




ಅರಿಯಡ್ಕ: ಶ್ರೀ ಕೊರಗ ತನಿಯ ಮತ್ತು ಗುಳಿಗ ದೈವಗಳ ಸನ್ನಿಧಿ ಕುತ್ಯಾಡಿ-ಪಾಪೆಮಜಲು ಇದರ 16 ನೇ ವರ್ಷದ ನೇಮೋತ್ಸವ ಫೆಬ್ರವರಿ 27 ರ ಗುರುವಾರ ನಡೆಯಲಿದ್ದು, ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಫೆ.3 ರಂದು ಶ್ರೀ ಕ್ಷೇತ್ರದಲ್ಲಿ ನಡೆಯಿತು.



ಈ ಸಂದರ್ಭದಲ್ಲಿ ಸಲಹಾ ಸಮಿತಿ ಗೌರವಾಧ್ಯಕ್ಷ ರಾಜೀವ ರೈ ಕುತ್ಯಾಡಿ, ಅಧ್ಯಕ್ಷ ಕುಂಞ ರಾಮ ಮಣಿಯಾಣಿ ಕುತ್ಯಾಡಿ, ಕಾರ್ಯದರ್ಶಿ ಸಂತೋಷ್ ಕುಲಾಲ್ ಕೌಡಿಚ್ಚಾರು,ಗೌರವ ಸಲಹೆಗಾರರಾದ, ದಿನೇಶ್ ಕುಮಾರ್ ಮರತ್ತ ಮೂಲೆ, ಮತ್ತು ಶೀನಪ್ಪ ರೈ ಕುತ್ಯಾಡಿ, ಸದಸ್ಯರಾದ ತಿಲಕ್ ರೈ ಕುತ್ಯಾಡಿ ಮತ್ತು ದಶರಥ ರೈ ಕುತ್ಯಾಡಿ, ಆಡಳಿತ ಸಮಿತಿ ಪ್ರಧಾನ ಅರ್ಚಕರಾದ ಮೋನಪ್ಪ ಮೊಗೇರ, ಗೌರವಾಧ್ಯಕ್ಷ ದಿನೇಶ್ ಕುಂಬ್ರ, ಅಧ್ಯಕ್ಷ ಚಿದಾನಂದ ಆಚಾರಿ ಮೂಲೆ, ಕಾರ್ಯದರ್ಶಿ ಸಂಜೀವ ಕುತ್ಯಾಡಿ, ಜತೆ ಕಾರ್ಯದರ್ಶಿ ಸುರೇಶ್ ಕುತ್ಯಾಡಿ, ಖಜಾಂಚಿ ಸತೀಶ್ ತೋಟದ ಮೂಲೆ, ಸದಸ್ಯರಾದ ಭವಿತ್, ಸುಂದರ ಕೆ.ಎಸ್, ಸಂದೀಪ್,ನಂದೇಶ್, ಜೀವನ್,ಧನ್ವಿತ್, ತೇಜಸ್, ತರುಣ್, ದೀಪಕ್, ದೀಪ್ತಿ, ಶಮಿತಾ, ಜ್ಯೋತಿಕಾ,ಅಶ್ಮಿ, ಸುಮಿತ್ರಾ, ಶಶಿಕಲಾ, ಉಮೇಶ್ ಸಂಪಾಜೆ, ಮಹಿಳಾ ಸಮಿತಿ ಅಧ್ಯಕ್ಷೆ ಮೀನಾಕ್ಷಿ ಕುತ್ಯಾಡಿ, ಕಾರ್ಯದರ್ಶಿ ಪವಿತ್ರ ಆಚಾರಿ ಮೂಲೆ, ಸದಸ್ಯರಾದ ರೋಹಿಣಿ, ಭವ್ಯ,ವನಜ,ರಮ್ಯ, ಸೌಮ್ಯ, ಸುಪ್ರಿಯಾ, ಮತ್ತೀತರರು ಉಪಸ್ಥಿತರಿದ್ದರು.












