪಂಜುರ್ಲಿ ಕೋಲ, ೬ಕ್ಕೆ ಶ್ರೀ ಗುಳಿಗ ಕೋಲ
ನಿಡ್ಪಳ್ಳಿ ಮಂದಾರಗಿರಿ ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದಲ್ಲಿ ೮ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಶ್ರೀ ಸತ್ಯನಾರಾಯಣ ಪೂಜೆ, ಯಕ್ಷಗಾನ ಬಯಲಾಟ
ಮಿತ್ತೂರು ಫ್ರೆಂಡ್ಸ್ ಕ್ಲಬ್ ವತಿಯಿಂದ ಅಂತರ್ ಜಿಲ್ಲಾ ಕಬಡ್ಡಿ ಪಂದ್ಯಾಟ
ಬಡಗನ್ನೂರು ಗ್ರಾಮ ಪಟ್ಟೆ ತರವಾಡು ಮನೆಯಲ್ಲಿ ಸಂಜೆ ೭ರಿಂದ ದೇವತಾ ಪ್ರಾರ್ಥನೆ, ಆಚಾರ್ಯವರಣ, ರಾಕ್ಷೆಘ್ನ ಹೋಮ, ವಾಸ್ತು ಹೋಮ, ವಾಸ್ತು ಬಲಿ