ಅಧ್ಯಕ್ಷರಾಗಿ ದೇವರಾಜ್ ನೂಜಿ, ಉಪಾಧ್ಯಕ್ಷರಾಗಿ ನವ್ಯಾ ಅನ್ಯಾಡಿ
ಕಾಣಿಯೂರು: ಕುದ್ಮಾರು ಸ. ಉ.ಹಿ.ಪ್ರಾ ಶಾಲೆಯ ನೂತನ ಎಸ್ ಡಿ ಎಂ ಸಿ ರಚನೆಯನ್ನು ಬೆಳಂದೂರು ಗ್ರಾಮ ಪಂಚಾಯತ್ ನಾಗರಿಕ ಸೌಲಭ್ಯ ಸಮಿತಿಯ ಅಧ್ಯಕ್ಷರು, ಗ್ರಾಮ ಪಂಚಾಯತ್ ಅಧ್ಯಕ್ಷೆ ತೇಜಾಕ್ಷಿ ಭಾಸ್ಕರ ಪೂಜಾರಿ ಕೊಡಂಗೆ ಇವರ ಅಧ್ಯಕ್ಷತೆಯಲ್ಲಿ ಹಾಗೂ ಗ್ರಾಮ ಪಂಚಾಯತ್ ಸದಸ್ಯರಾದ ಲೋಹಿತಾಕ್ಷ ಕೆಡೆಂಜಿಕಟ್ಟ, ಪ್ರವೀಣ್ ಕೆರೆನಾರು , ಹಾಗೂ ಸವಣೂರು ಸಿ.ಆರ್.ಪಿ ಜಯಂತ್ ವೈಯವರ ಉಪಸ್ಥಿತಿಯಲ್ಲಿ ನಡೆಸಲಾಯಿತು.
ನೂತನ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾಗಿ ದೇವರಾಜ್ ನೂಜಿ, ಉಪಾಧ್ಯಕ್ಷರಾಗಿ ನವ್ಯಾ ಅನ್ಯಾಡಿ ಆಯ್ಕೆಗೊಂಡರು. ಇಲಾಖಾ ನಿಯಮಾನುಸಾರ ಪ.ಜಾತಿ,ಪ ಪಂಗಡದಿಂದ ಲಲಿತಾ ಚಾಪಳ್ಳ, ವನಿತಾ , ಅಲ್ಪಸಂಖ್ಯಾತ ವರ್ಗದ ಪೋಷಕ ಪ್ರತಿನಿಧಿಗಳಾಗಿ ಮುಹಮ್ಮದ್ ಬಶೀರ್ ನೂಜೋಲ್ತಡ್ಕ, ಆತಿಕಾ ಜನತಾಗೃಹ , ಮಹಮ್ಮದ್ ರಫೀಕ್ ಕೂರ, ರಹಮತ್ ಜನತಾ ಗೃಹ, ಜಲೀಲ್ ಕೂರ, ಹಿಂದುಳಿದ ವರ್ಗದಿಂದ ರಮ್ಯಾ ಪಟ್ಟೆ, ದಿವ್ಯ ಕೆರೆನಾರು, ಗೀತಾ ಕೊಯಕ್ಕುಡೆ, ಪೂರ್ಣಿಮಾ ಪಳ್ಳತ್ತಾರು, ದಾಮೋದರ ನಾಕಿರಣ, ಆನಂದ ಗೌಡ ಸೌತೆಮಾರು, ರಮೇಶ್ ನಡುಮನೆ, ಯೋಗೀಶ ಬರೆಪ್ಪಾಡಿ, ಗಣೇಶ ಕೊಯಕ್ಕುಡೆ ಇವರು ಆಯ್ಕೆಗೊಂಡರು.
ನಾಮನಿರ್ದೇಶಿತ ಸದಸ್ಯರಾಗಿ ಗ್ರಾಮ ಪಂಚಾಯತ್ ಸದಸ್ಯೆ ತಾರಾ ಅನ್ಯಾಡಿ, ವಿದ್ಯಾರ್ಥಿ ಪ್ರತಿನಿಧಿ ಮಹಮ್ಮದ್ ತಾಜುದ್ದೀನ್, ಶಿಕ್ಷಕ ಪ್ರತಿನಿಧಿ ವೀರಾ ಡಿ ಸೋಜ, ಪದನಿಮಿತ್ತ ಸದಸ್ಯರಾಗಿ ಶಾಲಾ ಮುಖ್ಯಗುರು ಕುಶಾಲಪ್ಪ ಬಿ, ಅಂಗನವಾಡಿ ಕಾರ್ಯಕರ್ತೆ ವಸಂತಿ, ಆರೋಗ್ಯ ಕಾರ್ಯಕರ್ತೆ ಸುಮತಿ ಇವರನ್ನು ಆಯ್ಕೆ ಮಾಡಲಾಯಿತು.