ದಾಸವರೇಣ್ಯ ಪುರಂದರದಾಸರ ಆರಾಧನೆಯ ಸಂದರ್ಭದಲ್ಲಿ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ಸಂಭ್ರಮ

0

ಪುತ್ತೂರು: ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನ ಅಂಬಲಪಾಡಿ ಇವರ ಆಶ್ರಯದಲ್ಲಿ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ಕೇಂದ್ರ ಸಮಿತಿ (ರಿ)ಹುಬ್ಬಳ್ಳಿ ಜಿಲ್ಲಾ ಘಟಕ ಉಡುಪಿ ಇವರು ಸಂಘಟಿಸಿರುವ ದಾಸವರೇಣ್ಯ ಪುರಂದರ ದಾಸರ ಆರಾಧನೆಯ ಸಂದರ್ಭದಲ್ಲಿ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ಸಂಭ್ರಮ ಜ.28ರಂದು ನಡೆಯಿತು.

ಕಬಕ ಸರಕಾರಿ ಪ್ರೌಢಶಾಲೆ ಶಿಕ್ಷಕಿ,ಸಾಹಿತಿ ಡಾ. ಶಾಂತಾ ಪುತ್ತೂರು ಮುಖ್ಯ ಅತಿಥಿಯಾಗಿ ಮಾತನಾಡಿ, ಹರಿದಾಸರಲ್ಲಿ ಪುರಂದರದಾಸರು ಪ್ರಸಿದ್ಧರು. ಪುರಂದರದಾಸರ ಕೃತಿಗಳಲ್ಲಿ ಭಕ್ತಿ ಆಧ್ಯಾತ್ಮ ಅನುಭಾವಗಳ ಜೊತೆಗೆ ಸಾಮಾಜಿಕ ಪ್ರಜ್ಞೆ, ವಿಡಂಬನೆ ಕಾಣಬಹುದು ಇವರ ಕೀರ್ತನೆಗಳಲ್ಲಿ ಸಮಾಜದಲ್ಲಿ ಅಂದು ಕಂಡು ಬರುತ್ತಿದ್ದ ಅನೇಕ ಲೋಪದೋಷಗಳನ್ನು ಎತ್ತಿ ಹಿಡಿದು ಅವುಗಳನ್ನು ತಿದ್ದುವ ಕೆಲಸ ಮಾಡಿದ್ದಾರೆ ಇವರ ಕೀರ್ತನೆಗಳು ಸಾರ್ವಕಾಲಿಕ ಸಂದೇಶಗಳನ್ನು ಸಾರುತ್ತವೆ ಎಂದರು .

ಶಾಂತಾ ಪುತ್ತೂರುರವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ವಿದ್ವಾನ್ ಉಡುಪಿ ಜ್ಯೋತಿಷ್ಯ ಪಂಡಿತರು ರಘುಪತಿ ಭಟ್ ದಾಸರೆಂದರೆ ಪುರಂದರದಾಸರಯ್ಯ ಕುರಿತು ಉಪನ್ಯಾಸ ನೀಡಿದರು.

ಹಿರಿಯ ಚಿಂತಕ ಡಾ. ಸುರೇಶ ನೆಗಳಗುಳಿ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ, ಹುಬ್ಬಳ್ಳಿ ಜಿ.ಯು .ನಾಯಕ ಜಿಲ್ಲಾಧ್ಯಕ್ಷರು ಕ.ಚು.ಸಾ.ಪ , ಹಾಗೂ ಕ.ಚು. ಸಾ.ಪ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಜಯಾನಂದ ಪೆರಾಜೆ, ಡಾ.ವಾಣಿಶ್ರೀ ಕಾಸರಗೋಡು,ಗುರುರಾಜ್ ಕಾಸರಗೋಡು,ರಾಜು.ಎನ್.ಆಚಾರ್ಯ ಉಪಾಧ್ಯಕ್ಷ ಕ.ಚು.ಸಾ.ಪ.ಉಡುಪಿ,ಸೋಮಶೇಖರ ಶೆಟ್ಟಿ ಕ.ಚು.ಸಾ.ಪ.ಉಡುಪಿ. ಕವಯಿತ್ರಿ ಪ್ರೇಮಾ ಬಿರಾದಾರ ಉಪಸ್ಥಿತರಿದ್ದರು.ನಂತರ ನಡೆದ ಕವಿಗೋಷ್ಠಿಯಲ್ಲಿ ಹಿರಿಯ ಚಿಂತಕರಾದ ಸಾವಿತ್ರಿ ಮನೋಹರ್ ಅಧ್ಯಕ್ಷ ತೆಯಲ್ಲಿ ಕವಿಗೋಷ್ಠಿ ನಡೆಯಿತು.ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘ ದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

LEAVE A REPLY

Please enter your comment!
Please enter your name here